Janataa24 NEWS DESK
Tejasvi Surya: ಲಕ್ಷದಿಂದ ಕೋಟಿಗೆ ಜಿಗಿದ ತೇಜಸ್ವಿ ಸೂರ್ಯ ಆಸ್ತಿ..!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬೆಂಗಳೂರು ದಕ್ಷಿಣ(Bangalore South)ಕ್ಷೇತ್ರದಿಂದ ಒಂದು ಬಾರಿ ಗೆದ್ದು ಈಗ ಅದೇ ಕ್ಷೇತ್ರದಲ್ಲಿ ನಿಂತು ಮತ್ತೆ ತಮ್ಮ ಗೆಲುವಿಗಾಗಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸರ್ಕಸ್ ನಡೆಸುತ್ತಿದ್ದಾರೆ.
ಕಳೆದ ವರುಷ ಮತದಾರರು ಸೂರ್ಯ ಅವರನ್ನಾ ಕೈ ಬಿಡದೇ ಪಾರ್ಲಿಮೆಂಟ್ಗೆ ಕಳಿಸಿ ಆರ್ಶಿವಾದಿಸಿದರು ಆದರೇ ಈ ಬಾರಿ ಜನತ ಜನಾರ್ಧನರ ತೀರ್ಪು ಏನು ಕೊಡುತ್ತಾರೇ..? ಕಾದು ನೋಡಬೇಕು. ಡಿ.4 ರಂದು ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ತೇಜಸ್ವಿ ಸೂರ್ಯ ಅವರು ತಮ್ಮ ನಾಮಪತ್ರ ಸಲ್ಲಿಸಿ ಉಮೇದುಗಾರಿಕೆಯಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.
ತೇಜಸ್ವಿ ಸೂರ್ಯ ನನ್ನ ಬಳಿ ಸ್ವಂತ ಮನೆ, ಕಾರು ಅಥವಾ ಬೈಕ್ ಹೊಂದಿಲ್ಲ ಎಂಬ ವಿಷಯವನ್ನು ನೋಟರಿಯಲ್ಲಿ ಪ್ರಕಟಣೆ ಮಾಡಿದ್ದಾರೆ. 2019 ರಲ್ಲಿ 13.46 ರೂ. ಲಕ್ಷ ರೂಪಾಯಿ ಬೆಲೆ ಬಾಳುವ ಆಸ್ತಿ ಹೊಂದಿದ್ದ ತೇಜಸ್ವಿ ಸೂರ್ಯ ಈ ಬಾರಿ 4.10 ಕೋಟಿ ರೂ. ಬೆಲೆ ಬಾಳುವ ಆಸ್ತಿಯ ಮಾಲೀಕರಾಗಿದ್ದಾರೆ.ಈ ಐದೇ ವರ್ಷದಲ್ಲಿ ಸೂರ್ಯ ಆಸ್ತಿಯಲ್ಲಿ ಒಟ್ಟು 30 ಪಟ್ಟು ಕಳೆದ ಬಾರಿಗಿಂತ ಈ ಬಾರಿ ಏರಿದೆ.
ಕಳೆದ ಲೋಕ ಸಮರದಲ್ಲಿ ಘೋಷಿಸಿದ್ದ ತನ್ನ ಆಸ್ತಿ ಇಂದಿನ ಚುನಾವಣೆ ಘೋಷಣೆಯ ಆಸ್ತಿಗಿಂತ ಅಧಿಕ ಪಟ್ಟು ಜಾಸ್ತಿ ಆಗಿದೆ. ಕೇವಲ ಐದೇ ವರ್ಷದ ಅವಧಿಯಲ್ಲಿ ಲಕ್ಷಾಧಿಪತಿಯಿಂದ ಕೋಟ್ಯಧಿಪತಿಗೆ ಸೂರ್ಯ ಜಿಗಿದಿದ್ದಾರೆ. ಹೀಗೆ ಸತತವಾಗಿ ಅಯ್ಕೆ ಮಾಡುತ್ತಾ ಹೋದರೆ ಇನ್ನೆಷ್ಟು ಬಂಡವಾಳಶಾಹಿಗಳು ಆಗಬಹುದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಪ್ರಶ್ನೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube