Document

Sumalatha :ಮಂಡ್ಯ ಲೋಕ ಸ್ವರ್ಧೆಯಿಂದ ಹಿಂದೆ ಸರಿದ ಸುಮಲತಾ, ಶ್ರೀಘ್ರದಲ್ಲೇ ಬಿಜೆಪಿ ಸೇರ್ಪಡೆ.

Janataa24 NEWS DESK

Sumalatha: ಮಂಡ್ಯ ಲೋಕಸಭೆ ಸ್ವರ್ಧೆಯಿಂದ ಹಿಂದೆ ಸರಿದ ಸುಮಲತಾ, ಶ್ರೀಘ್ರದಲ್ಲೇ ಬಿಜೆಪಿ ಸೇರ್ಪಡೆ.

Sumalatha Darshan NDA

ಬೆಂಗಳೂರು: ಬಾರಿ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕ ಸಮರ ಇದೀಗ ಒಂದು ರಾಜಕೀಯ ದಿಕ್ಕು ತೋರಿಸುತ್ತಿದೆ. ಹಾಲಿ ಸಂಸದೆ ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ಅವರ ಕುಟುಂಬವನ್ನೇ ಎದುರು ಹಾಕಿಕೊಂಡು ಚಿತ್ರನಟರಾದ ದರ್ಶನ್ (Darshan) ಯಶ್ ಇಬ್ಬರನ್ನೂ ಜೋಡೆತ್ತುಗಳಂತೆ ಚುನಾವಣಾ ಪ್ರಚಾರದಲ್ಲಿ ದುಡಿಸಿಕೊಂಡಿ ಮಂಡ್ಯದ ಸಕ್ಕರೆಗೆ ಬಾಯೊಡ್ಡಿದರು.

 

ಆದರೇ ಈ ಬಾರಿ ಈ ಬಾರಿ ಬೆಜೆಪಿ ಬಾಗಿಲಿನಲ್ಲಿ ಟಿಕೆಟ್ ಗಾಗಿ ಕಸರತ್ತು ನಡೆಸಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಬಂಡಾಯದ ಬಿಸಿ ಎಬ್ಬಿಸಿ ಬಿಜೆಪಿ ಜೆಡಿಎಸ್ ಅವರ ನಿದ್ದೆಗೆಡಿಸಿದ್ದು ಅಂತು ನಿಜ. ಹೀಗೆ ರಾಜಕೀಯ ತನ್ನ ಸ್ವರೂಪ ಬದಲಾದಂತೆ ಕಾಂಗ್ರೆಸ್ ಎದುರಿಸಲು ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ. ಟಿಕೆಟ್ ಹಂಚಿಕೆಯಲ್ಲಿ ಮಂಡ್ಯ ಜೆಡಿಎಸ್ ಪಾಲಾದ ಕಾರಣ ಬಿಜೆಪಿ ಟಿಕೆಟ್ ಸುಮಲತಾ ಅವರಿಗೆ ಟಿಕೆಟ್ ತಪ್ಪಿತು.

ಕೋಪಗೊಂಡ ಸುಮಲತಾ ಬಂಡಾಯದ ಬಿಸಿ ತಟ್ಟಿಸಿ ವರಿಷ್ಠರೇ ಮನೆಗೆ ಬಂದು ಅವರಲ್ಲಿ ಬಂಡಾಯದ ಬಿಸಿಗೆ ತಂಪೆರದು ಈಗ ಜನತದಳ ಬೆಂಬಲಿಸುವಂತೆ ಘೋಷಿಸುತ್ತಿದ್ದಾರೆ.ಮಂಡ್ಯ ತನ್ನ ರಾಜಕೀಯ ಭೂಮಿ ತಾನೂ ಇಲ್ಲಿಯ  ಇದ್ದು ದುಡಿದು ಮಡಿದು ನಂಬಿದವರ ಕೈ ಹಿಡಿಯುತ್ತೇನೆ ನೀವು ಕೊಟ್ಟ ಪ್ರೀತಿ ವಾತ್ಸಲ್ಯಕ್ಕೆ ನಾನು ಎಂದು ಋಣಿಯಾಗಿರುತ್ತೇನೆ. ಈ ಸಕ್ಕರೆ ನಾಡಿನ ಜನತೆಯೊಂದಿಗೆ ನಾನು ಎಂದು ಜೊತೆಯಾಗಿರುತ್ತೀನಿ.

 

ನಾನು ಗೌರವ ಇರದ ಕಡೆ ಹೋಗಲ್ಲ, ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ನೀವೆಲ್ಲಾ ನೋಡಿರುತ್ತೀರಿ, ಗೌರವ ಇಲ್ಲದ ಕಡೆ ನಾನ್ಯಾಕೆ ಹೋಗಲಿ ಎಂದು ತಿರುಗೇಟು ಕೊಟ್ಟ ಸುಮಲತಾ ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೇಳಿಬರುತ್ತಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ನರೇಂದ್ರ ಮೋದಿಯವರ ಮಾತಿಗೆ ತಲೆಬಾಗಿ ಇದೇ ತಿಂಗಳು 6 ನೇ ತಾರೀಖು ಬಿಜೆಪಿ ಸೇರುತ್ತೇನೆ ಯಾವುದೇ ಬಂಡಾಯ ಸ್ವರ್ಧೆ ಮಾಡುವುದಿಲ್ಲ ಎನ್ ಡಿ ಎ(NDA) ಮೈತ್ರಿ ಬೆಂಬಲಿಸುವೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

INC: ಲೋಕ ಸಮರ ಎದುರಿಸಲು 25 ಗ್ಯಾರಂಟಿ ಸಾರಿದ ಕಾಂಗ್ರೆಸ್ .

Document

Leave a Reply

Your email address will not be published. Required fields are marked *