Janataa24 NEWS DESK
Prajwal Revanna: ಪ್ರಜ್ವಲ್ ರೇವಣ್ಣಗೆ ಶಾಕ್ ಕೊಟ್ಟ ಹಾಸನ ಬಿಜೆಪಿ …!

ಹಾಸನ : ಲೋಕಸಭೆ ಚುನಾವಣೆ ಘೋಷಣೆಯಾದ ಕ್ಷಣದಿಂದ ರಂಗೇರಿರುವ ಅಖಾಂಡ. ಸೋಲು ಗೆಲುವುಗಳ ಲೆಕ್ಕಚಾರ ಸಮೀಕ್ಷೆಗಳ ಗುಟ್ಟು ಆಧಾರಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ.
ಹಾಸನದಲ್ಲಿ ಈ ಬಾರಿ ಗೆಲ್ಲೋರು ಯಾರು…? ಎಂದು ರಾಜಕೀಯ ವಲಯದಲ್ಲಿ ಪ್ರಶ್ನೆ ಮೂಡಿದೆ. ಖುದ್ದು ಸಿಎಂ ಸಿದ್ದರಾಮಯ್ಯನವರೇ ಕಳೆದ ಬಾರಿ ನಾನು ಹಾಸನಕ್ಕೆ ಹೋಗಿ ಪ್ರಜ್ವಲ್ ಅವರನ್ನಾ ಗೆಲ್ಲಿಸಿದ್ದೆ ಈ ಬಾರಿ ಹಾಸನದಲ್ಲಿ ಸೋಲಿಸುತ್ತೇನೆ ಎನ್ನುವ ಹೇಳಿಕೆ ಹಾಸನ ಜೆಡಿಎಸ್ ಗೆ ಶಾಕ್ ಕೊಟ್ಟಿದೆ.
ಇದಾದ ಬಳಿಕ ಈಗ ಮೈತ್ರಿ ಧರ್ಮ ಪಾಲಿಸಬೇಕಾಗಿದ್ದ ಬಿಜೆಪಿ ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ತಲೆದೂರಿವೆ. ಹಾಸನ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿರುವಾಗ ಕಾಂಗ್ರೆಸ್ ತೆಕ್ಕೆಗೆ ಹಾಸನ ಒಲಿಸಿಕೊಳ್ಳಲು ಕಾಂಗ್ರೆಸ್ ಸೆಣಸಾಡುತ್ತಿದೆ.ಮೈತ್ರಿಯಾದ ಬಳಿಕ ಹಾಸನದಲ್ಲಿ ಮುನಿಸುಗಳು ಮುನ್ನೆಲೆಗೆ ಬಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣೆ ಪ್ರಚಾರ ಮತ್ಯಾವುದಕ್ಕೂ ಬರದೇ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ಮಾಜಿ ಶಾಸಕ ಪ್ರೀತಂ ಗೌಡ ಶಾಕ್ ಕೊಟ್ಟಿದ್ದಾರೆ.
ತಮ್ಮದೇ ಆದ ವರ್ಚಸ್ಸು ಹೊಂದಿರುವ ಪ್ರೀತಂ ಗೌಡ(Preetham Gowda) ಅವರು ಹಾಸನದಲ್ಲಿ ಅವರ ಬುಟ್ಟಿಯಲ್ಲಿ ಸಾಕಷ್ಟು ಬಿಜೆಪಿ ಮತಗಳಿವೆ ಅವು ಈಗ ಮೈತ್ರಿಯಾದ ಕಾರಣ ಜನತದಳದ ಪ್ರಜ್ವಲ್ ಅವರಿಗೆ ಬರಬೇಕು ಆದರೇ ಕಾರ್ಯಕರ್ತರು ಮುಖಂಡರು ಶಾಸಕರೊಡನೆ ಹೊಂದಾಣಿಕೆಯಲ್ಲದ ಕಾರಣ ಅವು ವಿರೋಧ ಪಕ್ಷ ಕಾಂಗ್ರೆಸ್ ಅಭ್ಯರ್ಥಿ ಪಾಲಾದರೆ ತಮ್ಮ ಗೆಲುವು ಕಷ್ಟವಾಗುತ್ತದೆ.ಅವು ತಮ್ಮ ಪರವಾಗಿ ಓಟು ಮಾಡಿದರೇ ಗೆಲವು ಸುಲಭವಾಗುತ್ತದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾಲ್ ಅವರು ಅಭಿಪ್ರಾಯ ಪಟ್ಟರು.
ಸಮನ್ವಯ ಸಭೆ ಕರೆದು ದಳಪತಿಗಳು ಹಿಡಿತ ಸಾಧಿಸಲು ಯತ್ನಿಸಿದ್ದಾರೆ ಆದರೇ ಯಾವುದೇ ಪ್ರಯೋಜನವಿಲ್ಲದೇ ವಿಫಲವಾಗಿದೆ.ಬಂಡಾಳವೇಳದೇ ಒಳ ಒಳಗೆ ಸುಮ್ಮನಿದ್ದು ಕೊನೆ ವೇಳೆ ವಿರೋಧ ಪಕ್ಷದ ಅಭ್ಯರ್ಥಿ ಪರ ಓಟು(Vote) ಮಾಡಿದರೆ ಏನುವ ಆತಂಕದಲ್ಲಿ ದಳಪತಿಗಳು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಳಗೆ ಬೂದಿ ಮುಚ್ಚಿದ ಕೆಂಡದಂತೆ ಒಳ ಒಳಗೆ ಹೊಗೆಯಾಡುತ್ತಿರುವ ಮುನಿಸುಗಳು ಅಭ್ಯರ್ಥಿಯ ಹಿನ್ನಡೆಗೆ ಕಾರಣವಾಗಿವೆ.ಈ ಒಳ ಏಟು ಕಾಂಗ್ರೆಸ್ ಪಾಲಿಗೆ ಓಟು ಆಗಲಿವೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube