Document

Pavagada: 135 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಶಾಸಕ ಎಚ್ .ವಿ. ವೆಂಕಟೇಶ್.

JANATAA24 NEWS DESK 

 

Pavagada: 135 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಶಾಸಕ ಎಚ್ .ವಿ. ವೆಂಕಟೇಶ್.

Pavagada: Construction of bypass road at a cost of 135 crores by MLA H.V. Venkatesh.

ಪಾವಗಡ:  ತಾಲೂಕನ್ನು ಸರ್ವತೋಮುಖ ಅಭಿವೃದ್ಧಿ ಮಾಡೋದೇ ನನ್ನ ಗುರಿ ಎಂದು ಶಾಸಕರು ತುಮುಲ್ ಅಧ್ಯಕ್ಷರು ,ಡಿಸಿಸಿ ಬ್ಯಾಂಕ್ ನಿರ್ದೇಶಕರು ಆದ ಎಚ್.ವಿ.ವೆಂಕಟೇಶ್ ತಿಳಿಸಿದರು.

ಶುಕ್ರವಾರ ಅರಸೀಕೆರೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಬಳಿಕ ಚನ್ನ ಮಲ್ಲಿಕಾರ್ಜುನ ದೇವಸ್ಥಾನದ ಬಳಿ 10 ಲಕ್ಷ ಅನುದಾನದಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ 75 ಕೋಟಿ ಹಣ ಮಂಜೂರು ಮಾಡಿಸಿದ್ದು ಕಾಮಗಾರಿಗಳು ನಡೆಯುತ್ತಿವೆ, 135,ಕೋಟಿ ವೆಚ್ಚದಲ್ಲಿ ಬೈಪಾಸ್ ರೋಡಿಗೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು, ರೈತರು ಸಹಕಾರ ನೀಡಿ ಜಮೀನು ಬಿಟ್ಟುಕೊಡಬೇಕು ಉತ್ತಮ ದರವನ್ನ ನೀಡಲಾಗುತ್ತದೆ, ಒಂದು ವೇಳೆ ರಿಯಲ್ ಎಸ್ಟೇಟ್ ನೋರು ಏನಾದರೂ ಅಡ್ಡಿಪಡಿಸಿದರೆ, ಬೊಮ್ಮತನಹಳ್ಳಿ ರಸ್ತೆ ಕಡೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುವುದೆಂದು ಎಚ್ಚರಿಸಿದರು,ಮತ್ತು ನಾಗಲ ಮಡಿಕೆ ಅಂತ್ಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿ, ಪ್ರತಿ ಹಳ್ಳಿಗೆ ನಾನು ಭೇಟಿ ಮಾಡಲು ಸಾಧ್ಯವಿಲ್ಲ, ಬೆಂಗಳೂರು ತುಮಕೂರಿನಲ್ಲಿದ್ದು ಸಂಬಂಧಪಟ್ಟ ಇಲಾಖೆಗಳ ಜೊತೆ ಮಾತನಾಡಿ, ಹಣ ಮಂಜೂರು ಮಾಡಿಸಬೇಕಾಗುತ್ತದೆ, ನಮ್ಮ ತಂದೆಯ ಮಾರ್ಗದಲ್ಲಿ ನಾನು ಸಹ ನಡೆಯುತ್ತಿದ್ದು, ತಾಲೂಕನ್ನು ಸರ್ತೋಮುಖವಾಗಿ ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ತಿಳಿಸಿದರು.

 

ಈ ವೇಳೆ ಇ.ಓ.ಉತ್ತಮ್, ತುಮುಲ್ ನಿರ್ದೇಶಕರಾದ ಚಂದ್ರಶೇಖರ ರೆಡ್ಡಿ,ಗ್ಯಾರಂಟಿ ಅನುಷ್ಠಾನಗಳ ಅಧ್ಯಕ್ಷರಾದ ಕೆ. ಎಸ್. ಪಾಪಣ್ಣ,ದೊಡ್ಡ ನಾಗಪ್ಪ,ರಂಗೇಗೌಡ, ವೀರಭದ್ರಪ್ಪ,ಡಿ.ಮಂಜುನಾಥ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ ಕೃಷ್ಣ, ಪಿಡಿಒ ಕಿಶೋರ್ ಲಾಲ್ ಸಿಂಗ್ ,ದೊಡ್ಡ ಹನುಮಂತರಾಯಪ್ಪ,ಎಂ. ಎಲ್ .ಗೋಪಿ, ವಾಗೇಶ್,ವೀರೇಂದ್ರಪ್ಪ,ದೊಡ್ಡಣ್ಣ, ಬಸವರಾಜು,ಚಿಕ್ಕಣ್ಣ ಮತ್ತು ಪಿ ಡಿ ಓ ಗಳಾದ ಮಂಜುನಾಥ್ ,ಶ್ರೀ ರಾಂ ನಾಯ್ಕ ,ಮುದ್ದಣ್ಣ, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರಹಳ್ಳಿ,ಮತ್ತಿತರರು ಹಾಜರಿದ್ದರು. ಸದಸ್ಯರಾದ ಮಂಜುಳಾ ಮಂಜುನಾಥ್. ಗೋಪಾಲ್ ಕೃಷ್ಣ .ಮಾಜಿ ಅಧ್ಯಕ್ಷ ನಾಗರಾಜ್ . ಚಿಕ್ಕಣ್ಣ ಎಸ್. ಭಾಗ್ಯಮ್ಮ ಮಹೇಶ್. ಉಪಾಧ್ಯಕ್ಷ ಟುಮಕುಂಟೆ ಹನುಮಕ್ಕ

ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಲೋಕಾರ್ಪಣೆಗೆ ಆಗಮಿಸಿದ್ದ ಶಾಸಕರು ಸೇರಿದಂತೆ ಎಲ್ಲರನ್ನು ಪಂಚಾಯತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

 

ವರದಿ: ಇಮ್ರಾನ್ ಉಲ್ಲಾ.ಪಾವಗಡ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *