JANATAA24 NEWS DESK
Pavagada: ಭೀಕರ ರಸ್ತೆ ಅ*ಪ*ಘಾ*ತ ಬೈಕ್ ಸವಾರ ಸ್ಥಳದಲ್ಲೇ ಸಾ**.

ಪಾವಗಡ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಪಟ್ಟಣದ ರಾಜವಂತಿಯ ಎ.ಆರ್.ರೊಪ್ಪಗೇಟ್ ಬಳಿ ಇಂದು ನಡೆದಿದೆ.
ಪಟ್ಟಣದ ಭೋವಿ ಕಾಲೋನಿ ನಿವಾಸಿ ಕೃಷ್ಣಮೂರ್ತಿ ಎಂಬುವರ ಪುತ್ರ ಅಂಬರೀಶ್ (22) ಎಂಬಾತನೇ ಮೃತಪಟ್ಟಿರುವ ದುರ್ದೆವಿ ಯುವಕ. ಭಾಸ್ಕರ್ (30) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಟ್ಟಣದಿಂದ ಮಧುಗಿರಿ ನ್ಯಾಯಾಲಯ ಕಚೇರಿಗೆ ಕೆಲಸ ನಿಮಿತ್ತ ಅಂಬರೀಶ್ ಮತ್ತು ಭಾಸ್ಕರ್ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ರಾಜವಂತಿಯ ಎ.ಆರ್. ರೊಪ್ಪ ಗೇಟ್ ಬಳಿ ಜಲ್ಲಿ
ತುಂಬಿಕೊಂಡು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದಿರುವ ಟಿಪ್ಪರ್ ಲಾರಿ ಈ ಬೈಕ್‌ಗೆ ಅಪ್ಪಳಿಸಿದ ಸವಾರನ ಮೇಲೆ ಹರಿದಿದೆ.ನಂತರ ಟಿಪ್ಪರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಟಿಪ್ಪರ್ ಲಾರಿ ಕಲ್ಯಾಣದುರ್ಗದ ಶಾಸಕರಿಗೆಸೇರಿದ್ದು ಎಂದುಹೇಳಲಾಗಿದ್ದು, ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗೆ ಈ ಟಿಪ್ಪರ್ ಲಾರಿ ಜಲ್ಲಿ ಸಾಗಣೆ ಮಾಡುತ್ತಿತ್ತು ಎನ್ನಲಾಗಿದೆ.
ಅಪಘಾತ ಮಾಡಿ ಪರಾರಿಯಾದ ಟಿಪ್ಪರ್ ಲಾರಿ ಚಾಲಕನ ಧೋರಣೆ ಖಂಡಿಸಿ ಹಾಗೂ ಇದಕ್ಕೆ ಸ್ಥಳೀಯ ಪೊಲೀಸರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಮೃತನ ಸಂಬಂಧಿಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಪರಾರಿಯಾಗಿದ್ದ ಟಿಪರ್ ಲಾರಿಯನ್ನು ಹಿಡಿದು ವಾಪಸ್ ಕರೆ ತಂದರೆ ಪೊಲೀಸರು ಅಪಘಾತಕ್ಕೆ ಒಳಗಾಗಿ ಮೃತಪಟ್ಟ ಯುವಕನ ಕುಟುಂಬದವರ ಮೇಲೆ ದೌರ್ಜನ್ಯದ ಮಾತುಗಳನ್ನಾಡಿದ್ದಾರೆ ಎಂದು ಆಕ್ರೋಶ ಭರಿತರಾಗಿ ಸ್ಥಳೀಯರು ಪ್ರತಿಭಟನೆ ನಡೆಸಿ, ಪೊಲೀಸ ಈ ತೀವ್ರವಾಗಿ ಧೋರಣೆಯನ್ನು ಖಂಡಿಸಿದರು.
ಅಪಘಾತ ಮಾಡಿ ಯುವಕನ ಸಾವಿಗೆ ಕಾರಣವಾಗಿರುವ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತರ ವಿರುದ್ಧವೇ ದೌರ್ಜನ್ಯವೆಸಗುತ್ತಿರುವ ಪೊಲೀಸರು ಸಮಾಜಕಾಯುವರಕ್ಷಕರೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ನ್ಯಾಯ ಕೊಡಿಸುವ ಕೆಲಸ ಮಾಡುವ ಬದಲುದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಹಾಗೂ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸುದ್ದಿ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
ಆ ಸಂಬಂಧ ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.