Document

Pavagada: ತಾಲೂಕಿನ ಎಸ್.ಆರ್ ಪಾಳ್ಯದಲ್ಲಿ ಭಕ್ತಿಯ ಸಡಗರ–ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ವಿಗ್ರಹ ಧಾನ.

JANATAA24 NEWS DESK 

 

Pavagada: ತಾಲೂಕಿನ ಎಸ್.ಆರ್ ಪಾಳ್ಯದಲ್ಲಿ ಭಕ್ತಿಯ ಸಡಗರ–ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ವಿಗ್ರಹ ಧಾನ.

Pavagada: Devotion to Lord Ayyappa in S.R. Palya, taluk.

ಪಾವಗಡ: ತಾಲೂಕಿನ ಎಸ್.ಆರ್ ಪಾಳ್ಯ ಗ್ರಾಮದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಗ್ರಾಮದ ದಿ॥ ರಾಮಪ್ಪ ರವರ ಸುಪುತ್ರ ಪಾವಗಡ ಪಟ್ಟಣದ ಪಶುವೈದ್ಯಕೀಯ ಅಸ್ಪತ್ರೆಯ ಪಶುವೈದ್ಯಕೀಯ ಪರೀಕ್ಷಕರಾದ ಶ್ರೀ ತಿಪ್ಪೇಸ್ವಾಮಿ ರವರು ಅಯ್ಯಪ್ಪ ಸ್ವಾಮಿಯ ಭವ್ಯ ವಿಗ್ರಹವನ್ನು ಧಾನ ಮಾಡುವ ಮೂಲಕ ಭಕ್ತಿಪೂರ್ಣ ಸೇವೆ ಸಲ್ಲಿಸಿದ್ದಾರೆ.

 

ಅಯ್ಯಪ್ಪ ಸ್ವಾಮಿಯ ಪಡಿಪೂಜ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಶನಿವಾರ ಮತ್ತು ಭಾನುವಾರದಂದು ವಿಷೇಶ ಕಾರ್ಯಕ್ರಮ ನಡೆಸಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶ್ರದ್ಧಾ ಭಕ್ತಿಯಿಂದ ಸನ್ನಿಧಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ, ಕಲಾಸಾರಾಧನೆ ಮತ್ತು ಆಧಿವಾಸಗಳು, ಹೋಮ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ವೈಭವದಿಂದ ನೆರವೇರಿದವು. ಗ್ರಾಮಸ್ಥರು, ಹಿರಿಯರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

ವಿಗ್ರಹ ಧಾನ ಮಾಡಿದ ಶ್ರೀ ತಿಪ್ಪೇಸ್ವಾಮಿ ರವರು ಮಾತನಾಡಿ, “ಗ್ರಾಮದ ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವೆಯನ್ನು ಸಲ್ಲಿಸಿದ್ದೇನೆ. ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ” ಎಂದು ಹೇಳಿದರು.

 

ಗ್ರಾಮದ ಗುರುಸ್ವಾಮಿಗಳಾದ ಹೆಂಜರಪ್ಪ ರವರು ಶ್ರೀ ತಿಪ್ಪೇಸ್ವಾಮಿ ರವರ ಧಾರ್ಮಿಕ ಸೇವೆಯನ್ನು ಶ್ಲಾಘಿಸಿ, ಇಂತಹ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು. ವಿಗ್ರಹ ಪ್ರತಿಷ್ಠಾಪನೆಯಿಂದ ಸನ್ನಿಧಿಯ ಮಹತ್ವ ಹೆಚ್ಚಾಗಿದೆ ಎಂದು ತಿಳಿಸಿದರು.

 

ಈ ಸಂಧರ್ಭದಲ್ಲಿ ತಿಪ್ಪೇಸ್ವಾಮಿ ರವರ ಪತ್ನಿ ಉಷಾ ಮಕ್ಕಳಾದ ಸುಪ್ರಿಯ, ಶಿವಮಣಿ ಹಾಗೂ ಕುಟುಂಬದವರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಗಂಗಾಧರ, ಹುಚ್ಚಪ್ಪ, ಗುರು ಸ್ವಾಮಿ, ರಾಜು, ಸಿದ್ದೇಶ್, ಭಕ್ತಾಧಿಗಳು ಹಾಗೂ ಅಕ್ಕ ಪಕ್ಕ ಊರಿನ ಗ್ರಾಮಸ್ಥರು ಉಪಸ್ಥಿರಿದ್ದರು.

 

ವರದಿ: ಇಮ್ರಾನ್ ಉಲ್ಲಾ.ಪಾವಗಡ

Gubbi: ರೋಗ ಮತ್ತು ಕೀಟಗಳನ್ನು ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಿರಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *