JANATAA24 NEWS NEWS
Pavagada: ಗಡಿ ಭಾಗದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಶಾಸಕ ಎಚ್ .ವಿ. ವೆಂಕಟೇಶ್.

ಪಾವಗಡ: ಆಂಧ್ರಪ್ರದೇಶದಿಂದ ಸುತ್ತುವರಿದ ಪಾವಗಡ ತಾಲೂಕಿನಲ್ಲಿ ತೆಲುಗು ಮಾತನಾಡುವ ಜನರಿದ್ದರು ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ ಎಂದು ಶಾಸಕರಾದ ಎಚ್. ವಿ. ವೆಂಕಟೇಶ್ ತಿಳಿಸಿದರು.
ಶನಿವಾರ ತಾಲ್ಲೂಕು ಆಡಳಿತ, ವಿವಿಧ ಇಲಾಖೆಗಳು ಸಹಯೋಗದಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜಿಗೆ ಐದು ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು ಡಿಪ್ಲೋಮೋ ಕಾಲೇಜನ್ನು ಸಹ ಪ್ರಾರಂಭಿಸಲಾಗುತ್ತದೆ.
ತಿರುಮಣಿಯಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್ ಇಂದ ಪಾವಗಡ ತಾಲೂಕು ಪ್ರಪಂಚದ ಭೂಪಟದಲ್ಲಿ ರಾರಾಜಿಸುತ್ತಿದೆ, ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕು, ತುಮಕೂರಿನಲ್ಲಿ ಪಾವಗಡದ ವಿದ್ಯಾರ್ಥಿಗಳು ಅಭ್ಯಾಸ ಮಾಡುವವರಿಗೆ ವಸತಿ ನಿಲಯದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದೇನೆ ಮತ್ತು ಆರೋಗ್ಯಕ್ಕೆ ಹೆಚ್ಚು ವತ್ತು ನೀಡುತ್ತೇನೆ ಎಂದು ತಿಳಿಸಿದರು.
ಪ್ರಧಾನ ಭಾಷಣಕಾರರಾದ ಜ
ಜಂಗಮರಹಳ್ಳಿ ಮುದ್ದ ವೀರಪ್ಪ ಮಾತನಾಡಿ, ಕರ್ನಾಟಕವನ್ನು ಚಾಲುಕ್ಯರು, ಹೊಯ್ಸಳರು, ರಾಜ ಮಹಾರಾಜರು ಆಳಿ ಹೋದಂತ ನಾಡು ನಮ್ಮದಾಗಿದ್ದು, ಪಾವಗಡ ತಾಲೂಕಿನ ನಿಡಗಲ್ ನ್ನು ತಿರುಚನಾಪಳ್ಳಿಯ ಚೋಳರು ಆಳ್ವಿಕೆ ನಡೆಸಿದ್ದಾರೆ ಎಂದು ತಿಳಿಸಿದರು,
ಬಳಿಕ ಪತ್ರಿಕೋದ್ಯಮ ಸಮಾಜ ಸೇವೆ, ರಂಗಭೂಮಿ, ಇತರೆ ಕ್ಷೇತ್ರಗಳಲ್ಲಿನ 28 ಸಾಧಕರಿಗೆ ಮತ್ತು ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಪತ್ರಕರ್ತ ಸತ್ಯ ಲೋಕೇಶ್ ಪ್ರಧಾನ ಕಾರ್ಯದರ್ಶಿಯಾಗಿರುವ ಶಮಿ ವೃಕ್ಷ ಅಭಿವೃದ್ಧಿ ಟ್ರಸ್ಟಿಗೆ ಶಾಸಕರು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿದರು.
ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ತಹಶೀಲ್ದಾರ್ ವೈ ರವಿ,ತಾ.ಪಂ ಇಓ.ಬಿ ಕೆ ಉತ್ತಮ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟಾ ನರಸಿಂಹ ಮೂರ್ತಿ, ಬಿ ಇ ಓ ರೇಣುಕಮ್ಮ ಮಾತನಾಡಿದರು.
ಈ ವೇಳೆ ಪುರಸಭಾ ಅಧ್ಯಕ್ಷರಾದ ಸುದೇಶ್ ಬಾಬು, ಉಪಾಧ್ಯಕ್ಷೆ ಮಾಲೀನ್ ತಾಜ್, ಪುರಸಭಾ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ವೇಲುರಾಜ್ ಸದಸ್ಯರಾದ ಕಲ್ಪವೃಕ್ಷ ರವಿ, ಆರ್ ಎ ಹನುಮಂತರಾಯಪ್ಪ, ಮಹಮ್ಮದ್ ಇಮ್ರಾನ್,ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ, ಪೂಜಾರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಹೆಚ್ .ವಿ. ರವಿ ಕುಮರ್,ನಗರ ಸಿ.ಪಿ.ಐ. ಸುರೇಶ್, ಬಿ ಆರ್ ಸಿ ವೆಂಕಟೇಶ್, ಐಎ ನಾರಾಯಣಪ್ಪ , ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ಹಾಜರಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.