Document

Pavagada: ಗುಜ್ಜನಡು  ಗ್ರಾಮದಲ್ಲಿ ದೇಗುಲಗಳ ನಿರ್ಮಾಣಕ್ಕೆ ಮುಂದಾದ ಗ್ರಾಮಸ್ಥರ ಕಾರ್ಯಕ್ಕೆ ಕೆ.ಗೋಪಾಲಯ್ಯ ಮೆಚ್ಚುಗೆ.

JANATAA24 NEWS DESK 

 

Pavagada: ಗುಜ್ಜನಡು  ಗ್ರಾಮದಲ್ಲಿ ದೇಗುಲಗಳ ನಿರ್ಮಾಣಕ್ಕೆ ಮುಂದಾದ ಗ್ರಾಮಸ್ಥರ ಕಾರ್ಯಕ್ಕೆ ಕೆ.ಗೋಪಾಲಯ್ಯ ಮೆಚ್ಚುಗೆ.
Pavagada k . Gopalaiah praised the villagers for their work in constructing temples in Pavagada Gujjanadu village.
ಪಾವಗಡ: ಗುಜ್ಜನಡು ಸೇರಿದಂತೆ ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರೆಲ್ಲ ಸೇರಿ ಕೋಟ್ಯಂತರು ರೂ. ವೆಚ್ಚದ ಕಾರ್ಯಸಿದ್ದಿ ದೇಗುಲಗಳ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಸಚಿವ ಹಾಗೂ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ ಶಾಸಕ ಕೆ.ಗೋಪಾಲಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಬುಧವಾರ ತಾಲೂಕಿನ ಗುಜ್ಜನಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ 15ಕೋಟಿ ರು.ವೆಚ್ಚದ ಶ್ರೀ ವೀರಾಂಜನೇಸ್ವಾಮಿ,ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ಸಾಯಿನಾಥಸ್ವಾಮಿಯ ನೂತನ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಮಾತನಾಡಿದರು.

 

ಧರ್ಮ,ನಿಷ್ಟೆಯಿಂದ ಕಾರ್ಯ ಸಿದ್ದಿ,ನನ್ನ ಕ್ಷೇತ್ರದಲ್ಲಿ ನಾನು ಸಹ ಅಂಜನೇಯಸ್ವಾಮಿ ದೇವಸ್ಥಾನ ನಿರ್ಮಿಸಿದ್ದು ಅಪಾರ ಸಂಖ್ಯೆಯ ಭಕ್ತರು ಅಗಮಿಸುತ್ತಿದ್ದಾರೆ.ಗ್ರಾಮೀಣ ಜನತೆ ವ್ಯವಸಾಯದ ಜತೆಗೆ ಧಾರ್ಮಿಕ ಕಾರ್ಯಗಳ ಬಗ್ಗೆ ವಿಶೇಷ ಒತ್ತು ನೀಡಿದ್ದು,ಮುಂದಿನ ದಿನಗಳಲ್ಲಿ ದೇವಸ್ಥಾನದ ಪ್ರಾರಂಭೋತ್ಸದ ವೇಳೆ ಅಗಮಿಸಲಿದ್ದೇನೆ.ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಲಿದ್ದು,ಇಲ್ಲಿನ ನಗರ ಪ್ರದೇಶದಲ್ಲಿ ವಾಸವಾಗಿದ್ದ ನೌಕರರು, ಶ್ರೀಮಂತರು,ಉದ್ದಿಮೆಗಳು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದರೆ ,ಆ ಭಗವಂತ ನಿಮ್ಮನ್ನು ಕೈಹಿಡಿಯುವ ನಂಬಿಕೆ ಇದೆ.ದೇವಸ್ಥಾನದ ನಿರ್ಮಾಣಕ್ಕೆ ಈಗಾಗಲೇ ದಾನಿಗಳು ಸಹಕರಿಸುತ್ತಿರುವುದು ಸಂತಸ ತಂದಿದೆ ಎಂದರು.

ಶಿರಾ ಕ್ಷೇತ್ರದ ಮಾಜಿ ಶಾಸಕ ರಾಜೇಶ್‌ಗೌಡ,ಮಹಾ ಭಾರತದ ಸನ್ನಿವೇಶ ವಿವರಿಸಿ,ರಾಮಾಯಣದಲ್ಲಿ ಶ್ರೀ ಅಂಜನೇಯ ಅಮೃತಸ್ಥಾನ ಹೊಂದಿದ್ದರು.ಅವರ ಭಕ್ತಿ ಮೆಚ್ಚಿ ಶ್ರೀರಾಮ,ತನ್ನ ಕುಟುಂಬ ಸದಸ್ಯರನ್ನಾಗಿ ಒಪ್ಪಿದ್ದು ವಿಶೇಷ.ಅಂತಹ ನಿಷ್ಟೆ ಶ್ರದ್ದೆ ಹೊಂದಬೇಕಿದ್ದ,ಪಾವಗಡದ ಬಗ್ಗೆ ಅಪಾರ ಪ್ರೀತಿ ಇದೆ.ಸಂಸ್ಕಾರ ಅತಿ ಮುಖ್ಯ.ದೇವಸ್ಥಾನ ನಿರ್ಮಾಣಕ್ಕೆ ನಾಲ್ಕು ಗ್ರಾಮಗಳಲ್ಲಿ ಸಂಕಲ್ಪ ತೊಟ್ಟಿದ್ದು ವಿಶೇಷವಾಗಿದೆ.ಈ ದೇವಸ್ಥಾನ ಹೆಚ್ಚು ಖ್ಯಾತಿಗೊಳಿಸಲಿ ಎಂದು ಶುಭ ಹಾರೈಸಿದರು.

 

ರಾಜ್ಯ ಕ್ರೆಡಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಬಲರಾಮ್‌ ಮಾತನಾಡಿ,ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಖರ್ಗೆ ಅವರ ಒತ್ತಡ ನಡುವೆಯು ಭಾಗದ ರೈತರಿಗೆ ಅನುಕೂಲವಾಗುವ ಸಲುವಾಗಿ ಅಂದಿನ ಸಿಎಂ ಹಾಗೂ ಇಂಧನ ಸಚಿವರ ಜತೆ ಚರ್ಚಿಸಿ ಇಲ್ಲಿನ 13ಸಾವಿರ ಎಕರೆ ಪ್ರದೇಶದಲ್ಲಿ 2200ಕೆವಿ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾಧನೆಯ ಸೋಲಾರ್‌ ವಿದ್ಯುತ್‌ ನಿರ್ಮಾಣಕ್ಕೆ ಕಾರ್ಯ ಕೈಗೊಳ್ಳಲಾಗಿತ್ತು.ಇಂದಿನವರೆವಿಗೆ ಇಷ್ಟೆಲ್ಲಾ ಸಾಧನೆಗಳಿಗೆ ಇಲ್ಲಿನ ಗ್ರಾಮದೇವತೆ ಹಾಗೂ ಶ್ರೀ ವೀರಾಂಜನೇಯಸ್ವಾಮಿ ಕೃಪೆ ಎಂದು ಭಾವಿಸಿದ್ದೇನೆ.ಮುಂದಿನ ಸಂಕ್ರಾತಿಗೆ ದೇವಸ್ಥಾನ ಪ್ರಾರಂಭೋತ್ಸವವಾಗಬೇಕು.ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರದ ಮೇರೆಗೆ ಕಾರ್ಯನ್ಮುಖರಾಗಿದ್ದೇವೆ.ದೇವಸ್ಥಾನ ನಿರ್ಮಾಣಕ್ಕೆ ಜಮೀನು ನೀಡಿದ ಇಲ್ಲಿನ ದಾನಿಗಳಾದ ಪ್ರಕಾಶ್‌ಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಇತಿಹಾಸ ಸಂಶೋಧಕ ಸಣ್ಣನಾಗಪ್ಪ ಮಾತನಾಡಿ,ಗುಜ್ಜನಡು ಗ್ರಾಮದ ಐತಿಹಾಸಿಕ ಹಿನ್ನಲೆ,ರಾಜಮಹಾರಾಜರ ಅಳ್ವಿಕೆ,ಕಷ್ಟಕಾಲದಲ್ಲಿ ಶೀ ವೀರಾಂಜನೇಯಸ್ವಾಮಿಗೆ ವಿಶೇಷ ಪೂಜೆ ಹಾಗೂ ಕಾರ್ಯಸಿದ್ಧಿಯ ಉಲ್ಲೇಖನಗಳ ಬಗ್ಗೆ ವಿವರಿಸಿ, ಬ್ರಿಟಿಷರ ಅಳ್ವಿಕೆ ಕಾಲ ಘಟ್ಟ,ಶಿರಾ,ಚಿತ್ರದುರ್ಗ,ನಿಡಗಲ್ಲು ಚರಿತ್ರೆ ಹಾಗೂ ಹೈದರಾಲಿಯ ಇಲ್ಲಿಗೆ ಮೋಸದ ದಾಳಿಯ ಸನ್ನಿವೇಶ ವಿವರಿಸಿದರು.ಗ್ರಾಮದಲ್ಲಿ ಉನ್ನತಾಹುದ್ದೆ ಖ್ಯಾತ ವೈದ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅನೇಕ ಮಂದಿ ಸಾಧಕರಿರುವ ಬಗ್ಗೆ ತಿಳಿಸಿದರು.

 

ಮಾಜಿ ಜಿಪಂ ಸದಸ್ಯ ಕೋಟೆ ಪ್ರಭಾಕರ್‌ ಕೋಟ್ಯಂತರ ರು.ವೆಚ್ಚದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ.ಧಾರ್ಮಿಕತೆ,ಇತರೆ ಅನೇಕ ವಿಚಾರ ಬಗ್ಗೆ ತಿಳಿಸಿದರು.

 

ಸಮಾಜ ಸೇವಕಿ ಸಾಯಿ ಸುಮನ್ ಹನುಮಂತಪ್ಪ ಮಾತನಾಡಿ ಇಂದು ನಾವು ಕಾರ್ಯಕ್ರಮಕ್ಕೆ ಅಷ್ಟೇ ಸೇರಿಲ್ಲ ನಮ್ಮ ಗುಜುನೋಡು ಗ್ರಾಮದ ಭವಿಷ್ಯ ಬರೆಯಲು ಈ ಪುಣ್ಯಭೂಮಿಯಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಲು ಸೇರಿದ್ದೇವೆ ದೇವಸ್ಥಾನದ ಭೂಮಿ ಪೂಜೆ

ಒಂದು ರೀತಿಯಲ್ಲಿ ನಂಬಿಕೆ ಸಂಸ್ಕೃತಿ. ಸಂಸ್ಕಾರ. ಏಕತೆಯ ಗುರುತಾಗಿ. ಆತ್ಮಶಕ್ತಿಯ ಪ್ರತೀಕವಾಗಿದೆ. ಇಂದು ನಡೆದ ಈ ಭೂಮಿ ಪೂಜೆ ನಮ್ಮ ಊರಿನ ಅಭಿವೃದ್ಧಿ ಮಾತ್ರವಲ್ಲ ಮುಂದಿನ ಪೀಳಿಗೆಗೆ ಒಂದು ಪವಿತ್ರ ಪರಂಪರೆಯನ್ನು ಉಳಿಸಿಕೊಡುವ ಮಹಾಸಂಕಲ್ಪವಾಗಿದೆ ನಮ್ಮ ಗುಜನಾಡು ಗ್ರಾಮ ಶಾಂತಿಯ ಕೇಂದ್ರವಾಗಿ ಏಕತೆಗೆ ಉದಾಹರಣೆಯಾಗಿ ಭಕ್ತಿಯ ದೀಪ ಬೆಳಗಲಿ ಎಲ್ಲಾ ದೇವರ ಕೃಪೆ ಕಟಾಕ್ಷ ಈ ಪವಿತ್ರ ಗುಜನೋಡು ಕ್ಷೇತ್ರದ ಮೇಲೆ ಇರಲಿ ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ದಿವಂಗತ ಭೀಮಸೇವನೆರಾವ್ ಮಕ್ಕಳಾದ ಶ್ರೀ ಜೆಬಿ ರಾಮ ಶೇಷಪ್ಪನವರು ಶ್ರೀ ಜೆಪಿ ಕೃಷ್ಣಮೂರ್ತಿ ರವರು ಈಗಾಗಲೇ ಇದ್ದ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಕಡಿಮೆ ಬಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಭೂಮಿ ದೇವಸ್ಥಾನದ ಜಿನೋದಾರ ಕಾರ್ಯಕ್ಕೆ ದಾನವಾಗಿ ನೀಡಿರುತ್ತಾರೆ.

 

ಮಾಜಿ ಶಾಸಕ ಕೆ.ರಾಮಣ್ಣ,ವಕೀಲ ಎ.ಪಿ.ರಂಗನಾಥ್,ಪ್ರಕಾಶ್‌ ಸ್ವಾಮಿ ನಿವೃತ್ತ ಕಾರ್ಯ ನಿರ್ವಾಹಕ ಸಣ್ಣಮಲ್ಲಪ್ಪ,ವಿಜಯಬಾಸ್ಕರ್‌,ನಿವೃತ್ತ ಡಿಎಸ್‌ಪಿ ಎಲ್‌.ಹನುಮಂತರಾಯಪ್ಪ,ಶ್ರೀನಿವಾಸ್‌,ಸುಬ್ಬಣ್ಣರಾವ್‌,ನಾರಾಯಣ್‌ ಪ್ರಾ ಸಾದ್‌,ಡಾ.ಮಹೇಶ್‌,ಗೊಂಚಿಗಾರ ಹನುಮಂತರಾಯಪ್ಪ, ಬಿಂಧುಮಾದವ್ ರಾವ್‌,ಗುಜ್ಜನಡು ವಕೀಲ ಹನುಮಂತರಾಯಪ್ಪ,ಡಾ.ಕಿರಣ್,ತಾಪಂನ ಮೂಟೆ ಹನುಮಂತರಾಯಪ್ಪ,ರಾಮಣ್ಣ,ಮೂಡ್ಲಗಿರಿಯಪ್ಪ,ಸಾಯಿಬಾಬಾ ಭಕ್ತರಾದ ,ಮಾಜಿ ತಾಪಂ ಅಧ್ಯಕ್ಷ ಎಲ್‌.ಜಗನ್ನಾಥ್‌,ದಾಸೇಗೌಡ,ನರಸಿಂಹಮೂರ್ತಿ,ಡಾ.ಮಹೇಶ್,ನಿವೃತ್ತ ಸಬ್ ರಿಜಿಸ್ಟ್ರಾರ್ ರಾಮಣ್ಣ,ಜಿ.ಅನಿಲ್‌ಕುಮಾರ್‌,ಅರ್ಚಕ ಗೋಪಾಲಕೃಷ್ಣ ವಿಎ ಈರಣ್ಣ,ಪಿಡಿಒ ಮಂಜುನಾಥ್‌ ಹಾಗೂ ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳು ಹಾಗೂ ದೇವಾಲಯ ಸಮಿತಿ ವರ್ಗ,ಗುಜ್ಜನಡು,ಸಿ.ಎಚ್‌.ಪಾಳ್ಯ ಸಿ.ಆರ್‌.ಪಾಳ್ಯ ಹಾಗೂ ಎ.ಎಚ್‌.ಪಾಳ್ಯದ ಗ್ರಾಮಸ್ಥರು ಮತ್ತು ಅಪಾರ ಸಂಖ್ಯೆಯ ಭಕ್ತರಿದ್ದರು.

 

 

ವರದಿ: ಇಮ್ರಾನ್ ಉಲ್ಲಾ.ಪಾವಗಡ 


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *