Document

Pavagada: ಸೋಲಾರ್ ಪಾರ್ಕಿಗೆ ಭೂಮಿನೀಡಬೇಡಿ–ಸಂಶೋಧನಾ ವಿಜ್ಞಾನಿ ಕೆ ಆರ್ ಭಾರ್ಗವಿ.

JANATAA24 NEWS DESK 

 

 

Pavagada: ಸೋಲಾರ್ ಪಾರ್ಕಿಗೆ ಭೂಮಿನೀಡಬೇಡಿ–ಸಂಶೋಧನಾ ವಿಜ್ಞಾನಿ ಕೆ ಆರ್ ಭಾರ್ಗವಿ.

Pavagada: Do not give land for solar park – Research scientist K R Bhargavi.

ಪಾವಗಡ: ಪಾವಗಡ ಎಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ಅಭಿವೃದ್ಧಿ ವೇದಿಕೆ ಮತ್ತು ತಾಲೂಕು ಅಭಿವೃದ್ಧಿ ಚಿಂತನಾ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸ್ಟೇಟ್ ಪ್ಲಾನಿಂಗ್ ಕಮಿಟಿ ಬೋರ್ಡ್ ಸದಸ್ಯ ಡಾ. ಮಂಜುನಾಥ್ ಉದ್ಘಾಟಿಸಿದರು.

 

ಡಾ.ಮಂಜುನಾಥ್ ಮಾತನಾಡಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಬಜೆಟ್‌ನಲ್ಲಿ ಪ್ರದೇಶದ ಜ್ವಲಂತ ಸಮಸ್ಯೆಗಳನ್ನು ಒಳಗೊಳ್ಳಲು ಜಿಲ್ಲಾವ್ಯಾಪ್ತಿ ಅಧಿಕಾರಿಗಳಿಗೆ ಎರಡು–ಮೂರು ತಿಂಗಳುಗಳ ಹಿಂದೆ ಪತ್ರ ಬರೆದರೂ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಅವರು ವಿಷಾದ ವ್ಯಕ್ತಪಡಿಸಿದರು.

 

ತಾಲೂಕಿಗೆ ಬೇಕಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸಬೇಕು”

 

ತಾಲೂಕಿನ ರೈತರು ಮತ್ತು ಸಾಮಾನ್ಯ ಜನರಿಗೆ ನೇರವಾಗಿ ಪ್ರಯೋಜನಕಾರಿಯಾಗುವ ಯೋಜನೆಗಳ ಕುರಿತು ವಿವರವಾದ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಮತ್ತು ಸಂಬಂಧಿತ ಇಲಾಖೆಗಳ ಗಮನಕ್ಕೆ ತರಬೇಕೆಂಬುದು ಕಾರ್ಯಕ್ರಮದ ಉದ್ದೇಶವೆಂದರು.

 

ಕುರಿ ಸಾಕಾಣಿಕೆದಾರರಿಗೆ ಶೆಡ್ ನಿರ್ಮಾಣಕ್ಕೆ ಅನುದಾನ, ನಂತರ ಬ್ಯಾಂಕ್ ಸಾಲ ಮತ್ತು ಸಬ್ಸಿಡಿ ನೀಡುವ ಪ್ರಸ್ತುತ ಸರ್ಕಾರದ ಯೋಜನೆಗೆ ಪರ್ಯಾಯವಾಗಿ—

“ಸಹಸ್ರಾರು ಕುರಿ ಸಾಕಾಣಿಕೆದಾರರನ್ನು ನೇರವಾಗಿ ಗುರುತಿಸಿ ಶೆಡ್ ಬೇಡವೇ ಬೇಡ, ನೇರ ಅನುದಾನ ನೀಡಬಹುದಲ್ಲವೇ?” ಎಂದು ಪ್ರಶ್ನಿಸಿದರು.

 

ಬೆಳೆ ನಷ್ಟ ಪರಿಹಾರ ಕುರಿ–ಮೇಕೆಗಳಿಗೂ ಅನ್ವಯಿಸಬೇಕು

 

ಕೃಷಿ ಬೇಸಾಯಕ್ಕೆ ಮಾತ್ರವಲ್ಲ, ಕುರಿ–ಮೇಕೆಗಳಿಗೂ “ಬೆಳೆ ನಷ್ಟ ಪರಿಹಾರ” ಸಿಗುವ ವ್ಯವಸ್ಥೆ ಸರ್ಕಾರ ರೂಪಿಸಬೇಕು.

ನಿಗದಿ ಹಣ ನಿಗಮಿಸುವ ಮೂಲಕ ರೈತರ ಮೇಲೆ ಇರುವ ದಲ್ಲಾಳಿಗಳ ಹಾವಳಿಯನ್ನು ತಡೆಯಬಹುದು ಎಂದು ಅವರು ಸಲಹೆ ನೀಡಿದರು.

 

Pavagada: ಸೋಲಾರ್ ಘಟಕ—ಜಮೀನು ಕಳೆದುಕೊಂಡ ರೈತರ ಭವಿಷ್ಯದ ಚಿಂತೆ.

 

ನಂತರ ಮಾತನಾಡಿದ ಸಂಶೋಧನಾ ವಿಜ್ಞಾನಿ ಭಾರ್ಗವಿ ಎಸ್.ಆರ್. ಮಾತನಾಡಿ ,ಪಾವಗಡ ಪ್ರದೇಶ ದೇಶಕ್ಕೆ ಹೆಸರಾಗಿರುವ ಸೋಲಾರ್ ಪಾರ್ಕ್ ನಿರ್ಮಾಣದ ಹಿಂದೆ ನೀರಿನ ಕೊರತೆ ಒಂದು ಪ್ರಮುಖ ಕಾರಣವಾಯಿತು ಎಂದು ಹೇಳಿದರು.

 

“ಇಲ್ಲಿ ಶಾಶ್ವತ ನೀರು ಇದ್ದರೆ ಯಾವುದೇ ರೈತರು ಜಮೀನು ಸೋಲಾರ್‌ಗೆ ಕೊಡುವ ಸ್ಥಿತಿ ಇರಲಿಲ್ಲ. 30 ವರ್ಷದ ಲೀಸ್ ನಂತರ ಆ ಭೂಮಿಯನ್ನು ಪುನಃ ಕೃಷಿಗೆ ಬಳಸುವ ಮಾತೇ ಸಾಧ್ಯವಾಗದ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ” ಎಂದು ಹೇಳಿದರು.

 

ಭವಿಷ್ಯದಲ್ಲಿ ಮಕ್ಕಳಿಗೆ–ಮರಿ ಮಕ್ಕಳಿಗೂ ಜಮೀನು ಉಳಿಯದಿರುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅವರು ಖೇದದಿಂದ ಉಲ್ಲೇಖಿಸಿದರು. ಆದ್ದರಿಂದ ರೈತರು ಸೋಲಾರ್ ಪಾರ್ಕಿಗೆ ಜಮೀನು ನೀಡದೆ ಉಳಿಸಿಕೊಳ್ಳಬೇಕು ಮತ್ತು ಸರ್ಕಾರ ಈ ಭಾಗಕ್ಕೆ ನೀರಾವರಿ ಯೋಜನೆಗಳಿಗಾಗಿ ನೀರನ್ನು ಹರಿಸಿ, ಈ ಭಾಗದ ರೈತರ ಭೂಮಿಯನ್ನು ಉಳಿಸಬೇಕೆಂದು ಒತ್ತಾಯಿಸಿದರು.

 

 

 

 

 

ಈ ವೇಳೆ ಜನ ವಿಜ್ಞಾನ ಚಳುವಳಿಯ ಸಿ.ಯತಿರಾಜು ,ಹಿರಿಯ ವಕೀಲ ನಾಗೇಂದ್ರಪ್ಪ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆರ್ ,ಟಿ. ಖಾನ್ ಸಿ .ಐ. ಟಿ. ಯು. ರಾಮಾಂಜಿ ಅಂಜನಪ್ಪ,ಮತ್ತು ತಾಲ್ಲೂಕಿನ ವಿವಿಧ ರೈತ ಮುಖಂಡರು–ಚಿಂತಕರು ಭಾಗವಹಿಸಿದ್ದರು.

ವರದಿ: ಪಾವಗಡ ಇಮ್ರಾನ್ ಉಲ್ಲಾ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *