Document

Pavagada: ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಿಟ್ ವಿತರಣೆ

JANATAA24 NEWS DESK 

 

 

Pavagada: ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಿಟ್ ವಿತರಣೆ.

Pavagada

ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ, ಶ್ರೀ ಶಾರದಾದೇವಿ ದೃಷ್ಟಿ ನಿರ್ವಹಣಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ಹಾಗೂ ಚೆಷೈರ್ ಡಿಸೆಬಿಲಿಟಿ ಟ್ರಸ್ಟ್ (ರಿ), ಬೆಂಗಳೂರು ಇವರ ಸಹಯೋಗದಲ್ಲಿ ಮತ್ತು ಯೋಜನೆಯ ಪ್ರಾಯೋಜಕರಾದ ಅಜೂರ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೆರವಿನಿಂದ ವಿಕಲಚೇತನರಿಗೆ ಸ್ವಯಂ ಉದ್ಯೋಗ ವ್ಯಾಪಾರ ಕಿಟ್ ವಿತರಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಆಯ್ದ 24 ಮಂದಿ ವಿಕಲಚೇತನರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವಯಂ ಉದ್ಯೋಗ ವ್ಯಾಪಾರ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್ ವಹಿಸಿದ್ದರು. ಹಾಲಪ್ಪ ಪ್ರತಿಷ್ಠಾನ ತುಮಕೂರಿನ ಅಧ್ಯಕ್ಷರಾದ ಶ್ರೀ ಮುರಳೀಧರ ಹಾಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಚೆಷೈರ್ ಡಿಸೆಬಿಲಿಟಿ ಟ್ರಸ್ಟ್ ತುಮಕೂರಿನ ತಾಂತ್ರಿಕ ಸಲಹೆಗಾರರಾದ ಶ್ರೀಮತಿ ಗಾಯತ್ರಿ ರವೀಶ್, ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಚಂದ್ರಕಲಾ ಜಿ.ಆರ್., ಆಡಳಿತಾಧಿಕಾರಿಗಳಾದ ಶ್ರೀಮತಿ ಕೆ. ಶೋಭಾ, ಎಂ.ಆರ್.ಡಬ್ಲ್ಯೂ. ಶ್ರೀ ಮೈಲಾರಪ್ಪ ಹಾಗೂ ಚೆಷೈರ್ ಡಿಸೆಬಿಲಿಟಿ ಟ್ರಸ್ಟ್‌ನ ಶ್ರೀ ಮಾರುತಿ ಪ್ರಸನ್ನ ಮತ್ತು ಶ್ರೀ ಅವಿನಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಜನಾಧಿಕಾರಿ ಬಿ.ಕೆ. ನಟರಾಜ್ ನಿರೂಪಿಸಿದರು.

ಆಶೀರ್ವಚನ ನೀಡಿದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು, ಸ್ವಂತ ಉದ್ಯೋಗಕ್ಕಾಗಿ ನೀಡಲಾಗಿರುವ ಕಿಟ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಕಲಚೇತನರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು. ಭವಿಷ್ಯದಲ್ಲಿ ಫಲಾನುಭವಿಗಳ ಪ್ರಗತಿಯನ್ನು ಪರಿಶೀಲಿಸಿ ಉತ್ತಮ ಸಾಧನೆ ಮಾಡಿದವರಿಗೆ ಇನ್ನಷ್ಟು ಸಹಾಯ ಒದಗಿಸಲಾಗುವುದು ಎಂದರು.

ಕಳೆದ ಮೂರು ತಿಂಗಳಿನಿಂದ ಶ್ರೀ ಶಾರದಾದೇವಿ ದೃಷ್ಟಿ ನಿರ್ವಹಣಾ ಸಂಸ್ಥೆಯಲ್ಲಿ ಆಯ್ದ ವಿಕಲಚೇತನರಿಗೆ ತರಬೇತಿ ನೀಡಲಾಗಿದ್ದು, ತಜ್ಞರು ಮೌಲ್ಯಮಾಪನ ನಡೆಸಿ 24 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅವರ ಕುಟುಂಬ ಹಿನ್ನೆಲೆ, ಆರ್ಥಿಕ ಸ್ಥಿತಿ, ಕೌಶಲ್ಯ ಮತ್ತು ಆಸಕ್ತಿಗಳನ್ನು ಪರಿಗಣಿಸಿ ಕಿಟ್‌ಗಳನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ದಿನಸಿ ಪದಾರ್ಥಗಳ ಕಿಟ್, ಮೂರು ಹೊಲಿಗೆ ಯಂತ್ರಗಳು, ಮೋಟಾರ್ ಬೈಕ್ ಸರ್ವೀಸ್ ಕಿಟ್, ಆರು ರೆಫ್ರಿಜರೇಟರ್‌ಗಳು, ಫೋಟೋ ಪ್ರಿಂಟರ್ ಕಿಟ್, ಸಲೂನ್ ಕಿಟ್, ಬೈಕ್ ವಾಷಿಂಗ್ ಯಂತ್ರ, ಎರಡು ತಳ್ಳುವ ಗಾಡಿಗಳು ಹಾಗೂ ಪ್ಲಾಸ್ಟಿಕ್ ಹೂ ತಯಾರಿಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಉದ್ಘಾಟನಾ ಭಾಷಣ ಮಾಡಿದ ಮುರಳೀಧರ ಹಾಲಪ್ಪ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆದರೆ ವಿಕಲಚೇತನರ ಬದುಕಿಗೆ ಹೊಸ ದಾರಿ ಮೂಡುತ್ತದೆ ಎಂದು ಹೇಳಿದರು. ಸ್ವಾಮಿ ಜಪಾನಂದಜೀ ಅವರ ನೇತೃತ್ವದಲ್ಲಿ ವಿಕಲಚೇತನರು ಹಾಗೂ ದೃಷ್ಟಿದೋಷವುಳ್ಳವರಿಗೆ ನಿರಂತರವಾಗಿ ವಿವಿಧ ರೀತಿಯ ಸಹಾಯ ಒದಗಿಸಲಾಗುತ್ತಿರುವುದು ಶ್ಲಾಘನೀಯ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಗಾಯತ್ರಿ ರವೀಶ್ ಅವರು, ಸ್ವಯಂ ಉದ್ಯೋಗ ಕಿಟ್‌ಗಳ ವಿತರಣೆಯ ಉದ್ದೇಶ ವಿಕಲಚೇತನರು ತಮ್ಮ ಸ್ಥಳದಲ್ಲೇ ಆರ್ಥಿಕವಾಗಿ ಸದೃಢರಾಗುವುದು ಮತ್ತು ಇತರರಿಗೆ ಮಾದರಿಯಾಗುವುದಾಗಿದೆ ಎಂದು ತಿಳಿಸಿದರು. ಜೊತೆಗೆ ಈ ಯೋಜನೆಗೆ ಸಹಕಾರ ನೀಡಿದ ಸ್ವಾಮಿ ಜಪಾನಂದಜೀ ಮಹಾರಾಜ್ ಹಾಗೂ ಪ್ರಾಯೋಜಕರಾದ ಅಜೂರ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ಮುಂದೆಯೂ ವಿಕಲಚೇತನರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *