Document

Pavagada: ಹೆಚ್ಚು ಹೆಚ್ಚು ಹೈನುಗಾರಿಕೆಗೆ ಉತ್ತೇಜನ ನೀಡಬೇಕು–ತುಮುಲ್ ಅದ್ಯಕ್ಷ ಹೆಚ್.ವಿ.ವೆಂಕಟೇಶ್

JANATAA24 NEWS DESK 

 

 

Pavagada: ಹೆಚ್ಚು ಹೆಚ್ಚು ಹೈನುಗಾರಿಕೆಗೆ ಉತ್ತೇಜನ ನೀಡಬೇಕು–ತುಮುಲ್ ಅದ್ಯಕ್ಷ ಹೆಚ್.ವಿ.ವೆಂಕಟೇಶ್.

Pavagada: Dairy farming should be encouraged more and more – Tumul President H.V. Venkatesh
ಪಾವಗಡ : ರೈತರು ಹೆಚ್ಚು ಹೆಚ್ಚು ಹಸುಗಳನ್ನು ಸಾಕಿ ಹೆಚ್ಚು ಹಾಲು ಉತ್ಪಾದನೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ತಿಳಿಸಿದರು.

 

ಪಾವಗಡ ಪಟ್ಟಣದ ಹೊರವಲದ ಶಿರಾ ರಸ್ತೆಯಲ್ಲಿರುವ ತುಮುಲ್ ಉಪಕೇಂದ್ರದಲ್ಲಿ ತುಮಕೂರು ಸಹಕಾರಿ ಹಾಲು ಉದ್ಪಾದಕರ ಸಂಘಗಳ ಒಕ್ಕೂಟ, ಸದಸ್ಯರು,ನೌಕರರ ಕಲ್ಯಾಣ ಟ್ರಸ್ಟ್ ಮತ್ತು ವೈಧ್ಯಕೀಯ ಇಲಾಖೆ ಪಾವಗಡ ಹಾಲು ಉತ್ಪಾದಕರ ಸಂಘಗಳ ಸಂಘದ ಸಂಯುಕ್ತಾ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಮತ್ತು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

 

ಕ್ಯಾನಿಗೆ ಹಾಲುಯ್ಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನದಾಗಿ ಶ್ರಮಿಸುತ್ತಿದ್ದೇನೆ, ಕಾರ್ಮಿಕ ಇಲಾಖೆಯಿಂದ ವಸತಿ ಶಾಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುರಾರ್ಜಿ ವಸತಿ ಶಾಲೆಯನ್ನು ಮಂಜೂರು ಮಾಡಿಸಿದ್ದೇನೆ.

 

ಹಲವು ಗ್ರಾಮಗಳಲ್ಲಿ ಸಮುದಾಯ ಭವನ, ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ, ತುಂಗಭದ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಪ್ರತಿ ಹಳ್ಳಿಗೂ ಪ್ರತಿಭಟನೆಗೂ ಒದಗಿಸಲಾಗಿದೆ, ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಲಾಗುವುದು,

ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣ ರವರೊಂದಿಗೆ ಚರ್ಚಿಸಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಿಗೆ ಹೈನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇನೆ,

 

ಬಡವರ ಆರ್ಥಿಕ ಜೀವನ ಮಟ್ಟ ಸುಧಾರಣೆಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಅದರಲ್ಲಿ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿ ಪ್ರೋತ್ಸಾಹ ನೀಡುತ್ತಿದೆ. ಉತ್ತಮ ತಳಿಗಳ ಅಭಿವದ್ಧಿ ಪಡಿಸುವ ನಿಟ್ಟಿನಲ್ಲಿ ಹಸುಗಳ ಸಾಕುವ ರೈತರಿಗೆ ಹುರಿದುಂಬಿಸಲು ಉತ್ತಮ ರಾಸುಗಳಿಗೆ ಹಾಗೂ ಕರುಗಳಿಗೆ ಬಹುಮಾಣ ವಿತರಣೆ ಮಾಡುತ್ತಿದೆ. ರೈತರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

 

 

ತುಮುಲ್ ಟ್ರಸ್ಟ್ ವತಿಯಿಂದ ವಿವಿಧ ರೈತ ಪಲಾನುಭವಿಗಳಿಗೆ ಸಾಂಕೇತಿಕವಾಗಿ ಸುಮಾರು 20 ಲಕ್ಷ ಚೆಕ್ ವಿತರಿಸಲಾಯಿತು.

 

 

ಈ ಸಂದರ್ಭದಲ್ಲಿ ತುಮುಲ್ ನಿರ್ಧೇಶಕ ಚಂದ್ರಶೇಖರ್ ರೆಡ್ಡಿ, ತಿಪಟೂರು ನಿರ್ಧೇಶಕರಾದ ಪ್ರಕಾಶ್, ಮಧುಗಿರಿ ನಾಗೇಶ್ ಬಾಬು, ಚಿಕ್ಕನಾಯಕನಹಳ್ಳಿ ಶಿವಪ್ರಕಾಶ್, ತುಮುಲ್ ಎಂ.ಡಿ ಶ್ರೀನಿವಾಸ್, ವ್ಯವಸ್ಥಾಪಕ ಶ್ರೀನಿವಾಸ್, ಡಿಸಿಸಿ ನಿರ್ಧೇಶಕ ಮೂರ್ತಿ, ಪುರಸಭೆ ಮಾಜಿ ಸದಸ್ಯ ರವಿ, ಹನುಮಂತರಾಯಪ್ಪ, ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ,ಎನ್.ಆರ್ ಅಶ್ವಥ್, ಬಿಂದು ಮಾಧವರಾವ್, ವಿಸ್ತೀರ್ಣಾಧಿಕಾರಿಗಳಾದ ಸುನಿತ, ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಹೊರಕೇರಪ್ಪ, ರಾಮಾಂಜಿನೇಯುಲು, ಗುತ್ತಿಗೆದಾರ ಹನುಮಂತರಾಯಪ್ಪ ಸೇರಿದಂತೆ ಹಾಲು ಉತ್ಪಾದಕ ಸಹಕಾರ ಸಂಘಗಳ ಪದಾದಿಕಾರಿಗಳು, ರೈತರು ಹಾಜರಿದ್ದರು.

 

 

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *