JANATAA24 NEWS DESK
Pavagada: ನಿಡಗಲ್ ಕಷ್ಟಹರ ಪಾರ್ಶ್ವನಾಥ ಸ್ವಾಮಿ ಅಭಿವೃದ್ಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಸಚಿವ ಡಿ. ಸುಧಾಕರ್ ಭರವಸೆ.

ಪಾವಗಡ: 1300 ವರ್ಷದ ಇತಿಹಾಸ ಹೊಂದಿರುವ ಪಾವಗಡ ತಾಲೂಕಿನ ಶ್ರೀ ನಿಡಗಲ್ ಕಷ್ಟಹರ ಪಾರ್ಶ್ವನಾಥ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ರೂ. ದೇಣಿಗೆ ನೀಡುವುದಾಗಿ ಸಾಂಖ್ಯಿಕ ಯೋಜನಾ ಆಯೋಗದ ಸಚಿವ ಡಿ. ಸುಧಾಕರ್ ಅವರು ಭರವಸೆ ನೀಡಿದರು.
ಶ್ರೀ ನಿಡಗಲ್ ಕಷ್ಟಹರ ಪಾರ್ಶ್ವನಾಥ ಸ್ವಾಮಿಯ 39ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, 12ನೇ ಶತಮಾನದ ಐತಿಹಾಸಿಕ ದೇವಾಲಯಗಳು ಈ ಭಾಗದಲ್ಲಿ ಇರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಇಂತಹ ದೇವಾಲಯಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಪಟ್ಟಿ ತಯಾರಿಸಿ ನೀಡಿದರೆ, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಅವರನ್ನು ತಮ್ಮ ತಮ್ಮನಂತೆ ಕಾಣುವುದಾಗಿ ಹೇಳಿದ ಅವರು, ಶಾಸಕರ ತಂದೆ ವೆಂಕಟರಮಣಪ್ಪ ಅವರು ಈ ಭಾಗದ ಜನರಿಗಾಗಿ ಹಗಲು-ರಾತ್ರಿ ದುಡಿದ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದರು. ಜನರು ಅವಕಾಶ ನೀಡಿದರೆ, ಶಾಸಕರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಸ್ಥಳೀಯ ಶಾಸಕ ಹೆಚ್.ವಿ. ವೆಂಕಟೇಶ್ ಮಾತನಾಡಿ, ಐತಿಹಾಸಿಕ ನಿಡಗಲ್ ಬೆಟ್ಟದಲ್ಲಿ ಅನೇಕ ದೇವಾಲಯಗಳು ಇರುವುದರಿಂದ ಇದು ಪುಣ್ಯ ಕ್ಷೇತ್ರವಾಗಿದೆ ಎಂದು ಹೇಳಿದರು. ಆದರೆ ಕೆಲವರು ನಿಧಿಯ ಆಸೆಗೆ ದೇವಾಲಯಗಳಿಗೆ ಹಾನಿ ಮಾಡುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು. ಈ ಭಾಗದ ಅಭಿವೃದ್ಧಿಗೆ ದೇವಾಲಯಗಳು, ರಸ್ತೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ತಮ್ಮ ತಂದೆಯವರು ಕಲ್ಪಿಸಿದ್ದರು ಎಂದು ನೆನಪಿಸಿದರು.
ಪಾರ್ಶ್ವನಾಥ ಸ್ವಾಮಿ ದೇವಾಲಯದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದಾಗಿ ಹಾಗೂ ದೇವಾಲಯದ ಪಕ್ಕದಲ್ಲಿರುವ ಜಾಗವನ್ನು ಗುರುತಿಸಿ ದೇವಾಲಯದ ಹೆಸರಿಗೆ ನೋಂದಣಿ ಮಾಡಿಕೊಡುವ ಜವಾಬ್ದಾರಿಯನ್ನು ತಾವು ವಹಿಸುವುದಾಗಿ ಶಾಸಕರು ಘೋಷಿಸಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಚಾಲುಕ್ ಕೀರ್ತಿ ಪಂಡಿತಾಚಾರ್ಯವಯ್ಯ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಪಿ. ಸುಂದರಾಜಯ್ಯ, ಜಯಣ್ಣ ಆರ್.ಬಿ., ಅಜಿತ್ ಕುಮಾರ್ (ರಂಗಸಮುದ್ರ), ಬ್ರಹ್ಮದೇವಯ್ಯ, ಶ್ರೀಮತಿ ಪದ್ಮಿನಿ ಪದ್ಮರಾಜ್, ಶ್ರೀಮತಿ ಜಯಶ್ರೀ ಡಿ. ಜೈನ್, ಅಂಬಣ್ಣ, ಬಾಹುಬಲಿ ಸೇರಿದಂತೆ ನೂರಾರು ಜೈನ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.