JANATAA24 NEWS DESK
Pavagada: ಬೆಸ್ಕಾಂ ವಾಣಿಜ್ಯ ಮೀಟರ್ ಹಗರಣ? ಹಣ ನೀಡಿದರೆ ಕ್ಷಣದಲ್ಲೇ ಮೀಟರ್ ಅಳವಡಿಕೆ ಎಂದು ಶ್ರಿಧರ್ ಆರೋಪಿಸಿದ್ದಾರೆ.
Pavagada: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಪಾವಗಡ: ಪಟ್ಟಣದಲ್ಲಿ ಬೆಸ್ಕಾಂ ಇಲಾಖೆಯ ವಾಣಿಜ್ಯ ಮೀಟರ್ ಅಳವಡಿಕೆ ಸಂಬಂಧ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು, ಹಣ ನೀಡಿ ಕ್ಷಣದಲ್ಲೇ ಮೀಟರ್ ಅಳವಡಿಸಿ ಕೊಡುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಸಮಾಧಾನಕರ ವಿಚಾರವೆಂದರೆ, ಇತ್ತೀಚೆಗೆ ಹಲವು ಹಗರಣಗಳು ಬಯಲಿಗೆ ಬಂದ್ರೂ, ಇಲಾಖೆಯು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದೆ ಇರುವುದೇ ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಟಿ.ಸಿ. ಕಳವು ಪ್ರಕರಣ ಕೂಡ ವಿಳಂಬಕ್ಕೆ ತುರ್ತು ಕ್ರಮ ಯಾಕಿಲ್ಲ?
ಈ ಹಿಂದೆ ಟಿ.ಸಿ.ಗಳ ಕಳವು ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಹೊರಬಿದ್ದರೂ ಸಹ, ಇದುವರೆಗೆ ಯಾವೊಬ್ಬ ಅಧಿಕಾರಿಯ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಪ್ರಕರಣಗಳ ತನಿಖೆ, ಹೊಣೆಗಾರಿಕೆ ಮತ್ತು ಕಾರ್ಯಾಚರಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
Pavagada: ಸಾಮಾನ್ಯರಿಗೆ ಕಾನೂನಿನ ಅಡ್ಡಿ.! ಉಳ್ಳವರಿಗೆ ಸುಲಭವಾದ ಮೀಟರ್ ಅಳವಡಿಕೆ?
ಸಾಮಾನ್ಯ ನಾಗರಿಕರು ವಾಣಿಜ್ಯ ಮೀಟರ್ ಅಳವಡಿಸಿಕೊಳ್ಳಲು ಅನೇಕ ಕಠಿಣ ಕಾನೂನುಗಳು, ಪ್ರಕ್ರಿಯೆಗಳು ಎದುರಿಸಬೇಕಾದರೆ,
ಪಾವಗಡ ಪಟ್ಟಣದ ಫುಟ್ಪಾತ್‌ಗಳು, ಚರಂಡಿಗಳ ಮೇಲೆ ಇರುವ ಪೆಟ್ಟಿಗೆ ಅಂಗಡಿಗಳಿಗೆ ಸುಲಭವಾಗಿ ಮೀಟರ್‌ಗಳನ್ನು ನೀಡಿರುವುದೇ ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಹಣ ನೀಡಿದರೆ ಪಿಪಿ ನಂಬರ್‌ಗಳನ್ನು ತಂದು ಯಾರಿಗಾದರೂ ಮೀಟರ್ ಅಳವಡಿಸುವ ದೊಡ್ಡಮಟ್ಟದ ದಂಧೆ ನಡೆಯುತ್ತಿದೆ ಎಂದು ಆರೋಪಗಳು ಕೇಳಿಬಂದಿವೆ. ಇದರಲ್ಲಿ ಕೆಲವು ಬೆಸ್ಕಾಂ ಸಿಬ್ಬಂದಿಯೇ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆಸ್ಕಾಂ ಸಿಬ್ಬಂದಿಯೇ ನಿಯಮ ಉಲ್ಲಂಘಿಸಿದ ದಾಖಲೆ./
ಬೆಸ್ಕಾಂನಲ್ಲಿ ಕೆಲಸ ಮಾಡುವ ಕೆಲವರೇ ತಮ್ಮ ವೈಯಕ್ತಿಕ ಕಟ್ಟಡಗಳಿಗೆ ಅನುಮಾನಾಸ್ಪದ ಪಿಪಿ ನಂಬರ್‌ಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವ ದಾಖಲೆಗಳೂ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸುತ್ತವೆ.
ಹಿಂದೆಯೂ ಮೀಟರ್ ಹಗರಣ ಬಯಲಾಯಿತಾದರೂ ಕ್ರಮವಿಲ್ಲ.
ತಾಲೂಕಿನ ಅನೇಕ ಕಡೆಗಳಲ್ಲಿ ಮೀಟರ್ ಹಗರಣಗಳು ಈಗಾಗಲೇ ಬೆಳಕಿಗೆ ಬಂದಿದ್ದರೂ, ಇದುವರೆಗೆ ಯಾವುದೇ ಗಂಭೀರ ಕ್ರಮ ಕೈಗೊಳ್ಳದಿರುವುದರಿಂದ ಮೇಲಧಿಕಾರಿಗಳ ನಿಷ್ಠೆ ಮತ್ತು ಕಾರ್ಯಪದ್ಧತಿ ಪ್ರಶ್ನೆಗೊಂಡಿದೆ.
“ಕ್ರಮ ಕೈಗೊಳ್ಳದಿದ್ದರೆ ಗೌರವ ಕಳೆದುಕೊಂಡಂತೆಯೇ” — ಸಾರ್ವಜನಿಕರ ಆರೋಪ
ಬೆಸ್ಕಾಂ ಇಲಾಖೆಯಲ್ಲಿ ವಾರ-ವಾರ ಇಂತಹ ಪ್ರಕರಣಗಳು ಬಯಲಾಗುತ್ತಿದ್ದರೂ, ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರಲ್ಲಿ ಇಲಾಖೆಯ ಮೇಲಿರುವ ಗೌರವ ಕಳೆಯಬಹುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.