Document

Pavagada: SC/ST ಕಾಯ್ದೆಯಡಿ ಮತ್ತೊಂದು ಪ್ರಕರಣ-ಸ್ಥಳದ ವಿಚಾರಕ್ಕೆ ಬಿತ್ತು ಅಟ್ರಾಸಿಟಿ ಕೇಸ್.

JANATAA24 NEWS DESK 

 

 

Pavagada: SC/ST ಕಾಯ್ದೆಯಡಿ ಮತ್ತೊಂದು ಪ್ರಕರಣ-ಸ್ಥಳದ ವಿಚಾರಕ್ಕೆ ಬಿತ್ತು ಅಟ್ರಾಸಿಟಿ ಕೇಸ್.

Pavagada: SC/ST ಕಾಯ್ದೆಯಡಿ ಮತ್ತೊಂದು ಪ್ರಕರಣ-ಸ್ಥಳದ ವಿಚಾರಕ್ಕೆ ಬಿತ್ತು ಅಟ್ರಾಸಿಟಿ ಕೇಸ್.

Pavagada: ಪಾವಗಡದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ಆರೋಪ

ಪಾವಗಡ: ಪಾವಗಡ ತಾಲ್ಲೂಕಿನ ನೇರಳೇಕುಂಟೆ ಗ್ರಾಮದಲ್ಲಿ ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಅವಮಾನ ಮಾಡಿದ ಸಂಬಂಧ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಟಾರಾಸಿಟಿ(Atrocity) ಪ್ರಕರಣ ದಾಖಲಾಗಿದೆ.

 

ಘಟನೆಯ ಸಂಬಂಧ ಆರು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಪೀಡಿತ ಜಯರಾಮಪ್ಪ (62) ಅವರು ನೀಡಿದ ದೂರಿನ ಪ್ರಕಾರ, ದಿನಾಂಕ ಆಗಸ್ಟ್ 15, 2025 ರಂದು ಬೆಳಿಗ್ಗೆ ಸುಮಾರು 11.30ರ ಸಮಯದಲ್ಲಿ ಗ್ರಾಮದ ಭರತ್ ಭರತ್ ರೆಡ್ಡಿ, ಎಂ. ಚಿನ್ನಪ್ಪರೆಡ್ಡಿ, ರಘುನಾಥ ರೆಡ್ಡಿ, ಪಾಂಡುರಂಗ ಪಾಂಡು ಯಾದವ್, ರಘು ಅರ್ಲಹಳ್ಳಿ ರಘು ಹಾಗೂ ಒಬ್ಬ ಅಜ್ಞಾತ ಜೆಸಿಬಿ ಚಾಲಕರು ಒಟ್ಟಾಗಿ ಸೇರಿಕೊಂಡು, ಅವರ ಅತ್ತಿಗೆಯಾದ ಕೆ. ರಂಗಮ್ಮ ದೊಡ್ಡರಂಗಮ್ಮ (78) ಅವರಿಗೆ ಸೇರಿದ ಸ್ವತ್ತಿನ ಮೇಲೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ ಯಂತ್ರದ ಸಹಾಯದಿಂದ ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇದನ್ನು ತಡೆಯಲು ಮುಂದಾದ ಜಯರಾಮಪ್ಪರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಗಲಾಟೆ ನಿಯಂತ್ರಿಸಿ ನಂತರ ಆರೋಪಿಗಳು ರಾಜಕೀಯ ಮತ್ತು ಹಣದ ಬಲದ ಮೂಲಕ ಸಂತ್ರಸ್ತರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂತ್ರಸ್ತರಾದ ಜಯರಾಮಪ್ಪ ಅವರು, “ನಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ನಮಗೆ ನ್ಯಾಯ ಸಿಗಬೇಕು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 


Document

Leave a Reply

Your email address will not be published. Required fields are marked *