JANATAA24 NEWS DESK
Pavagada: CITU ವತಿಯಿಂದ ರೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರ ಸಮಾವೇಶ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಪಾವಗಡ ನೇತೃತ್ವದಲ್ಲಿ ರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡ ಕಾರ್ಮಿಕರ ಸಮಾವೇಶ ನಡೆಯಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪಾವಗಡ ಕಾರ್ಮಿಕ ನಿರೀಕ್ಷಕರಾದ ಹರೀಶ್ ಕುಮಾರ್ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಜವಾದ ಕಟ್ಟಡ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿ ಫಲಾನುಭವಿಗಳಾಗಿ ನೊಂದಾಯಿಸಿ ಕೊಂಡು ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕೆಂದರೆ ಪ್ರತಿವರ್ಷ ಗುರುತು ಚೀಟಿ ನವೀಕರಣ ಮಾಡಿಕೊಂಡು ಸದಸ್ಯತ್ವ ಜೀವಂತವಾಗಿ ಇಟ್ಟುಕೊಳ್ಳುವುದನ್ನು ಮರೆಯದಂತೆ ಕರೆ ನೀಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಬಿ.ಉಮೇಶ ಸಂಘಟನೆ ಎಲ್ಲರನ್ನೂ ಭೇದಭಾವವಿಲ್ಲದೆ ಒಗ್ಗೂಡಿಸಿ ದಾರಿದೀಪ ತೋರುತ್ತದೆ. ಮುಖಂಡರು ಸ್ವಂತ ಹಿತಾಸಕ್ತಿಗಿಂತ ಸಮಾಜದ ಬಡವರ ಪರವಾಗಿ ನಿಲ್ಲಿಸಬೇಕೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿ.ಐ.ಟಿ.ಯು. ತಾಲ್ಲೂಕು ಸಂಚಾಲಕ ನಾಗರಾಜ್ ಮಾತನಾಡಿ ಸಂಘಗಳು ಹೆಚ್ಚು ಜನಪರವಾಗಿ ಚಿಂತಿಸಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುವಂತಾಗಬೇಕು. ಅಸಂಘಟಿತ ಕಾರ್ಮಿಕರ ಸಂಯೋಜಕ ರಮೇಶ್ ಮಾತನಾಡಿ ಸರ್ಕಾರ 101 ತರಹದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ನೀಡುತ್ತಿರುವ ಸಂಬಂಧ ಅದರ ನೊಂದಾಯಿಸಲು ಮಾಹಿತಿ ನೀಡಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಿ.ಡಬ್ಲ್ಯೂಎಫ್ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದೃಢವಾಗಿ ನಿಂತು ಸಂಘಟಿತರಾಗಿ ಬೇಕೆಂದರು.
ವೇದಿಕೆಯಲ್ಲಿ ತಾಲ್ಲೂಕು ಖಜಾಂಚಿ ಮಮತ ಸಿ.ಐ.ಟಿ.ಯು. ಸಂಚಾಲಕ ಮದ್ದಲೇಟಪ್ಪ, ಸ್ಥಳೀಯ ಮುಖಂಡರಾದ ಕೆ.ಬಾಬು, ನಿಂಗಪ್ಪ, ಜಮೀರ್ ಖಾನ್, ಮುಂತಾದವರು ಉಪಸ್ಥಿತರಿದ್ದರು.
ಸಮಾವೇಶದ ನಂತರ 19 ಜನರ ಸಮಿತಿಯ ನೂತನನೂತನ ರೂಪ್ಪ ಘಟಕದ ಅಧ್ಯಕ್ಷ ತಿಮ್ಮರಾಜು. ಕಾರ್ಯದರ್ಶಿ ಕೆ. ಬಾಬು. ಗೌರವಾಧ್ಯಕ್ಷ ಶಾಮೀರ್ . ಉಪಾಧ್ಯಕ್ಷ ವಿನೂದ. ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.