Janataa24 NEWS DESK
Mysore: ಕಪಿಲಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು.

ಮೈಸೂರು: ಬೇಸಿಗೆಯ ಉಷ್ಣತೆ ತಡೆಯಲಾಗದೆ ಈಜಲು ಕಪಿಲಾ ನದಿಗೆ ಇಳಿದ ಮೂವರು ಕೂಲಿ ಕಾರ್ಮಿಕ ಯುವಕರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದ ಬಳಿ ನಡೆದಿದೆ.
ಬಿಹಾರದಿಂದ ಬಂದ ಮಿಲನ್ (25), ಮೋಹನ್ (19), ತರುಣ್ (19) ಮೃತರಾಗಿದ್ದಾರೆ. ಇವರು ಮೈಸೂರಿನ ನೆಸ್ಲೆ(Nestle) ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚಾದ ಉಷ್ಣತೆಯನ್ನು ಸಹಿಸಲಾಗದೆ ಈಜಲು ಕಪಿಲಾ ನದಿಗೆ(Kapila River) ಇಳಿದಿದ್ದಾರೆ. ಆದರೆ ನದಿಯ ಸುಳಿಯಿಂದ ಮೂವರು ಯುವಕರು ಹೊರಬಂದಿಲ್ಲ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದವಡಾಯಿಸಿದ್ದು ನೀರಿನಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ. ಓರ್ವ ಯುವಕ ಮಿಲನ್ ಅವರ ಮೃತದೇಹ ಈಗ ಹೊರ ತೆಗೆಯಲ್ಪಟ್ಟಿದೆ. ಆದರೆ ಬಾಕಿ ಇಬ್ಬರ ಮೃತದೇಹಗಳ ಕುರಿತಾಗಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv