Janataa24 NEWS DESK
Murder: ಕೈಕಾಲು ಕಟ್ಟಿ, ಮರಕ್ಕೆ ನೇಣು ಹಾಕಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ.

ಗದಗ: ಕಾಂಗ್ರೆಸ್(congress) ಕಾರ್ಯಕರ್ತನ ಕೈಕಾಲು ಕಟ್ಟಿ ಮರಕ್ಕೆ ನೇಣು ಹಾಕಿ ಚಿತ್ರಹಿಂಸೆ ನೀಡಿ ಕೊನೆಗೆ ಭೀಕರ ಹತ್ಯೆ ನಡೆಸಿದ್ದು ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.

ಡೋಣಿ ಗ್ರಾಮದ ಶರಣಪ್ಪ ಸಂದೀಗೌಡರ್ ಕೊಲೆಯಾದ ವ್ಯಕ್ತಿ. ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ, ಮರಕ್ಕೆ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶರಣಪ್ಪ ಸಂದೀಗೌಡರ್ ಡೋಣಿ ಗ್ರಾಮದ ಕಾಂಗ್ರೆಸ್(Congress) ಪಕ್ಷದ ಸಾಮಾಜಿಕ ಜಾಲತಾಣ ಪ್ರಮುಖನಾಗಿ ಕಾರ್ಯನಿರ್ವಹಿಸುತ್ತಿದ್ದ. ಇಂದು ಡಂಬಳ ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಇನ್ನೊಂದೆಡೆ ಕೈ ಕಾರ್ಯಕರ್ತನ ಭೀಕರ ಹತ್ಯೆ ನಡೆದಿದೆ.
ಕೊಲೆಯ ಸ್ವರೂಪ ನೋಡಿ ಡೋಣಿ ಡಾಂಬಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.janataa24.com/oscars-2024-actor-john-cena-came-to-the-stage-of-the/ (
Mandya: ಮರುಕಳುಹಿಸಿದ ಕಾಲುವೆ ದುರಂತ- ವಿ.ಸಿ ನಾಲೆಗೆ ಬಿದ್ದ ಕಾರು, ಓರ್ವ ಸಾವು
https://youtube.com/@janataa24?si=XsFcych2GMH0O6Gv