Document

Murder: ಯುಗಾದಿ ಹಬ್ಬದಂದು ಭಾವ-ಭಾಮೈದ ನ  ನಡುವೆ  ತಾರಕಕ್ಕೇರಿದ ಜಗಳ ಕೊಲೆಯಲ್ಲಿ ಅಂತ್ಯ

Janataa24 NEWS DESK

Murder: ಯುಗಾದಿ ಹಬ್ಬದಂದು ಭಾವ-ಭಾಮೈದ ನ ನಡುವೆ ತಾರಕಕ್ಕೇರಿದ ಜಗಳ ಕೊಲೆಯಲ್ಲಿ ಅಂತ್ಯ.

Deadly murder in bangalore news
ಬೆಂಗಳೂರು: ಕೌಟುಂಬಿಕ ವಿಚಾರವಾಗಿ ಕಲಹ ಆರಂಭವಾಗಿದ್ದು ಬಾಮೈದನಿಗೆ ಚಾಕುವಿನಿಂದ ಇರಿದು ಹತ್ಯೆ(Murder) ಮಾಡಿದ ಘಟನೆ ಬೆಂಗಳೂರು ನಗರದ ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಿರಣ್ ಕುಮಾರ್ (32)  ಹತ್ಯೆಯಾಗಿರುತ್ತಾರೆ. ಲಕ್ಷ್ಮಣ್ ಕೊಲೆ ಮಾಡಿದ ಆರೋಪಿ.
ಕಿರಣ್ ಕುಮಾರ್ ಅವರ ಅಕ್ಕನನ್ನು ಲಕ್ಷ್ಮಣ್ ಕುಮಾರ್ ರವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ದಾಂಪತ್ಯದಲ್ಲಿ ಆಗಾಗ ಜಗಳ ನಡೆಯುತ್ತಲೇ ಇತ್ತು.

ಆದರೆ ಯುಗಾದಿ ಹಬ್ಬದ ದಿನದಂದು ಬಾವ ಭಾಮೈದನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಲಕ್ಷ್ಮಣ್ ಎನ್ನುವ ಆರೋಪಿ ಭಾಮೈದ ಕಿರಣ್ ನ ಬೆನ್ನಿಗೆ ಚಾಕುವಿನಿಂದ(Knife) ಬಲವಾಗಿ ಇರಿದ ಪರಿಣಾಮ ಕಿರಣ್ ಗೆ ವಿಪರೀತ ರಕ್ತಸ್ರಾವವಾಗಿದ್ದು, ತಕ್ಷಣವೇ ಕಿರಣ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ(Ambedkar Hospital) ದಾಖಲಿಸಲಾಗಿತ್ತಾದರೂ ತೀವ್ರ ರಕ್ತಸ್ರಾವ ಮತ್ತು ಬಲವಾದ ಇರಿತದಿಂದ ಘಾಸಿಗೊಂಡಿದ್ದ ಕಿರಣ್ ಆಸ್ಪತ್ರೆಯಲ್ಲಿ ಕೊನೆಯುಸಿರಳದಿದ್ದ(Died).
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಈ ಸಂಬಂಧ ಕೆಜೆ ಹಳ್ಳಿ ಪೊಲೀಸ್ ಠಾಣೆಯ(KG Halli PS)ಲ್ಲಿ ಪ್ರಕರಣ ದಾಖಲಾಗಿರುತ್ತದೆ.

https://www.janataa24.com/tumkur-public-outcry-against-teacher-who-killed/

ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ  https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *