Janataa24 NEWS DESK
Munirathna : 40 ಶಾಸಕರೊಂದಿಗೆ ಡಿಕೆಶಿ ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಶಾಸಕ ಮುನಿರತ್ನ

ಬೆಂಗಳೂರು : ಚುನಾವಣೆ ವೇಳೆ ಪರ ವಿರೋಧ ಚರ್ಚೆಗಳು ಇರುವಾಗಲೇ ಆಡಳಿತ ಪಕ್ಷದ ತಪ್ಪು ಒಪ್ಪುಗಳ ವಿರೋಧ ಪಕ್ಷ ಟೀಕೆ ಮಾಡದರೇ ಆಡಳಿತ ಪಕ್ಷ ತನ್ನ ಬದ್ಧತೆ ತನ್ನ ಕಾರ್ಯವೈಖರಿ ಎಲ್ಲವನ್ನೂ ಸಮರ್ಥಿಸಿ ತನ್ನದೇ ಅಧಿಕಾರದ ಬಗ್ಗೆ ಹೆಮ್ಮೆ ಪಡುತ್ತಾರೆ. ಚುನಾವಣೆ ವೇಳೆ ಒಂದು ಪಕ್ಷದ ನಾಯಕರನ್ನು ಮತ್ತೊಂದು ಪಕ್ಷ ಸೆಳೆಯುವುದು ಉಂಟು.
ಈಗಿನ ರಾಜಕೀಯ ಪರಿಸ್ಥಿಯೂ ಅದೇ ಆಗಿದೆ ಬಿಜೆಪಿ ತನ್ನ 25 ಅಭ್ಯರ್ಥಿಗಳನ್ನೀ ಕಳೆದ ಬಾರಿ ಗೆಲ್ಲಿಸಿಕೊಂಡಿತ್ತು. ಈ ಬಾರಿಯೂ ಭದ್ರ ಕೋಟೆಗಳಾಗಿ ಅವುಗಳನ್ನು ಉಳಿಸುವ ಮೋದಿ ಶಾ ತಂತ್ರ ಬೆನ್ನಲ್ಲೇ ಮುನಿರತ್ನ ಕಾಂಗ್ರೆಸ್ ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ಕೆಲ ನಾಯಕರನ್ನು ಶಾಸಕ ಮುನಿರತ್ನ ಅವರು ಕಳುಹಿಸಿ ಕೊಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಮುನಿರತ್ನ ಅವರು ಡಿ.ಕೆ.ಶಿವಕುಮಾರ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು, ಕೆಲ ನಾಯಕರನ್ನು ನಾನೇ ಕಾಂಗ್ರೆಸ್ ಗೆ ಕಳುಹಿಸಿ ಕೊಡುತ್ತಿದ್ದೇನೆ ಎಂಬ ಗಂಭೀರ ಆರೋಪವಿದೆ. ಆದರೆ ರಾಜ್ಯದ ಉಪಮುಖ್ಯಮಂತ್ರಿ, ಕಾಂಗ್ರೆಸ್ ನ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರು 40 ಶಾಸಕರೊಂದಿಗೆ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೊಸ ಪಕ್ಷಾಂತರ ಪರ್ವ ಸ್ಫೋಟಕ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಡಿಕೆಶಿ ಅವರು 40 ಶಾಸಕರನ್ನು ಇಟ್ಟುಕೊಂಡು ನಮ್ಮೊಂದಿಗೆ ಬರಲು ಕಾತುರದಿಂದ ಕಾಯುತ್ತಿದ್ದಾರೆ. ನಾವು ಆಹ್ವಾನ ಕೊಟ್ಟರೆ 40 ಜನರೊಂದಿಗೆ ಈಗಲೇ ಪಕ್ಷ ಸೇರಿ ಬಿಡುತ್ತಾರೆ. ಆದರೆ ನಾವು ಬಾಗಿಲು ತೆಗೆಯೋದಿಲ್ಲ. ನಮ್ಮ ಪಕ್ಷದಿಂದ ಯಾರನ್ನೂ ಬೇರೆ ಪಕ್ಷಕ್ಕೆ ಕಳಿಸುವುದೂ ಇಲ್ಲ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ (DK Shivakumar) ಅವರು ಅವರು ಹೀಗೆ ಮಾಡಲು, ಬಲವಾದ ಕಾರಣ ಏನು ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಅಲ್ಲಿ 4 ಉಪ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಹೀಗಾಗಿ ಅವರ ಮಧ್ಯೆ ಇರುವುದು ಬಿಟ್ಟು ನಮ್ಮೊಂದಿಗೆ ಇರೋದೇ ಬೆಸ್ಟ್ ಎಂದು ಬಿಜೆಪಿ ಸೇರಲು ತುದಿಗಾಲಲ್ಲಿ ಇದ್ದಾರೆ ಎಂದು ಹೇಳಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
BJP Karnataka : ಜನಾರ್ಧನ ರೆಡ್ಡಿ ಮತ್ತೆ ಬಿಜೆಪಿಗೆ..! ಯಾವಾಗ ಸೇರ್ಪಡೆ ಗೊತ್ತಾ..?