Janataa24 NEWS DESK
MP Ticket : ಇಬ್ಬರು ಸಚಿವರು ತಮ್ಮ ಕುಟುಂಬಕ್ಕೆ ಎಂಪಿ ಟಿಕೆಟ್ ಪಡೆಯಲು ಹೈಕಮಾಂಡ್ ಬಳಿ ಸರ್ಕಸ್.

ಬೆಂಗಳೂರು : ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕೋಲಾರ ಕ್ಷೇತ್ರದಿಂದ ತಮ್ಮ ಅಳಿಯ ಚಿಕ್ಕಪೆದ್ದಪ್ಪ ಅವರಿಗೆ ಟಿಕೆಟ್ ಪಡೆಯಲು ಹೈಕಮಾಂಡ್ ಬಳಿ ಲಾಭಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳು ಫೈನಲ್ ಆಗಿದ್ದು, ಅಂತಿಮವಾಗಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸರ್ಕಸ್ ಇನ್ನೂ ನಡೆಯುತ್ತಿದೆ.
ಇನ್ನೊಬ್ಬ ಸಚಿವ ತಮ್ಮ ಮಗನಿಗಾಗಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ(HC Mahadevappa) ಚಾಮರಾಜನಗರದಿಂದ ತಮ್ಮ ಪುತ್ರ ಸುನೀಲ್ ಬೋಸ್ ಗೆ ಟಿಕೆಟ್ ಕೊಡಿಸಲು ವರಿಷ್ಠರ ಬಳಿ ಒತ್ತಡ ಹೇರಿ ಸರ್ಕಸ್ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ-ಜೆಡಿಎಸ್ ತನ್ನ ಪಟ್ಟಿ ಪ್ರಕಟಿಸಲಿ ನಾವು ಅವರ ವಿರುದ್ದ ಸೆಣೆಸಾಡುವ ಸೂಕ್ತ ಅಭ್ಯರ್ಥಿಯನ್ನ ಕಣಕ್ಕೆ ಇಳಿಸೋಣ ಎಂದು ಕಾಯುತ್ತಿದೆ.
ಇನ್ನೊಂದು ವಿಶೇಷ ಏನೆಂದರೆ ಕೋಲಾರಕ್ಕೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಮೊದಲು ಪ್ರಕಟಿಸಲಿ ಆನಂತರ ನಾವು ಮುಂದಿನ ನಡೆ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಕಾಯುತ್ತಿದೆ ಎಂದು ಪಕ್ಷದ ಒಳಗೆ ಮಾಹಿತಿ ಸುಳಿದಾಡುತ್ತಿದೆ.
ಎರಡೂ ಸ್ಥಾನಗಳು ಮೀಸಲಾತಿ ಕ್ಷೇತ್ರಗಳಾದ ಕಾರಣ ಇಲ್ಲಿ ಕೇವಲ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿಡಲಾಗಿದೆ. ಇಲ್ಲಿ ಮೂಲ ಶಾಸಕರಿಂದ ಈ ಅಭ್ಯರ್ಥಿಗಳಿಗೆ ಯಾವುದೇ ಸಹಕಾರವಿಲ್ಲದಿದ್ದರೂ, ಇಬ್ಬರು ಸಚಿವರು ಟಿಕೆಟ್ ಗಾಗಿ ಸರ್ಕಸ್ ನಡೆಸುತ್ದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಗೆಲುವಿನ ತಂತ್ರದಿಂದ ಜೆಡಿಎಸ್ ಭೋವಿ(Bovi) ಅಭ್ಯರ್ಥಿಯನ್ನು ಘೋಷಿಸಿದರೆ ಕಾಂಗ್ರೆಸ್ ಡಾ ಎಲ್ ಹನುಮಂತಯ್ಯ ಅಥವಾ ಎಸ್‌ಸಿ ಬಲ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮೈಸೂರಿನಲ್ಲಿ ನೆನ್ನೆ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಯಾವುದೇ ತೊಂದರೆ, ಅಡ್ಡಿ, ಬಿಕ್ಕಟ್ಟು ಇಲ್ಲ. ನಾಲ್ಕು ಸ್ಥಾನಗಳ ಪಟ್ಟಿ ಸೋಮವಾರ ಅಥವಾ ಮಂಗಳವಾರ ಹೊರಬೀಳುವ ಸಾಧ್ಯತೆಯಿದೆ ಎಂದು ಟಿಕೆಟ್ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Sonu Gowda: ರೀಲ್ಸ್ ಸ್ಟಾರ್ ಸೋನು ಗೌಡ ಗೆ 14 ದಿನಗಳ ನ್ಯಾಯಾಂಗ ಬಂಧನ.