Janataa24 NEWS DESK
Mandya : ಸಕ್ಕರೆ ನಗರಿ ಮಂಡ್ಯದಿಂದ ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್

ಬೆಂಗಳೂರು : ಲೋಕಸಮರಕ್ಕೆ ಈಗಾಗಲೇ ಮಹೂರ್ತ ಫಿಕ್ಸ್ ಆಗಿದೆ. ಲೋಕ ರಣರಂಗ ಅಬ್ಬರದಲ್ಲಿ ಮುಳುಗಿದೆ. ಈ ನಡುವೆ ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಟಿಕೆಟ್ ಜೆಡಿಎಸ್‌ಗೆ ಫಿಕ್ಸ್ ಎನ್ನಲಾಗುತ್ತಿದೆ. ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಟಿಕೆಟ್ ಸಿಗದ ಹಿನ್ನೆಲೆ ಅವರ ಆಪ್ತರು ಅಸಮಾಧಾನ ಹೊರಹಾಕಿದ್ದಾರೆ.
ಮಂಡ್ಯ ರೆಬಲ್ ಕ್ವೀನ್ ಸಂಸದೆ ಸುಮಲತಾ ಆಪ್ತ ಹನಕೆರೆ ಶಶಿ ಮಾಧ್ಯಮದವರೊಂದಿಗೆ ಮಾತನಾಡಿ, ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ಟಿಕೆಟ್ ಸಿಕ್ಕಿಲ್ಲವೋ ಗೊತ್ತಿಲ್ಲ. ಟಿಕೆಟ್ ಸಿಕ್ಕದ ಹಿಂದೆ ಯಾರ ಕೈವಾಡ ಇದೆಯೋ ಗೊತ್ತಿಲ್ಲ. ಅದು ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು. ಈ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಸಭೆ ಮಾಡುತ್ತೇವೆ. ಅಲ್ಲಿಯೇ ಸುಮಲತಾ (Sumalatha)ಅವರೇ ತೀರ್ಮಾನ ಮಾಡುತ್ತಾರೆ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ.
ಮುಂದಿನ ರಾಜಕೀಯ ಜೀವನ ಮಂಡ್ಯದಲ್ಲಿಯೇ ಮಾಡಬೇಕು ಇಲ್ಲಿಯೇ ತನ್ನ ರಾಜಕೀಯ ಜೀವನ ಸಾರ್ಥಕಗೊಳಿಸಬೇಕು ಹೀಗಾಗಿ ಮಂಡ್ಯದಿಂದ ಸ್ವರ್ಧೆ ಮಾಡಬೇಕು. ಅವರನ್ನೇ ನಂಬಿರುವ ಮತದಾರರ ನಿರ್ಧಾರ ತೆಗೆದುಕೊಳ್ಳಬೇಕು. ಅವರಿಗಾಗಿ ಅಲ್ಲದೆ ಇದ್ದರು ಮಂಡ್ಯದ ಜನರಿಗಾಗಿ ಸ್ವರ್ಧೆ ಮಾಡಬೇಕು .
ಬಿಜೆಪಿ ಹೈಕಮಾಂಡ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ. ಜೆಡಿಎಸ್ ಪ್ರಾಬಲ್ಯವಿರುವ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನೇ ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ. ವಿಪರ್ಯಾಸವೆಂದರೆ ಈವರೆಗೂ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಇದರಿಂದಾಗಿ ಬಿಗ್ ಶಾಕ್ ಉಂಟಾಗಿತ್ತು. ಸುಮಲತಾ ಬಿಜೆಪಿ ಟಿಕೆಟ್ ನನಗೇ ಸಿಗುತ್ತದೆ. ಕಮಲದ ಚಿಹ್ನೆ ಉಳಿಸುವುದೇ ನನ್ನ ಗುರಿ. ನಾನೇ ಅಭ್ಯರ್ಥಿ ಅಂತ ಹೇಳಿದ್ದರು.
ಅಲ್ಲದೆ, ಅವರ ಅಭಿಮಾನಿಗಳೂ ಕೂಡ ಮಂಡ್ಯದಿಂದ ಸುಮಲತಾ ಸ್ಪರ್ಧೆ ಖಚಿತ ನಿಶ್ಚಿತ ಎಂದು ಹೇಳಿದ್ದರು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೊಟ್ಟಿರುವುದು ಸುಮಲತಾಗೆ ನುಂಗಲಾರದ ತುತ್ತಾಗಿದೆ. ಆಶ್ಚರ್ಯವೆಂದರೆ ಹಾವು-ಮುಂಗುಸಿ ತರ ಕಿತ್ತಾಡುತ್ತಿದ್ದ ಸುಮಲತಾ ಮತ್ತು ಜೆಡಿಎಸ್ಸಿಗರು ಮುಂದೆ ಒಂದಾಗುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಎರಡು ಪಕ್ಷದ ಕಾರ್ಯಕರ್ತರ ನಡುವೆ ಇದ್ದ ದ್ವೇಷ ರಾಜಕೀಯ ಹೋಗಿ ಒಂದಾಗಿ ಜೆಡಿಎಸ್ ಅಭ್ಯರ್ಥಿಯನ್ನಾ ಬೆಂಬಲಿಸುವರೇ ಕಾದು ನೋಡಬೇಕು.
ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರು ನನ್ನ ಅಕ್ಕ ಇದ್ದಾಗೆ ಎಂದು ಮೂಲಕ ಸುಮಲತಾರನ್ನ ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ ಸುಮಲತಾ ಅವರು ಈವರೆಗೂ ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿಲ್ಲ.
ಸುಮಲತಾ ರವರ ಬಿಜೆಪಿ ಮೇಲಿನ ಅತಿಯಾದ ನಂಬಿಕೆ ಈ ಕ್ಷಣಕ್ಕೆ ಹುಸಿಯಾಗಿದೆ.
ಮಂಡ್ಯದಲ್ಲಿ ಸುಮಲತಾ ರವರಿಗೆ ಕಮಲ ಕೈ ಕೊಟ್ಟಿದ್ದು ಮಾತ್ರ ಸತ್ಯ.
ಸುಮಲತಾ ರವರ ಒಂಟಿ ಹೋರಾಟಕ್ಕೆ ಈ ಬಾರಿ ಜೋಡೆತ್ತುಗಳು ಕಣಕ್ಕಿಳಿಯುತ್ತಾರ ಕಾದು ನೋಡಬೇಕಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
JDS Karnataka : ಮೈತ್ರಿ ನಡುವೆ ಯಾವೆಲ್ಲ ಲೋಕ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ವರ್ಧಿಸುತ್ತಿದೆ ಗೊತ್ತಾ..?