Document

Love Story: ಕಾರಿನ ಜೊತೆಗೆ ಪ್ರೇಮಿಯನ್ನೂ ಸುಟ್ಟ ಪಾಪಿಗಳು.

Janataa24 NEWS DESK

Love Story: ಕಾರಿನ ಜೊತೆಗೆ ಪ್ರೇಮಿಯನ್ನೂ ಸುಟ್ಟ ಪಾಪಿಗಳು.

ಶಿವಮೊಗ್ಗ : ಪ್ರೀತಿ ಜಗತ್ತಿನ ಪ್ರತಿ ಜೀವಿಗಳಲ್ಲಿಯೂ ಹುಟ್ಟುವ ಸಹಜ ಗುಣ ಅದು ವಯಸ್ಸಿನ ಬಂದ ಯುವಕ ಯುವತಿಯಲ್ಲಿ ಸರ್ವೇ ಸಾಮಾನ್ಯ. ಪ್ರೀತಿ ಎನ್ನುವುದು ಕೆಲವೊಂದು ಜೀವಗಳಿಗೆ ಬೆಳಕಾದರೆ ಇನ್ನೂ ಕೆಲವು ಸಾವಿಗೆ ಕಾರಣವಾಗಿದೆ ಇಲ್ಲೊಂದು ಅಂತದ್ದೆ ಘಟನೆ ಮುಂದಿದೆ.

ಪ್ರೀತಿಸಿ ಮದುವೆಯಾಗಬೇಕು ಸಂಸಾರದ ಬಂಡಿ ನಡೆಸಬೇಕು ಸಮಾಜದಲ್ಲಿ ನಾವು ಮಾದರಿ ಪ್ರೇಮಿಗಳಾಗಿ ಬಾಳಬೇಕು ಎನ್ನುವ ನೂರೆಂಟು ಕನಸು ಕಂಡಿದ್ದ ಪ್ರೇಮಿಯ ಹತ್ಯೆ ಆಗಿದೆ. ಅತ್ತ ವೀರೇಶನನ್ನು ಪ್ರೀತಿಸಿದ ತಪ್ಪಿಗೆ ಅಂಕಿತಾ ಕಣ್ಣೀರು ಹಾಕುತ್ತಿದ್ದಾಳೆ. ಇತ್ತ ತಾಯಿಗೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಅನಾಥೆಯಾಗಿದ್ದಾರೆ. ಕೊಲೆ ಮಾಡಿದ ಅಣ್ಣಂದಿರಿಬ್ಬರು ಜೈಲು ಪಾಲಾಗಿದ್ದಾರೆ. ಲವ್ ಸ್ಟೋರಿ ಸಾವು ಜೈಲಿನ ದುರಂತದಲ್ಲಿ ಅಂತ್ಯಗೊಂಡಿದೆ.

ಅಂತರ್ ಜಿಲ್ಲಾ ಪ್ರೇಮಿಗಳಿಬ್ಬರ ಪ್ರೇಮಕಥೆ ದುರಂತದಲ್ಲಿ ಕೊನೆ. ಶಿವಮೊಗ್ಗ-ಹಾವೇರಿ ಎರಡು ಜಿಲ್ಲೆಗಳ ಪ್ರೇಮಿಗಳಿಬ್ಬರ ಕಥೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಿ ಉತ್ತಮ ಸಂಗಾತಿಯೊಂದಿಗೆ ಜೀವನ ಕಳೆಯಬೇಕು ಎಂದು ಪ್ರೇಮಿಗಳು ನೂರಾರು ಕನಸು ನನಸುಗಳ ಕಂಡಿದ್ದರು. ಎಲ್ಲ ಲವ್ ಸ್ಟೋರಿಗಳು ಗೆಲ್ಲುವುದಿಲ್ಲ… ಬಹುತೇಕ ಲವ್ ಸ್ಟೋರಿಗಳು ಫೇಲ್ ಆಗಿದ್ದೆ ಹೆಚ್ಚು ಸಾವಿನಲ್ಲಿ ಜೊತೆಯಾಗಿದ್ದು ಕೂಡ ಕಾಣಬಹುದು ಇಡೀ ಮಲೆನಾಡನ್ನೇ ಬೆಚ್ಚಿ ಬೀಳುವಂತೆ ಪ್ರೇಮಿಯನ್ನು ಹತ್ಯೆ ಮಾಡಲಾಗಿದೆ. ಇದು ಪ್ರೀತಿ ದ್ವೇಷ ದುರಂತ ಲವ್ ಸ್ಟೋರಿ.

ಮಲೆನಾಡಿನ ಜನರು ಮಾರ್ಚ್ 16 ಶನಿವಾರ ಬೆಳಗ್ಗೆ ಇನ್ನೋವಾ ಕಾರ್ ಸಮೇತ ಓರ್ವ ಯುವಕನನ್ನು ಸುಟ್ಟು ಹಾಕಿದ್ದರು. ಬೆಳಗ್ಗೆ ಎದ್ದು ನೋಡಿದ್ರೆ ಶಿಕಾರಿಪುರ ತಾಲೂಕಿನ ತೋಗರ್ಸೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಕಾರ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಜನರಿಗೆ ಗಾಬರಿಯಾಗಿತ್ತು. ಶಿರಾಳಕೊಪ್ಪದ ಪೊಲೀಸರು ಸ್ಥಳಕ್ಕೆ ಹೋಗಿ ಗಮನಿಸುತ್ತಾರೆ. ಇನ್ನೋವಾ ಕಾರ್ ಮಾತ್ರವಲ್ಲ. ಒಳಗೆ ಒಂದು ಮೃತದೇಹ ಕೂಡಾ ಪತ್ತೆಯಾಗಿತ್ತು!

ಪೊಲೀಸರು ಕಾರ್ ಮತ್ತು ಮೃತದೇಹ ಯಾರದ್ದು ಎನ್ನುವ ಪತ್ತೆಗೆ ಮುಂದಾಗುತ್ತಾರೆ. ಕಾರ್ ನ ಒಂದಿಷ್ಟು ಮಾಹಿತಿ ಪಡೆಯುತ್ತಾರೆ. ಇನ್ನೋವಾ ಕಾರ್ ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ ಸುನೀಲ್ ಎನ್ನುವುದು ಗೊತ್ತಾಗುತ್ತದೆ. ಸುನೀಲ ಮೂಲಕ ಕಾರ್ ನಲ್ಲಿರುವ ವ್ಯಕ್ತಿ ಯಾರು ಎನ್ನುವುದು ಪೊಲೀಸರಿಗೆ ಪತ್ತೆಯಾಗುತ್ತದೆ.

ಕಾರ್ ನಲ್ಲಿ ಸುಟ್ಟು ಭಸ್ಮ ಆಗಿರುವುದು 27 ವರ್ಷದ ವೀರೇಶ್ ಎಂಬ ಯುವಕ. ಈತ ಗಾಡಿಕೊಪ್ಪದ ನಿವಾಸಿ. ವಿರೇಶ ಶಿವಮೊಗ್ಗ ತಾಲೂಕಿನ ಚೋರಡಿಯಲ್ಲಿರುವ ನಮ್ಮ ಅಡಿಕೆ ತೋಟದಲ್ಲಿ ವ್ಯವಸಾಯ ಜೊತೆಗೆ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದನು. ಎರಡು ವರ್ಷದ ಹಿಂದೆ ವಿರೇಶ್ ಅಕ್ಕ ಕಾವ್ಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಳು. ವಿರೇಶ್ ಒಬ್ಬನೇ ಮಗ.

ಇದ್ದ ಇಬ್ಬರು ಮಕ್ಕಳು ಈಗ ಸಾವಿಗೀಡಾಗಿದ್ದಾರೆ. ವಿರೇಶ್ ತಂದೆ ಮಹಾದೇವಪ್ಪ 15 ವರ್ಷಗಳ ಹಿಂದೆ ತುಂಗಾ ಚಾನಲ್ ನಲ್ಲಿ ಮಣ್ಣು ಕುಸಿದು ಬಿದ್ದು ಅದರಲ್ಲಿ ಸಿಲುಕಿ ಮೃತಪಟ್ಟಿದ್ದರು. ಕುಟುಂಬದ ವಾರಸುದಾರನಾಗಿ ಇದ್ದ ಒಬ್ಬ ಮಗನೂ ಈಗ ಅಮಾನುಷವಾಗಿ ಕೊಲೆಯಾಗಿದ್ದಾನೆ ಇಂತಹ ದುಸ್ಥಿತಿ ಯಾವ ತಾಯಿಗೂ ಬರಬಾರದು. ಇದರಿಂದ ಏಕಾಂಗಿ ತಾಯಿಗೆ ಈಗ ದೊಡ್ಡ ಆಘಾತವಾಗಿದೆ. ಆ ತಾಯಿಯ ನೋವು ಯಾರಿಗೂ ಅರ್ಥವಾಗದು. ಒಬ್ಬರಿಂದ ಒಬ್ಬರೇ ಗಂಡ, ಮಗಳು, ಮಗ ಮೃತಪಟ್ಟಿರುವ ದೊಡ್ಡ ಆಘಾತದಲ್ಲಿ ಆ ತಾಯಿ ಮಹಾದೇವಿ ನೋವಿನಲ್ಲಿ ಬೇಯುತ್ತಿದ್ದಾಳೆ.

ಈ ಪ್ರೀತಿಯ ವಿಷಯವನ್ನು ವಿರೇಶ್ ಕುಟುಂಬಸ್ಥರು ಯುವತಿಯ ಸಂಬಂಧಿ ಅಂಬಾರಗೊಪ್ಪದ ಬಸವಣ್ಯಪ್ಪಗೆ ಪೋನ್ ಮಾಡಿ ತಿಳಿಸಿದ್ದರು. ಈ ವಿಚಾರವಾಗಿ ಮಾತಾಡಲು ಬಂದರೆ ನಿಮ್ಮನ್ನು ಬಿಡುವುದಿಲ್ಲ, ಸುಮ್ಮನೆ ನಿಮ್ಮದೆಷ್ಟು ಕೆಲ್ಸ ಇದೆಯೋ ಅಷ್ಟು ಮಾಡಿಕೊಳ್ಳಿ, ನಿಮ್ಮ ಹುಡುಗನಿಗೆ ಪ್ರೀತಿಸೋಕೆ ನನ್ನ ಮೊಮ್ಮಗಳೇ ಬೇಕಾ? ನಾನು ಬಂದರೆ ನಿಮ್ಮ ಗ್ರಹಚಾರನೇ ಬಿಡಿಸಿ ಬಿಡ್ತೀನಿ, ನಿಮ್ಮ ಅಣ್ಣನ ಮಗ ವಿರೇಶನಿಗೂ ತಿಳಿಸು. ಅವನೇನಾದರೂ ಈ ರೀತಿ ಪ್ರೀತಿ-ಗೀತಿ ಅಂತಾ ಬಂದರೆ ಅವನನ್ನು ಬಿಡೋಲ್ಲಾ ನಾನು, ಹುಷಾರಾಗಿರಿ ಎಂದು ಬಸವಣ್ಯಪ್ಪ ಬೆದರಿಕೆ ಹಾಕಿದ್ದನಂತೆ. ಇದನ್ನು ಕೇಳಿಸಿಕೊಂಡ ವಿರೇಶ್ ಕುಟುಂಬಸ್ಥರು ಸೈಲೆಂಟ್ ಆಗಿದ್ದರು.

ನಾಗರ ಕ್ರಾಸ್ ಗೆ ಬರುವಂತೆ ಹೇಳುತ್ತಲೇ ಇದ್ದ ವಿರೇಶ್ ತನ್ನ ತಾಯಿಗೆ ವಿಷಯ ತಿಳಿಸಿ, ಅಲ್ಲಿಗೆ ಹೋಗಿಬರುವೆ ಅಂತ ಹೇಳಿದ್ದಾನೆ. ತಾಯಿ ರಾತ್ರಿ ಆಗಿದೆ ಬೇಡ ಅಂತಾ ಎಷ್ಟೇ ಹೇಳಿದರೂ ಮಗ ವಿರೇಶ ಕೇಳಿಲ್ಲ. ಆ ಕಡೆಯಿಂದ ಅಂಕಿತಾ ಹಠ ಮಾಡುತ್ತಿದ್ದಾಳೆ. ನಿನ್ನ ಭೇಟಿ ಆಗಬೇಕಂತೆ ಎಂದು ಅಣ್ಣ ಪ್ರವೀಣ ಕಥೆ ಕಟ್ಟಿದ್ದಾನೆ. ಇದನ್ನೆಲ್ಲಾ ಆಲಿಸಿ ತಾನು ಪ್ರೀತಿಸಿದ ಹುಡುಗಿ ಎಲ್ಲೋ ಅಪಾಯದಲ್ಲಿದ್ದಾಳೆಂದು ವಿರೇಶ್ ಆತಂಕಕ್ಕೊಳಗಾಗಿದ್ದನು.

ಪ್ರವೀಣನಿಂದ ಪದೇ ಪದೇ ಬರುವ ಕಾಲ್ ನಿಂದ ವಿರೇಶ್ ಗಲಿಬಿಲಿಗೊಂಡಿದ್ದನು. ಇದಾದಮೇಲೂ ವಿರೇಶನ ತಾಯಿಗೆ ಪ್ರವೀಣ ಕಾಲ್ ಮಾಡಿದ್ದಾನೆ. ವಿರೇಶನನ್ನು ನಾಗರ ಕ್ರಾಸ್ ಗೆ ಕಳಿಸಿ, ನಾನು ಅಂಕಿತಾಳನ್ನು ಕರೆದುಕೊಂಡು ಬಂದು ಹುಡುಗಿಯನ್ನು ವಿರೇಶನ ಬಳಿ ಬಿಟ್ಟು ಹೋಗ್ತಿನಿ, ನನ್ನ ಮೇಲೆ ನಂಬಿಕೆಯಿಟ್ಟು ಕಳಿಸಮ್ಮಾ ಎಂದು ಬೇಡಿಕೊಂಡಿದ್ದಾನೆ. ಹೆತ್ತ ತಾಯಿಯು ಪ್ರವೀಣನ ಮಾತು ನಂಬಿ ಯಾಮಾರುತ್ತಾಳೆ. ಮಗನಿಗೆ ಅಲ್ಲಿಗೆ ಹೋಗಲು ಒಪ್ಪಿಗೆ ಕೊಟ್ಟಿದ್ದಾಳೆ. ಮಗ ವಿರೇಶ ಹೋಗುವಾಗ ತಾಯಿ ಬಳಿಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುತ್ತಾನೆ.

ಅಂಕಿತಾಳನ್ನು ನೋಡಬೇಕು. ಅವಳನ್ನು ಮದುವೆಯಾಗಬೇಕೆನ್ನುವ ಹಂಬಲ ವಿರೇಶನಿಗೆ ಬಲವಾಗಿ ಇತ್ತು. ತುಂಬಾ ಟೆನಶನ್ ನಲ್ಲಿ ವಿರೇಶ್(Veeresh) ಗಾಡಿಕೊಪ್ಪದ ತನ್ನ ಸ್ನೇಹಿತ ಸುನೀಲ್ ಬಳಿಯಿಂದ ಇನ್ನೋವಾ ಕಾರನ್ನು ತೆಗೆದುಕೊಂಡಿದ್ದಾನೆ. ಸ್ನೇಹಿತನಿಗೆ ಅಕ್ಕಿ ಆಲೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದನು. ನಂತರ ರಾತ್ರಿ ಸುಮಾರು 12:50 ಕ್ಕೆ ಸುನೀಲ್ ಗೆ ಫೋನ್ ಮಾಡಿ ನಾನು ಹಾನಗಲ್ ನಾಗರ ಕ್ರಾಸ್ ನ ಹತ್ತಿರ ಇರುವ ಭೂತಪ್ಪನ ದೇವಸ್ಥಾನದ ಹತ್ತಿರದ ರಸ್ತೆಯಲ್ಲಿ, ನಿಂತುಕೊಂಡಿರುವುದಾಗಿ ತಿಳಿಸಿದ್ದಾನೆ. ಅಂಕಿತಾ ಅಣ್ಣ ಪ್ರವೀಣನಿಗಾಗಿ ಕಾಯುತ್ತಿರುವೆ ಎಂದು ಹೇಳಿರುವುದೇ ವಿರೇಶನ ಲಾಸ್ಟ್ ಕಾಲ್ ಆಗಿತ್ತು.

ನಂತರ ತಾಯಿ ಮಹಾದೇವಿ ಅವರು ಮಗನಿಗೆ ಫೋನ್ ಮಾಡಿದರೆ ಫೋನ್‌ ನಾಟ್ ರೀಚೆಬಲ್ ಆಗಿತ್ತು. ಮಧ್ಯರಾತ್ರಿ ಸುಮಾರು 01:30 ಗಂಟೆಗೆ ಪ್ರವೀಣನಿಗೆ ಫೋನ್ ಮಾಡಿ ತಾಯಿ ವಿಚಾರಿಸಿದ್ದಾರೆ. ಮಗ ವಿರೇಶ್ ಎಲ್ಲಿದ್ದಾನೆ ಎಂದು ಕೇಳಿದ್ದಕ್ಕೆ ಪ್ರವೀಣನು ನಿನ್ನ ಮಗ ಇದೂವರೆಗೂ ಬಂದಿಲ್ಲ. ನಾನು ಇಷ್ಟೊತ್ತಿನವರೆಗೂ ಕಾದು ಈಗ ಆತ ಬಂದಿಲ್ಲವೆಂದು ಅಂಕಿತಾಳನ್ನು ವಾಪಸ್ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದನು.

ತಾಯಿಯು ಗಾಬರಿಗೊಂಡು ಮಾ. 16 ರ ಬೆಳಿಗ್ಗೆ 08:00 ಗಂಟೆಗೆ ತುಂಗಾ ನಗರದ ಪೊಲೀಸ್‌ ಠಾಣೆಯಲ್ಲಿ ಮಗನ ಮಿಸ್ಸಿಂಗ್ ಕೇಸ್ ದೂರು ನೀಡಿದ್ದಳು. ಇದರ ಬಳಿಕ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಮೀಪದ ತೊಗರ್ಸಿ ಬಳಿ ಇನ್ನೊವಾ ಕಾರಿನಲ್ಲಿ, ಒಬ್ಬ ವ್ಯಕ್ತಿಯನ್ನು ಕಾರಿನಲ್ಲಿ ಇಟ್ಟು ಸುಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಬಂದಿತ್ತು.

ಇನ್ನೋವಾ ಕಾರ್ ಗೆ ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾಗಿರುತ್ತದೆ. ಅದರಲ್ಲಿ ವಿರೇಶ್ ಮೃತ ದೇಹವಿತ್ತು. ಅದು ಕೂಡಾ ಸುಟ್ಟು ಕರಕಲಾಗಿರುತ್ತದೆ. 1) ಪ್ರವೀಣ್ ಅಂಕಿತಾ ದೊಡ್ಡಪಪ್ಪ ಮಗ (ಅಣ್ಣ) 2) ಅಂಕಿತಾ ಸ್ವಂತ ಅಣ್ಣ ಆದರ್ಶ 3) ಪ್ರಶಾಂತ್ 4) ಪ್ರಭು ಇವರೆಲ್ಲರೂ ಸೇರಿ ಆ ದಿನ ರಾತ್ರಿ ವಿರೇಶನನ್ನು ಹಾನಗಲ್ ನಾಗರ ಕ್ರಾಸ್ ಗೆ ಬರಲು ಹೇಳಿ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಬುದ್ದಿವಂತಿಕೆಯಿಂದ ಸಾಕ್ಷ್ಯ ನಾಶಪಡಿಸಲು ಕಾರ್ ನಲ್ಲಿ ವೀರೇಶನನ್ನು ಇಟ್ಟು ಕಾರ್ ಸಮೇತ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಇದೀಗ ಶಿಕಾರಿಪುರ ನ್ಯಾಯಾಲಯಕ್ಕೆ ಅಂಕಿತ ಸಹೋದರ ಆದರ್ಶ ಮತ್ತು ಆಕೆಯ ದೊಡ್ಡಪ್ಪನ ಮಗ ಪ್ರವೀಣ್ ಶರಣಾಗಿದ್ದಾರೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಸಹೋದರಿಯ ಪ್ರೀತಿ ನಮಗೆ ಒಪ್ಪಿಗೆ ಇರಲಿಲ್ಲ ಈ ಹಿನ್ನೆಲೆಯಲ್ಲಿ ವೀರೇಶನ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಹಂತಕರು ಹೇಳಿಕೆಯನ್ನು ಕೊಟ್ಟಿರುವುದಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇತ್ತ ಏಕಾಂಗಿಯಾಗಿದ್ದ ತಾಯಿಯ ದೂರದ ಸಂಬಂಧಿ ಅಂಕಿತಾಳನ್ನು ಪ್ರೀತಿಸಿ ವಿರೇಶ್ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಪ್ರೀತಿಸಿದ ಯುವತಿಯನ್ನು ಮದುವೆ ಆಗಲು ಹೋಗಿದ್ದ ವಿರೇಶನನ್ನು ಮೋಸದಿಂದ ಆಕೆಯ ಅಣ್ಣಂದಿರು ಮತ್ತು ಅತನ ಸ್ನೇಹಿತರು ಮರ್ಡರ್ ಮಾಡಿದ್ದಾರೆ.

ಅಂತಸ್ತಿನಲ್ಲಿ ವಿರೇಶ್ ಕಡಿಮೆ ಇದ್ದಾನೆ, ಯುವತಿಯು ಶ್ರೀಮಂತ ಕುಟುಂಬಕ್ಕೆ ಸೇರಿದವಳು. ಇಂತಹ ಯುವಕನು ತನ್ನ ತಂಗಿಯನ್ನು ಪ್ರೀತಿಸಿದ್ದು ಆಕೆಯ ಸಹೋದರರಿಗೆ ಇಷ್ಟವಾಗಿರಲಿಲ್ಲ. ತಂಗಿ ಮತ್ತು ವಿರೇಶನಿಗೆ ಅಣ್ಣಂದಿರು ಬುದ್ದಿ ಹೇಳಿದ್ದಾರೆ. ಆದರೆ ಅಂಕಿತಾ ವಿರೇಶನನ್ನೇ ಮದುವೆಯಾಗಬೇಕಂದು ಹಠ ಹಿಡಿದಿದ್ದಾಳೆ.

ತನ್ನ ತಂಗಿ ಲವ್ ಮಾಡಿದ ಪ್ರಿಯಕರಿನಿಗೆ ಬುದ್ದಿ ಕಲಿಸಬೇಕೇಂದು ಅಣ್ಣಂದಿರು ಡಿಸೈಡ್ ಮಾಡಿದ್ದರು. ಹೀಗೆ ಮದುವೆ ಮಾಡಿಸುವುದಾಗಿ ಯುವಕನಿಗೆ ನಂಬಿಸಿ ವಂಚನೆಯಿಂದ ಆತನನ್ನು ತಮ್ಮ ಊರಿಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಸ್ವತಃ ಸಂಬಂಧಿಯೇ ಆಗಿದ್ದರೂ ಈ ಪ್ರೀತಿಯಲ್ಲಿ ಇಬ್ಬರ ಕುಟುಂಬಗಳ ಅಂತಸ್ತು ಮರ್ಯಾದೆ ಅಡ್ಡಿ ಬಂದಿದೆ. ಶ್ರೀಮಂತಿಕೆಯು ಇಬ್ಬರ ಪ್ರೀತಿಗೆ ಅಡ್ಡಿ ಬಂದಿದೆ. ಕೊನೆಗೆ ವಿರೇಶನನ್ನು ತುಂಬಾ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Interpol: ಮೆಡಿಕೇರ್ ಹೆಸರಲ್ಲಿ ಡ್ರಗ್ಸ್ ಉತ್ಪಾದನಾ ಘಟಕ,9 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ.

Document

Leave a Reply

Your email address will not be published. Required fields are marked *