Janataa24 NEWS DESK
Lokayukta: ಸರ್ಕಾರಿ ಅನುಧಾನಿತ ಪ್ರೌಢಶಾಲಾ ದ್ವಿತೀಯ ದರ್ಜೆಯೆ ಸಹಾಯಕನಿಗೆ 15 ದಿನಗಳ ಪಿತೃತ್ವ ವ ರಜೆಯೆ ಮಂಜೂರು ಮಾಡಲು ಫೋನ್ ಪೇ ಮೂಲಕ 23,000=00 ರೂ ಲಂಚ ಸ್ವೀಕರಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ.
 
;
ತುಮಕೂರು: ಶಿರಾ ತಾಲ್ಲೂಕಿನ ಮದಲೂರು ಗ್ರಾಮದ ಹಾವನೂರು ಗ್ರಾಮಾಂತರ ಸರ್ಕಾರಿ ನುಧಾನಿತ ಪ್ರೌಢ ಶಾಲೆಯ ದ್ವಿತೀಯ ದರ್ಜೆಯ ಸಹಾಯಕರಾಗಿ(ಎಸ್‌ಡಿಎ) ಕಾರ್ಯ ನಿರ್ವಹಿಸುತ್ತಿರುವ ದೂರುದಾರ ಲೋಕೇಶ.ಆರ್ ರವರ ಪತ್ನಿಗೆ ದಿನಾಂಕ:04/10/2025 ರಂದು ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಮಗು ಜನಿಸಿದ್ದು, ಹೆರಿಗೆಯ ಜೊತೆಯಲ್ಲಿಯೇ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಿಸಿರುತ್ತಾರೆ. ಪತ್ನಿ & ಮಗುವಿನ ಆರೈಕೆ ಸಲುವಾಗಿ ಸರ್ಕಾರಿ ನಿಯಮಾವಳಿಗಳಂತ ಲಭ್ಯವಿರುವ 15 ದಿನಗಳ ಪಿತೃತ್ವ ರಜೆಯನ್ನು ಮಂಜೂರು ಮಾಡಿಕೊಡುವಂತೆಯೆ ಲೋಕೇಶ.ಆರ್ ರವರು ಮುಖ್ಯ ಶಿಕ್ಷಕ ನಾಗರಾಜ,ವಿ ರವರಿಗೆ ಮನವಿ ಮಾಡಿದ್ದು, ಸದರಿಯವರು ರಜೆ ನೀಡಲು ನಿರಾಕರಿಸಿ, 15 ರಜಾ ದಿನಗಳ ವೇತನದ ಹಣ 23,500=00 ಗಳನ್ನು ನೀಡಿದರೆ ಮಾತ್ರ ಪಿತೃತ್ವ ರಜೆೆ ಮಂಜೂರು ಮಾಡುವುದಾಗಿ ಹೇಳಿ, ಲಂಚಕ್ಕೆ ಒತ್ತಾಯಿಸಿ, ನಂತರ 23,000-00 ರೂ ನೀಡಿದರೆ ರಜೆ ಮಂಜೂರು ಮಾಡಿಕೊಡುವುದಾಗಿ ಒಪ್ಪಿರುತ್ತಾರೆ.
ದೂರುದಾರ ಲೋಕೇಶ್.ಆರ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ:09/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್
ಠಾಣೆಗೆ ದೂರು ನೀಡಿದ್ದು, ಪೋಲೀಸ್ ನಿರೀಕ್ಷಕರಾದ ಬಿ.ಮೊಹಮ್ಮದ್ ಸಲೀಂ ರವರು ಮೊ.ನಂ:07/2025 ಕಲಂ-7(a) 7 ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ತನಿಖೆಯೆನ್ನು ಕೈಗೊಂಡಿರುತ್ತಾರೆ.
7. ಇದೇ ದಿನ ದಿನಾಂಕ:09/10/2025 ರಂದು ಬೆಳ್ಳಿಗ್ಗೆ 11.30 ಗಂಟೆ ಸಮಯದಲ್ಲಿ ಫೋನ್ ಫೇ ಮೂಲಕ 23,000-00 ಲಂಚ ಸ್ವೀಕರಿಸಿದ್ದ ನಾಗರಾಜು.ವಿ, ಮುಖ್ಯಶಿಕ್ಷಕ, ಹಾವನೂರು ಗ್ರಾಮಾಂತರ ಸರ್ಕಾರ ಅನುಧಾನಿತ ಪ್ರೌಢಶಾಲೆ, ಮದಲೂರು, ಶಿರಾ ತಾಲ್ಲೂಕು ರವರನ್ನು ತನಿಖಾಧಿಕಾರಿ 7 ಬಿ.ಮೊಹಮ್ಮದ್ ಸಲೀಂ, ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ಮಧ್ಯಾಹ್ನ 01.15 ಗಂಟೆ 0 ಸಮಯದಲ್ಲಿ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
7 ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ರವರ ನೇತೃತ್ತದಲ್ಲಿ 7 ಪೊಲೀಸ್ ನಿರೀಕ್ಷಕರುಗಳಾದ ಬಿ.ಮೊಮ್ಮದ್ ಸಲೀಂ, ಕೆ.ಸುರೇಶ, ಶಿವರುದ್ರಪ್ಪ ಮೇಟಿ ಮತ್ತು ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಫೋನ್ ಪೇ ನಲ್ಲಿ ಲಂಚ ಸ್ವೀಕರಿಸಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.