Document

Lokasabha Election: ರಾಜ್ಯ ಬಿಜೆಪಿಯವರಿಂದ ಕುರ್ಚಿ ಬೇಡ ಮೈಕ್ ಬೇಡ ಅಭಿಯಾನಕ್ಕೆ ಚಾಲನೆ.

Janataa24 NEWS DESK

Lokasabha Election: ರಾಜ್ಯ ಬಿಜೆಪಿಯವರಿಂದ ಕುರ್ಚಿ ಬೇಡ ಮೈಕ್ ಬೇಡ ಅಭಿಯಾನಕ್ಕೆ ಚಾಲನೆ.

Lokasabha Election

Bangalore: ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತಿ ಕಾರ್ಯಕರ್ತ ಸ್ಥಳೀಯ ಮುಂಖಡರ ಅಭಿಮಾನಿಗಳು ಪಕ್ಷದ ಅನುಯಾಯಿಗಳನ್ನು ಸೂಕ್ಷ್ಮ ಮಟ್ಟದಲ್ಲಿ ಮತದಾರರನ್ನು ತಲುಪುವ ಯೋಜನೆಯ ಭಾಗವಾಗಿ ಬಿಜೆಪಿ ಕರ್ನಾಟಕದಾದ್ಯಂತ ಅನೇಕ ಸ್ಥಳಗಳಲ್ಲಿ ಸಣ್ಣ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆ. ಪಕ್ಷದ ನಾಯಕರ ಪ್ರಕಾರ ಇದು ‘ಮೈಕ್ ಬೇಡ, ಕುರ್ಚಿ ಬೇಡ’ ಎಂಬ ಅಭಿಯಾನವಾಗಿದೆ.

ಬಿಜೆಪಿ ಹೊಸದೊಂದು ಅಭಿಯಾನಕ್ಕೆ ತಯಾರಿ ನಡೆಸಿದ್ದು ಪ್ರತಿ ಮನೆ ಮನ ತಲುಪಿ ಚುನಾವಣಾ ಪ್ರಚಾರಕ್ಕೆ ದುಮುಕಿದೆ. ಮೊದಲ ಬಾರಿಗೆ, ಸೂಕ್ಷ್ಮ ಮಟ್ಟದಲ್ಲಿ ಮತದಾರರನ್ನು ತಲುಪುವ ಯೋಜನೆಯ ಭಾಗವಾಗಿ ಬಿಜೆಪಿ ಕರ್ನಾಟಕದಾದ್ಯಂತ ಅನೇಕ ಸ್ಥಳಗಳಲ್ಲಿ ಸಣ್ಣ ಗುಂಪುಗಳನ್ನು ಟಾರ್ಗೆಟ್ ಮಾಡಲಾಗಿದೆ. ಪಕ್ಷದ ನಾಯಕರ ಪ್ರಕಾರ ಇದು ‘ಮೈಕ್ ಬೇಡ, ಕುರ್ಚಿ ಬೇಡ’ ಎಂಬ ಅಭಿಯಾನವಾಗಿದೆ. ಬಿಜೆಪಿ ಏಪ್ರಿಲ್ 5 ರೊಳಗೆ ಒಂದು ಸುತ್ತಿನ ಸಭೆಯನ್ನು ಮುಗಿಸಲು ನಿರ್ಧರಿಸಿದೆ.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸುಮಾರು 100 ಜನರನ್ನು ಗುರಿಯಾಗಿಟ್ಟುಕೊಂಡು ರಸ್ತೆಬದಿಯಲ್ಲಿ, ಗ್ರಾಮದ ಮರಗಳ ಕೆಳಗೆ ಅಥವಾ ಸ್ಥಳೀಯರ ನಿವಾಸದಲ್ಲಿ ಇಂತಹ ಸಭೆಗಳನ್ನು ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಎಲ್ಲಾ ಅಭಿಮಾನಿಗಳು ಸಭೆಗಳಲ್ಲಿ ಭಾಗವಹಿಸಲು ಆಗುವುದಿಲ್ಲ. ಅನೇಕರು ದೊಡ್ಡ ರ್ಯಾಲಿಗಳಲ್ಲಿ ಭಾಗವಹಿಸುವುದಿಲ್ಲ. ಬೂತ್ ಮಟ್ಟದಿಂದ ನಾವು ಪಕ್ಷ ಪ್ರಚಾರದ ಸಲುವಾಗಿ ನಾವು ಸಣ್ಣ ಸಭೆಗಳನ್ನು ನಡೆಸಿದರೆ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು. ಈ ಸಭೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಬುಧವಾರ ವಿವಿಧ ಕೋಶಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು.

ಪಕ್ಷವು ವಿವಿಧ ಹಂತಗಳಲ್ಲಿ ಪ್ರಚಾರಗಳನ್ನು ರೂಪಿಸಿದೆ. ಅವರು ಎಂಟು ವಿಭಿನ್ನ ಕ್ಲಸ್ಟರ್‌ಗಳಲ್ಲಿ ದೊಡ್ಡ ಪ್ರಚಾರಗಳನ್ನು ನಡೆಸಲು ಯೋಜಿಸಿದ್ದಾರೆ, ಅದರಲ್ಲಿ ಕಲಬುರಗಿ ಮತ್ತು ಶಿವಮೊಗ್ಗ ಇತ್ತೀಚೆಗೆ ಮುಗಿದಿದೆ. ಇನ್ನೂ ಎರಡು ಜಿಲ್ಲೆಗಳನ್ನು ಸೇರಿಸಲು ಅವರು ಯೋಚಿಸಿದ್ದಾರೆ, ಅಲ್ಲಿ ಪ್ರಧಾನಿ ನರೇಂದ್ರ ಮೋದಿ,(Narendra Modi) ಕೇಂದ್ರ ಸಚಿವ ಅಮಿತ್ ಶಾ ಮತ್ತು ಇತರ ರಾಷ್ಟ್ರೀಯ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಗ್ರಾಮ, ಬ್ಲಾಕ್, ವಾರ್ಡ್ ಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ಏರ್ಪಡಿಸಿದರೆ ಈ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ನಾವು ಗ್ರಾಮ ಪಂಚಾಯ್ತಿಯ ಸದಸ್ಯರು,ತಳಮಟ್ಟದ ಕಾರ್ಯಕರ್ತರು, ಸ್ಥಳೀಯ ಪಕ್ಷದ ಪದಾಧಿಕಾರಿಗಳು ಮತ್ತಿತರರು ಸೇರಿದಂತೆ ಸ್ಥಳೀಯ ಮುಖಂಡರ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ನಾವು ಎಲ್ಲಾ ಹಿರಿಯ ಕಿರಿಯ ಸ್ಥಳೀಯ ಮಹಿಳಾ ಮತದಾರರನ್ನು ತಲುಪುತ್ತೇವೆ. ಉಜ್ವಲ ಯೋಜನೆ, ಜಲ ಜೀವನ್ ಮಿಷನ್ ಮತ್ತು ಇತರ ಕೇಂದ್ರ ಯೋಜನೆಗಳ ಬಗ್ಗೆ ಅವರಿಗೆ ಸವಿವರವಾಗಿ ವಿವರಿಸುತ್ತೇವೆ ಎಂದು ಸದಸ್ಯರು ಹೇಳಿದರು.

ಲೋಕಸಭಾ ಚುನಾವಣೆ ಎದುರಿಸುವ ಸಲುವಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ನ್ನು ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ನಾಯಕರು ಮತ್ತು ಕಾರ್ಯಕರ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬಗೆಹರಿಸಲು ಸಮನ್ವಯ ಸಮಿತಿಯನ್ನು ಯೋಜಿಸಲಾಗಿದೆ ಮತ್ತು ಎರಡೂ ಪಕ್ಷಗಳ ನಾಯಕರು ಅದರ ಭಾಗವಾಗಲಿದ್ದಾರೆ. ಈ ನಾಯಕರು ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Chikkodi: ಕತ್ತಿಗೆ ಕೈ ತಪ್ಪಿದ ಟಿಕೆಟ್, ಕಾರ್ಯಕರ್ತರಿಗೆ ನೋವಾಗಿದೆ– ಉಮೇಶ್ ಕತ್ತಿ

Document

Leave a Reply

Your email address will not be published. Required fields are marked *