Document

Lokasabha 2024: ಈಶ್ವರಪ್ಪ ಬಂಡಾಯ ಘೋಷಣೆ- ಶಿವಮೊಗ್ಗದಿಂದ ಕಣಕ್ಕೆ.

Janataa24 NEWS DESK

Lokasabha 2024: ಈಶ್ವರಪ್ಪ ಬಂಡಾಯ ಘೋಷಣೆ- ಶಿವಮೊಗ್ಗದಿಂದ ಕಣಕ್ಕೆ..!

eshwarappa declaration of rebellion from shimoga constituency7697841439183267018
ಕೆ ಎಸ್ ಈಶ್ವರಪ್ಪ.

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ(BJP)ಗೆ ಬಂಡಾಯದ ಬಿಸಿ ತಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೂ ಟಿಕೆಟ್ ನಿರಾಕರಿಸಿದ ಬಿಜೆಪಿ ವಿರುದ್ಧ ಕೆಎಸ್ ಈಶ್ವರಪ್ಪ(KS Eshwarappa) ಬಂಡಾಯ ಎದ್ದಿದ್ದಾರೆ. ಶಿವಮೊಗ್ಗದಿಂದ ಕೆಎಸ್ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಇಂದು ಬೆಂಬಲಿಗರ ಜೊತೆ ಮಹತ್ವದ ಸಭೆ ನಡೆಸಿದ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು. ಪ್ರಧಾನಿ ಮೋದಿ(Modi) ಅಪೇಕ್ಷೆಯಂತೆ ಕರ್ನಾಟಕ ಬಿಜೆಪಿ ಆಗಬೇಕು. ಕುಟುಂಬ ರಾಜಕಾರಣದ ವಿರುದ್ದ ಮೋದಿ ಧ್ವನಿ ಎತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಈಶ್ವರಪ್ಪ, ಬಂಡಾಯ ಸ್ಪರ್ಧೆ ಘೋಷಣೆ ಮಾಡಿದ್ದಾರೆ. ಇದು ಭಾವುಕನಾಗಿ ಆಡಿದ ಮಾತಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ(BS Yediyurappa)ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ(Vijayendra) ವಿರುದ್ಧ ಈಶ್ವರಪ್ಪ ಹರಿಹಾಯ್ದಿದ್ದಾರೆ.

eshwarappa declaration of rebellion from shimoga constituency1261795575344464326

ನಾನು ಸ್ಪತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಏನು ಮಾಡುತ್ತೆ? ಪಕ್ಷ ನನಗೆ ನೋಟಿಸ್ ನೀಡಲಿದೆ. ಹೆಚ್ಚಂದರೆ ಪಕ್ಷದಿಂದ ಉಚ್ಚಾಟಿಸುತ್ತಾರೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಮತ್ತೆ ಬಿಜೆಪಿ ನನ್ನನ್ನು ಸೇರಿಸಿಕೊಳ್ಳುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಖಂಡಿತ ಮೋದಿ ವಿರೋಧಿ ಅಲ್ಲ..!

ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದರೆ.

ಪಕ್ಷದಿಂದ ಹೊರನಡೆದ ಕಾಂಗ್ರೆಸ್ ಸೇರಿಕೊಂಡ ಜಗದೀಶ್ ಶೆಟ್ಟರ್ ಗೆ ಮತ್ತೆ ಪಕ್ಷಕ್ಕೆ ಕರೆಸಿಕೊಂಡು ಟಿಕೆಟ್ ನೀಡುತ್ತೀರಿ. ಹಾಗಾದರೆ ಪಕ್ಷ ಹೇಳಿದ ಹಾಗೆ ನಡೆದುಕೊಂಡ ನನಗೆ ಯಾಕೆ ಟಿಕೆಟ್ ಕೊಡಲ್ಲ ಎಂದು ಈಶ್ವರಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಪ್ರಧಾನಿ ಮೋದಿಯನ್ನು ಮತ್ತೆ ಗೆಲ್ಲಿಸಬೇಕು. ಇದಕ್ಕಾಗಿ ಶ್ರಮಿಸೋಣ. ಮೋದಿ ಗೆಲುವಿನ ಸಂಭ್ರಮಾಚರಣೆಗೆ ನಾವು ಒಟ್ಟಿಗೆ ಸೇರಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.

 

eshwarappa declaration of rebellion from shimoga constituency6263926035175629918

ಇಂತ ದಿನ ಬರುತ್ತೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನಗೆ, ನನ್ನವರಿಗೆ ಬೇಕು ಎಂಬುದು ಬದಲಾಗಬೇಕು. ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಪ್ರಧಾನಿ ಮೋದಿ ಆಶಯಕ್ಕ ನಾನು ಬದ್ಧ. ಮೋದಿ ವಿರುದ್ಧ ಹೋಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ 

https://chat.whatsapp.com/Jf6jZ0gyQAEA5GBRpHnkrv

Subscribe YouTube


https://youtube.com/@janataa24?si=XsFcych2GMH0O6Gv


https://www.janataa24.com/gubbi-ಬಡವರ-ಪರವ

Document

Leave a Reply

Your email address will not be published. Required fields are marked *