Document

Kunigal: ತಾಳಿಕಟ್ಟುವ ಸಮಯಕ್ಕೆ ಮೊದಲ ಹೆಂಡ್ತಿ ಎಂಟ್ರಿ–ಹಸೆಮಣೆಯಲ್ಲೇ ನಿಂತೋಯ್ತು ಮದುವೆ.

JANATAA24 NEWS DESK 

 

Kunigal: ತಾಳಿಕಟ್ಟುವ ಸಮಯಕ್ಕೆ ಮೊದಲ ಹೆಂಡ್ತಿ ಎಂಟ್ರಿ–ಹಸೆಮಣೆಯಲ್ಲೇ ನಿಂತೋಯ್ತು ಮದುವೆ.
Kunigal

ಕುಣಿಗಲ್ : ಬಿಳಿ ಪಂಚೆ, ಶರ್ಟು ಜೊತೆಗೆ ಮೈಸೂರು ಪೇಟ ತೊಟ್ಟು ಹಸೆಮಣೆ ಏರಿದ್ದ ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಟೈಮ್​​​ಗೆ ಮದುವೆ ಮಂಟಪಕ್ಕೆ ಬಿರುಗಾಳಿಯಂತೆ ಮೊದಲ ಪತ್ನಿ (First Wife) ಎಂಟ್ರಿ ಕೊಟ್ಟಿದ್ದಾಳೆ. ಹಸೆಮಣೆ ಏರಿದವನು ಅಲ್ಲೇ ಪತರುಗುಟ್ಟಿದ್ರೆ, ಹೆಣ್ಣಿನ ಮನೆಯವರಿಗೆ ದೊಡ್ಡ ಆಘಾತವೇ ಆಗಿದೆ. ಮುಹೂರ್ತದ ಕೆಲವೇ ಕ್ಷಣಕ್ಕೆ ಮೊದಲೇ ಮದುವೆ ಮುರಿದು ಬಿದ್ದಿದೆ.

ಹಸೆಮಣೆಯಲ್ಲೇ ನಿಂತು ಹೊಯ್ತು ಮದುವೆ

ತುಮಕೂರಿನ ಕುಣಿಗಲ್​​ ತಾಲೂಕಿನ ಎಸ್​​ಎಲ್​ಎನ್ ಕನ್ವೆನ್ ಶನ್ ಹಾಲ್​​ನಲ್ಲಿ ನಡೀತಿದ್ದ ಮದುವೆ ತಾಳಿ ಕಟ್ಟೋ ಸಮಯದಲ್ಲಿ ನಿಂತು ಹೋಗಿರುವ ಸಿನಿಮೀಯ ಘಟನೆ ನಡೆದಿದೆ. ಮದುವೆಗೆ ಬಂದವರು ಮಂಟಪದಲ್ಲಿ ನಿಂತು ಹೋದ ಮದುವೆ ಕಂಡು ಶಾಕ್ ಆಗಿದ್ದಾರೆ. ಯಾರ ತಪ್ಪು ಅಂತ ಲೆಕ್ಕ ಹಾಕ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಹಸೆಮಣೆ ಏರಿದವನ ಮೊದಲ ಮದುವೆ ಗುಟ್ಟು.

 

ತಾಳಿಕಟ್ಟುವ ಸಮಯಕ್ಕೆ ಮೊದಲ ಹೆಂಡ್ತಿ ಎಂಟ್ರಿ

ಬೆಂಗಳೂರು ಮೂಲದ ಹರೀಶ್ ಪ್ರಸಾದ್, ಮಂಡ್ಯ ಮೂಲದ ಯುವತಿಯನ್ನ ಮದುವೆಯಾಗಲು ಮುಂದಾಗಿದ್ದ. ಎರಡೂ ಜೋಡಿ ಕೂಡ ನಗು-ನಗುತ್ತಾ ಮದುವೆ ಶಾಸ್ತ್ರ ಮಾಡ್ತಿದ್ರು. ಇನ್ನೇನು ತಾಳಿ ಕಟ್ಬೇಕು ಎನ್ನುವಷ್ಟರಲ್ಲಿ ಹರೀಶ್​ ಪ್ರಸಾದ್​​ ಮೊದಲ ಹೆಂಡ್ತಿ, ಬಿರುಗಾಳಿಯಂತೆ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

ಯುವತಿಗೆ ಶಾಕ್​​, ನಿಂತು ಹೋಯ್ತು ಮದುವೆ!

ಹರೀಶ್ ಪ್ರಸಾದ್ ಎಂಬಾತ ಮೊದಲ ಪತ್ನಿ ಲೇಪಾಕ್ಷಿ ಎಂಬುವವರು ಕಲ್ಯಾಣ ಮಂಟಪಕ್ಕೆ ಬಂದು ನಡೆಯುತ್ತಿದ್ದ ಮದುವೆ ನಿಲ್ಲಿಸಿದ್ದಾರೆ. ಮೊದಲೇ ಮದುವೆ ಆಗಿರೋ ವಿಚಾರ ತಿಳಿಸದೆ ಹರೀಶ್ ಪ್ರಸಾದ್​​ ಎರಡನೇ ಮದುವೆ ಆಗ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

 

Kunigal: ಮದುವೆ ಮಂಟಪದಲ್ಲಿ ಜಟಾಪಟಿ

ಗಂಡನ ಎರಡನೇ ಮದುವೆ ವಿಚಾರ ತಿಳಿದು ಮೊದಲ ಪತ್ನಿ ಲೇಪಾಕ್ಷಿಅವರು ಪೊಲೀಸರು, ವಕೀಲರು ಹಾಗೂ ಸಂಬಂಧಿಕರ ಜೊತೆ ಕುಣಿಗಲ್​​ನ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ರು. ಈ ವೇಳೆ ಪೊಲೀಸರು ವರನಿಗೆ ಕಾನೂನು ಪಾಠ ಮಾಡಿದ್ದು, ಮಂಟಪದಲ್ಲಿ ಜಟಾಪಟಿ ಕೂಡ ನಡೆದಿದೆ.

ಮದುವೆ ಮುರಿದು ಬಿದ್ದ ಬಳಿಕ ಯುವತಿ ಕುಟುಂಬಸ್ಥರು ಕೂಡ ಬೇಸರ ಹೊರಹಾಕಿದ್ದಾರೆ. ಮದುಮಗ ಹರೀಶ್ ಪ್ರಸಾದ್ ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *