Janataa24 NEWS DESK
KSRTC: ಯುಗಾದಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ.

ಬೆಂಗಳೂರು: ಹಿಂದೂ ಧರ್ಮದ ಅದ್ದೂರಿ ಹಬ್ಬ ಸಡಗರ ಸಂಭ್ರಮದಿಂದ ನಾನಾ ಭಾಗಗಳಲ್ಲಿ ನಾನಾ ರೀತಿಯಲ್ಲಿ ಆಚರಿಸುವ ಮಹತ್ವದ ಹಬ್ಬಕ್ಕೆ ಉದ್ಯೋಗ ಹರಸಿ ಪಟ್ಟಣ ಸೇರಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ಈ ಬಾರಿ ಹಬ್ಬಕ್ಕೆ ಸಾಲು ಸಾಲು ರಜೆ ಸಿಗುವ ಅವಕಾಶ ಒದಗಿ ಬಂದಿದ್ದು ಬೆಂಗಳೂರು ಹಾಗೂ ಇತರೇ ಉದ್ಯೋಗ ನಗರಗಳತ್ತ ದುಡಿಮೆಗಾಗಿ ವಲಸೆ ಹೋಗಿದ್ದವರು ಸ್ವಗ್ರಾಮಕ್ಕೆ ತೆರಳುವ ಪ್ರಯಾಣಿಕರ ದಟ್ಟಣೆ ಕಡಿತಗೊಳಿಸುವ ಸಲುವಾಗಿ ಕೆ.ಎಸ್ ಅರ್ ಟಿ ಸಿ(KSRTC) ಹಾಗೂ ವಾಯುವ್ಯ ಸಾರಿಗೆ ಹಬ್ಬಕ್ಕೆ ಹೆಚ್ಚುವರಿ ಬಸ್ಸು ಸೇವೆ ಒದಗಿಸಿದೆ.
ವಾರಾಂತ್ಯ ರಜೆ ಸತತವಾಗಿ ಮೂರು ನಾಲ್ಕು ದಿನಗಳು ರಜೆ ಸಿಗುತ್ತಿರುವ ಕಾರಣ ಪ್ರಯಾಣಿಕರು ಶನಿವಾರವೇ ಪಟ್ಟಣಗಳು ಬಿಟ್ಟು ಊರಿನ ಕಡೆ ಹೊರಡುತ್ತಾರೆ ಹಾಗಾಗಿ ವಿಶೇಷ ಬಸ್ಸು ಸೌಲಭ್ಯ ಸೇವೆಗೆ ನಿರ್ಧರಿಸಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳು 2000ಕ್ಕೂ ಹೆಚ್ಚು ಬಸ್ಸುಗಳನ್ನು ಓಡಿಸುವುದಾಗಿ ನಿರ್ಧರಿಸಿದೆ. ಏ.6 ರಿಂದ ಬೆಂಗಳೂರಿನಿಂದ ಸೇವೆ ಎಲ್ಲೆಡೆ ಆರಂಭಿಸಿ ತೆರಳಿದ ಬಸ್ಸುಗಳು ಏ.9 10 ರಂದು ಮರಳಿ ಬೆಂಗಳೂರು ಸೇರಲಿವೆ.
ಕೆಎಸ್ ಆರ್ ಟಿಸಿ 1750 ವಾಯುವ್ಯ ಸಾರಿಗೆ 145 ಕಲ್ಯಾಣ ಕರ್ನಾಟಕ ಸಾರಿಗೆ 200 ಬಿಎಂಟಿಸಿ(BMTC)ಯ 180 ವಿಶೇಷ ಬಸ್ ಗಳು ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Pavagada: ಮೇಣದಬತ್ತಿ ಹಿಡಿದು ಮತದಾನದ ಜಾಗೃತಿಗೆ ಮುಂದಾದ ತಾಲ್ಲೂಕು ಪಂಚಾಯ್ತಿ ಇಒ ಜಾನಕಿ ರಾಮ್.