Document

KS Eshwarappa : ರಾಜ್ಯ ಬಿಜೆಪಿ ಪಕ್ಷವನ್ನ ಯಡಿಯೂರಪ್ಪ ಕುಟುಂಬ ಆಳುತ್ತಿದೆ -ಕೆ ಎಸ್ ಈಶ್ವರಪ್ಪ

Janataa24 NEWS DESK

KS Eshwarappa : ರಾಜ್ಯ ಬಿಜೆಪಿ ಪಕ್ಷವನ್ನ ಯಡಿಯೂರಪ್ಪ ಕುಟುಂಬ ಆಳುತ್ತಿದೆ -ಕೆ ಎಸ್ ಈಶ್ವರಪ್ಪ

KS Eshwarappa
KS Eshwarappa

ಶಿವಮೊಗ್ಗ: ಜಿಲ್ಲೆಯ ರಾಜಕೀಯ ದಿನದಿಂದ ದಿನಕ್ಕೆ ನಾನಾ ಅಯಾಮುಗಳಲ್ಲಿ ರಂಗೇರುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಟಿಕೆಟ್ ಘೋಷಣೆಯಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಅಬ್ಬರದ ರೋಡ್ ಶೋ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಕ್ಕಿರುವ ಬಿವೈ ರಾಘವೇಂದ್ರ (BY Raghavendra) ತನ್ನದೇ ಪಕ್ಷದಲ್ಲಿನ ತೊಡಕು ಒಡಕುಗಳ ಬಗ್ಗೆ ಮೆದುವಾಗಿ ಪೆಟ್ಟು ಕೊಡುತ್ತಾ ಒಳ ಒಳಗೆ ಅಧಿಕಾರ ಹಿಡಿಯುವ ಏಣಿ ಏರಲು ತಣಿಸುತ್ತಿದ್ದಾರೆ.

ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನವರು ತಮ್ಮ ಮಗನಿಗೆ ಟಿಕೆಟ್ ನೀಡಬೇಕೆಂಬ ಸರ್ಕಸ್ ಮಾಡಿದ್ದರು. ಆದರೆ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಲಿಲ್ಲ. ಆದ್ದರಿಂದ ರಾಜ್ಯ ಬಿಜೆಪಿ ರಾಜಕೀಯದಲ್ಲಿ ನಡೆದ ಒಳ ರಾಜಕೀಯಕ್ಕೆ ಬೇಸತ್ತು ದಿನಕ್ಕೊಂದು ತಿರುವು ನೀಡುವ ಹೇಳಿಕೆ ನೀಡುತ್ತಾ ಬಂಡಾಯ ಬಿಸಿ ತಟ್ಟಿಸಿ ಶಿವಮೊಗ್ಗ ರಾಜಕೀಯ ಗರಿಗೆದರಿಸಿದ್ದಾರೆ.

ರಾಜ್ಯ “ಕಾಂಗ್ರೆಸ್ ಪಕ್ಷದಲ್ಲಿನ ಕುಟುಂಬ ರಾಜಕಾರಣ ಸಂಸ್ಕೃತಿ ರಾಜ್ಯ ಬಿಜೆಪಿಗೂ ತಟ್ಟಿದೆ” ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗದ ತಮ್ಮ ನಿವಾಸದಲ್ಲಿ ನಡೆದ ಗ್ರಾಮೀಣ ಭಾಗದ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ತಾವೇಕೆ ಬಂಡಾಯ ಏಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರು ಒಂದು ಕುಟುಂಬದ ಹಿಡಿತದಲ್ಲಿ ಪಕ್ಷ ಇರಬಾರದು ಕುಟುಂಬ ರಾಜಕೀಯಕ್ಕೆ ನೋವು ಜೋತು ಬೀಳಬಾರದು ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ನೀಡಿ. ಕುಟುಂಬ ರಾಜಕೀಯಕ್ಕೆ ಅವಕಾಶ ಕೊಡಬಾರದು ಎನ್ನುತ್ತಿದ್ದರು. ಹೀಗಾಗಿ ವರಿಷ್ಠರು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದಾಗ ಒಪ್ಪಿಕೊಂಡು ಬಂಡಾಯ ಏಳದೇ ಸುಮ್ಮನಿದ್ದೆ ಆದರೆ ಈಗ ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಆಳುತ್ತಿದೆ ಎಂದು ಆರೋಪಿಸಿದರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Pavagada : ಕಾಂಗ್ರೆಸ್ ನ ಹಿರಿಯ ಮುಖಂಡ ಜಿ ಎಸ್ ಧರ್ಮಪಾಲ್ ನಿಧನ.

Document

Leave a Reply

Your email address will not be published. Required fields are marked *