JANATAA24 NEWS DESK
Koratagere: ತುಂಬಾಡಿ ಟೋಲ್ ಬಳಿ ಭೀಕರ ರಸ್ತೆ ಅಪಘಾತ–ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾ*ವು*.

Koratagere: ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿ 3ರಲ್ಲಿ(SH3) ಪಾಳು ಬಿದ್ದ ಟೋಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ನಡೆದಿದೆ.
ತುಂಬಾಡಿ ಮೂಲದ ವಿಜಯ್ ಕುಮಾರ್(45) ಮತ್ತು ಕಾಂತರಾಜು(45) ಎನ್ನುವ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿಗಳಾಗಿರುತ್ತಾರೆ.
ತುಂಬಾಡಿಯಿಂದ ಮಧುಗಿರಿ ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಹಠಾತ್ತನೇ ಪೆಮ್ಮೇದೇವರಹಳ್ಳಿ ಗೇಟ್ ಬಳಿ ಪೆಮ್ಮೇದೇವರಹಳ್ಳಿ ಊರಿನ ಕಡೆಗೆ ತಿರುವಿನಲ್ಲಿ ವಾಹನವನ್ನು ತಿರುಗಿಸಿದಾಗ ಅದೇ ಸಮಯದಲ್ಲಿ ಮಧುಗಿರಿ ಮಾರ್ಗದಿಂದ ಕೊರಟಗೆರೆ ಕಡೆಗೆ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ನಲ್ಲಿದ್ದವರಿಗೆ ಗಂಭೀರವಾಗಿ ಪೆಟ್ಟಾಗಿದ್ದು ಸ್ಥಳದಲ್ಲೇ ಸಾವನಪ್ಪಿರುತ್ತಾರೆ.
ಪೆಮ್ಮೆದೇವನಹಳ್ಳಿ ತಿರುವಿನಲ್ಲಿ ಯಾವುದೇ ಬೀದಿ ದೀಪ(High Mast) ಇಲ್ಲದಿರುವುದು ಇಂತಹ ಹಲವಾರು ಅಪಘಾತಗಳು ಸಂಭವಿಸಲು ಕಾರಣ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.
ಹಾಗೂ ಪಾಳು ಬಿದ್ದ ಟೋಲ್ ಬಳಿ ಸಾಕಷ್ಟು ಗುಂಡಿಗಳಿದ್ದು ಪ್ರತಿನಿತ್ಯ ಟೋಲ್ ಬಳಿ ಅಪಘಾತ ಸಂಭವಿಸುತ್ತಿವೆ ಇತ್ತೀಚೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಟೋಲ್(KRDCL) ಅಧಿಕಾರಿಗಳು ಈ ಕಡೆಗೆ ತಲೆ ಹಾಕುವುದನ್ನೇ ಬಿಟ್ಟಿರುತ್ತಾರೆ.!ರಸ್ತೆ ಅಭಿವೃದ್ಧಿ ಮಾಡಬೇಕಿದ್ದವರೇ ರಸ್ತೆಯಲ್ಲಿ ಅನಾಹುತ ಮಾಡಿ ಹೋಗಿರುವುದು ದುರ್ದೈವವೇ ಸರಿ.
ಈ ಬಗ್ಗೆ ಸಾಕಷ್ಟು ದೂರಗಳಿದ್ದರೂ ಸಹಿತ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯ ಸಂಗತಿ ಎಂದು ಸ್ಥಳೀಯರು ದೂರಿರುತ್ತಾರೆ.
ಕೊರಟಗೆರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ತೀರ್ಥೇಶ್,ASI ಪ್ರಸನ್ನಕುಮಾರ್, ಪ್ರದೀಪ್,ಗಣೇಶ್ ಇನ್ನಿತರರು ಸ್ಥಳಕ್ಕೆ ಆಗಮಿಸಿ ಅಪಘಾತಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮವನ್ನು ಕೈಗೊಂಡಿರುತ್ತಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.