Janataa24 NEWS DESK
Koratagere: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಲೋಕಾಯುಕ್ತ ಅಧಿಕಾರಿಗಳು ಬಿಲ್ ಕಲೆಕ್ಟರ್ ಗೆಜೊತೆ ಸಿಕ್ಕಿಬಿದ್ದ ಕಾರ್ಯದರ್ಶಿ.

ಖಾತೆ ಬದಲಾವಣೆ ಮಾಡಿಕೊಡಲು 8,000=00 ರೂ ಲಂಚ ಸ್ವೀಕರಿಸುತ್ತಿದ್ದ ತೋವಿನಕೆರೆ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮ ಲೋಕಾಯಕ್ತ ಬಲೆಗೆ.
Koratagere: ಪ್ರಕರಣದ ವಿವರ
ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ತೋವಿನಕೆರೆ ಗ್ರಾಮದ ವಾಸಿಯಾದ ದೂರುದಾರ ಶ್ರೀ ಟಿ.ಕೆ.ಮೊಹಮ್ಮದ್ ರವರು ಅದೇ ಗ್ರಾಮದ ಶ್ರೀಮತಿ ಮಂಜಮ್ಮ ಎಂಬುವವರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನವನ್ನು ಕ್ರಯಕ್ಕೆ ಖರೀದಿ ಮಾಡಿದ್ದು, ಇದು ಕೊರಟಗೆರೆ ಸಬ್‌ರಿಜಿಸ್ಟ್ರಾರ್ ಕಛೇರಿಯಲ್ಲಿ ದಿನಾಂಕ:01/08/2025 ರಂದು ನೋಂದಣಿಯಾಗಿರುತ್ತದೆ. ಕ್ರಯ ಪತ್ರದಂತೆ ಸದರಿ ಮನೆ ಮತ್ತು ಖಾಲಿ ನಿವೇಶನದ ಖಾತೆಯನ್ನು ಶ್ರೀಮತಿ ಮಂಜಮ್ಮ ರವರ ಹೆಸರಿನಿಂದ ತನ್ನ ಹೆಸರಿಗೆ ಬದವಾವಣೆ ಮಾಡಿಕೊಡುವಂತೆ ತೋವಿನಕೆರೆ ಗ್ರಾಮ ಪಂಚಾಯ್ತಿಗೆ ದಿನಾಂಕ:12/08/2025 ರಂದು ಶ್ರೀ ಟಿ.ಕೆ.ಮೊಹಮ್ಮದ್ ರವರು ಅರ್ಜಿ ಸಲ್ಲಿಸಿರುತ್ತಾರೆ.
ಅರ್ಜಿ ಸಲ್ಲಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಡದ ಕಾರಣ ದೂರುದಾರ ಶ್ರೀ ಟಿ.ಕೆ.ಮೊಹಮ್ಮದ್ ರವರು ದಿನಾಂಕ:09/10/2025 ರಂದು ತೋವಿನಕರೆ ಗ್ರಾಮ ಪಂಚಾಯ್ತಿ ಕಛೇರಿಗೆ ಭೇಟಿ ನೀಡಿ, ಬಿಲ್ ಕಲೆಕ್ಟರ್ ಮಾರುತಿ ರವರನ್ನ ಸಂಪರ್ಕಿಸಿದಾಗ, ಮಾರುತಿ ರವರು ಖಾತೆ ಬದಲಾವಣೆ ಮಾಡಿಕೊಡಲು 10,800=00 ರೂ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ತದನಂತರ ದಿನಾಂಕ:14/10/2025 ರಂದು ದೂರುದಾರ ಶ್ರೀ ಟಿ.ಕೆ.ಮೊಹಮ್ಮದ್ ರವರು ಮತ್ತೊಮ್ಮೆ ಗ್ರಾಮ ಪಂಚಾಯ್ತಿ ಕಛೇರಿಗೆ ಭೇಟಿ ನೀಡಿ, ಹಣ ಕಡಿಮೆ ಮಾಡಿಕೊಳ್ಳುವಂತೆ ಕೇಳಿದಾಗ ಬಿಲ್‌ಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮ ರವರು 8,000=00 ರೂ ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.
ದೂರುದಾರ ಶ್ರೀ ಟಿ.ಕೆ.ಮೊಹಮ್ಮದ್ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 15/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು.ಟಿ ರವರು ಮೊ.ನಂ:08/2025 ಕಲಂ-7(a) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ಈ ದಿನ ದಿನಾಂಕ:16/10/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ತೋವಿನಕೆರೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಬೆಳ್ಳಿಗ್ಗೆ 10.45 ಗಂಟೆಗೆ 8,000=00 ರೂ ಲಂಚ ಸ್ವೀಕರಿಸುತ್ತಿದ್ದ ಬಿಲ್‌ಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮ ರವರನ್ನು ತನಿಖಾಧಿಕಾರಿ ಶ್ರೀ ರಾಜು.ಟಿ, ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ತುಮಕೂರು ಲೋಕಾಯುಕ್ತ(Lokayukta) ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಶ್ರೀ ರಾಜು.ಟಿ, ಶ್ರೀ ಬಿ.ಮೊಮ್ಮದ್ ಸಲೀಂ, ಶ್ರೀ ಕೆ.ಸುರೇಶ ಮತ್ತು ಶ್ರೀ ಶಿವರುದ್ರಪ್ಪ ಮೇಟಿ ಮತ್ತು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.