Janataa24 NEWS DESK
Koratagere: ಸಾಹಸ ಸಿಂಹ ವಿಷ್ಣು ಅಭಿಮಾನಿಗಳಿಂದ ಅದ್ದೂರಿ ಜನ್ಮದಿನದ ಸಂಭ್ರಮಾಚರಣೆ.

ಕೊರಟಗೆರೆ: ಕೋಳಾಲ ಹೋಬಳಿ ಕೊರಟಗೆರೆ ತಾಲೂಕಿನ ತೀತ ಗ್ರಾಮದಲ್ಲಿ ವಿಷ್ಣು ಅಭಿಮಾನಿ ಸಂಘದ ವತಿಯಿಂದ ಅದ್ದೂರಿಯದ ಹುಟ್ಟುಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಿದ್ದರು ಸುಮಾರು 15 ಅಡಿ ಕಟೌಟಿಗೆ ಮುಂಜಾನೆ ಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಅದೇ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಸಿಹಿ ಊಟವನ್ನು ವಿತರಿಸಿದರು ಹಾಗೂ ಸಂಜೆ ಏಳು ಗಂಟೆಗೆ ಸರಿಯಾಗಿ ಗ್ರಾಮದ ಸಹಸ್ರಾರು ಅಭಿಮಾನಿಗಳು ಸೇರಿ ಬೃಹತ್ ಗಾತ್ರದ ಕೇಕ್ ಕಟ್ ಮಾಡುವುದರ ಜೊತೆಗೆ ಪಟಾಕಿ ಹೊಡೆದು ಕರ್ನಾಟಕ ರತ್ನ ವಿಷ್ಣು ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕಾರ್ಯಕ್ರಮದಲ್ಲಿ ಮಲ್ಲೇಶ್ ಸ್ಟುಡಿಯೋ ಮಾಲೀಕರಾದ ದಿಲೀಪ್ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದಂತ ರವಿಕುಮಾರ್ ತರಕಾರಿ ಅಂಗಡಿ ಮಾಲೀಕರಾದ ಕೆಂಪರಾಜು ಎಸ್ ಡಿ ಎಂ ಸಿ ಸದಸ್ಯರು ಮಹೇಶ್ ಟಿ ಎಚ್ ಮಧು ಶಿವಕುಮಾರ್ ವೀರಣ್ಣ ರಾಕೇಶ್ ಮುದ್ದರಾಜು ಡೈರಿ ಮಂಜಣ್ಣ ಹಾಗೂ ತೀತಾ ಗ್ರಾಮದ ಎಲ್ಲಾ ಕರ್ನಾಟಕ ರತ್ನ ಅಭಿನವ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿ ದಿಲೀಪ್ ಮಾತನಾಡಿ ಮುಂದಿನ ವರ್ಷ ಹುಟ್ಟು ಹಬ್ಬದ ಆಚರಣೆಯನ್ನು ಇನ್ನಷ್ಟು ಅದ್ದೂರಿಯಾಗಿ ಹಾಗೂ ಗ್ರಾಮದ ಎಲ್ಲರನ್ನೂ ಸೇರಿಸಿ ಒಂದು ವೇದಿಕೆ ಕಾರ್ಯಕ್ರಮವನ್ನು ಮಾಡುತ್ತೇವೆ ಇನ್ನೂ ಊರಿನ ಎಲ್ಲಾ ಅಭಿಮಾನಿಗಳು ನಮ್ಮೊಂದಿಗೆ ಸಹಕಾರ ನೀಡಿ.

ಮುಂದಿನ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ನಿಮ್ಮ ಬೆಂಬಲ ನಮಗೆ ಅಗತ್ಯವಿದೆ ಎಂದು ಗ್ರಾಮಸ್ಥರಲ್ಲಿ ಪ್ರಾರ್ಥಿಸಿದರು ಈ ಸಮಯಕ್ಕೆ ಗ್ರಾಮಸ್ಥರು ಸಾಕ್ಷಿಯಾದರು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವರದಿ: ಜಗದೀಶ್ ತೀತಾ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.