Janataa24 NEWS DESK
Jaggi Vasudev: ಜಗ್ಗಿ ವಾಸುದೇವ್ ಮೆದುಳಿನಲ್ಲಿ ರಕ್ತ ಸ್ರಾವ ದೆಹಲಿ ಅಪೋಲೋ ಆಸ್ವತ್ರೆಯಲ್ಲಿ ಚಿಕಿತ್ಸೆ

ನವದೆಹಲಿ : ಮಾನವನಿಗೆ ಖಾಯಿಲೆ ಅನಾರೋಗ್ಯ ಆರೋಗ್ಯದಲ್ಲಿ ಏರಿಳಿತ ಎನ್ನುವಂತದ್ದು ಯಾವ ವ್ಯಕ್ತಿಯನ್ನೂ ಬಿಡದೆ ವ್ಯಾಪಿಸಿ ಬಿಡುತ್ತದೆ. ನಿತ್ಯ ಧ್ಯಾನ ಪ್ರಾರ್ಥನೆ ಯಾವ ಮೂಲಾಜಿಗೂ ಬಗ್ಗದು ಅನಾರೋಗ್ಯ.
ನಿತ್ಯ ಆರೋಗ್ಯದ ಬಗ್ಗೆ ಕಾಳಜಿ ಧ್ಯಾನ ವ್ಯಾಯಾಮ ಇವು ಎಲ್ಲಾ ಆರೋಗ್ಯಕರ ಚಟುವಟಿಕೆಗಳು .ಕೆಲವೊಮ್ಮೆ ಇವು ಎಲ್ಲವೂ ಇದ್ದರೂ ಅನಾರೋಗ್ಯಕ್ಕೆ ಸಿಲುಕಬೇಕಾದ ಅನಿವಾರ್ಯತೆ ಇದೆ. ಇದೇ ಪರಿಸ್ಥಿತಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರಿಗೆ ಎದುರಾಗಿದೆ.
ಮಾನವ ದೇಹದ ಬಹುಮುಖ್ಯ ಅಂಗವಾದ ಮೆದುಳು ದೇಹದ ಸಂಪೂರ್ಣ ಅಂಗಾಂಗಗಳಿಗೆ ಸಂದೇಶ ರವಾನಿಸುತ್ತದೆ. ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದರೆ ಅದು ಮೆದುಳು. ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ದೇಹಕ್ಕೆ ತೊಂದರೆಯಾಗುವುದಂತೂ ನಿಶ್ಚಿತ. ಹೀಗಾಗಿ ಮೆದುಳಿನ ಆರೋಗ್ಯದತ್ತ ಸೂಕ್ತ ಕಾಳಜಿ ವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಆದರೆ ಇತ್ತೀಚೆಗಿನ ದಿನಗಳಲ್ಲಿ ಮೆದುಳಿನ ರಕ್ತಸ್ರಾವದಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾದ್ರೆ ಈ ಮೆದುಳಿನ ರಕ್ತಸ್ರಾವದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು.
ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆ(Apollo Hospital)ಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಮೆದುಳಿನ ರಕ್ತಸ್ರಾವವು ಮಾರಣಾಂತಿಕ ಸ್ಥಿತಿಯಾಗಿದೆ. ಆದರೆ ಹೆಚ್ಚಿನವರಿಗೆ ಮೆದುಳಿನ ರಕ್ತಸ್ರಾವದಂತಹ ಈ ಗಂಭೀರ ಕಾಯಿಲೆಯ ಬಗ್ಗೆ ಅಷ್ಟಾಗಿಯೂ ತಿಳಿದಿರುವುದಿಲ್ಲ. ಈ ಕಾಯಿಲೆಯು ಗಂಭೀರ ಸ್ವರೂಪ ದಾಟಿದ ಮೇಲೆ ಇದರ ಪರಿಣಾಮದ ಬಗ್ಗೆ ಮನವರಿಕೆಯಾಗುತ್ತದೆ. ಗಂಭೀರವಾಗಿ ಅದರ ಪರಿಣಾಮ ಪಡೆಯುವ ಮುನ್ನ ಪ್ರಾರಂಭದಲ್ಲೇ ಎಚ್ಚರಿಕೆಯಿಂದ ಇರಬೇಕು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
KS Eshwarappa : ರಾಜ್ಯ ಬಿಜೆಪಿ ಪಕ್ಷವನ್ನ ಯಡಿಯೂರಪ್ಪ ಕುಟುಂಬ ಹಾಳುತ್ತಿದೆ -ಕೆ ಎಸ್ ಈಶ್ವರಪ್ಪ