Document

INC: ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಕೈ ಟಿಕೆಟ್ ಘೋಷಣೆ.

Jantaa24 NEWS DESK

INC : ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಕೈ ಟಿಕೆಟ್ ಘೋಷಣೆ.

INC Congress

ಬೆಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ ನಿಂದ ಇತ್ತೀಚೆಗೆ ಹೊರಬಿದ್ದ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಾಕಿ ಉಳಿಸಿಕೊಂಡಿದ್ದು, ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಲೆಕ್ಕಚಾರದಲ್ಲಿ ಇದ್ದ ಹೈಕಮಾಂಡ್ ಕೊನೆಗೂ ಟಿಕೆಟ್ ಫೈನಲ್ ಮಾಡಿದೆ. ಇತ್ತೀಚೆಗೆ 17 ಕ್ಷೇತ್ರದಲ್ಲಿ ಟಿಕೆಟ್ ಘೋಷಣೆ ಮಾಡಿತ್ತು ಒಟ್ಟು 24 ಕ್ಷೇತ್ರಗಳಾಗಿದ್ದವು. ಇದೀಗ ಬಾಕಿ ಉಳಿದ ನಾಲ್ಕು ಕ್ಷೇತ್ರದಲ್ಲಿ ಘೋಷಣೆ ಮಾಡಿ 28 ಲೋಕಸಭಾ ರಣರಂಗವನ್ನು ಇನ್ಷಷ್ಟು ತೀವ್ರಗೊಳಿಸಿದೆ.

ಕಾಂಗ್ರೆಸ್ (Congress) ಹೈಕಮಾಂಡ್ ಈಗಾಗಲೇ 2 ಹಂತದಲ್ಲಿ ರಾಜ್ಯದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 24 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದ್ದು, ಇದೀಗ ಬಾಕಿ ಉಳಿದಿದ್ದ 4 ಕ್ಷೇತ್ರಗಳ ಆಯ್ಕೆ ಫೈನಲ್ ಆಗಿದ್ದು, ಕೊನೆಯ ಸುತ್ತಿನ ಚರ್ಚೆ ಮಾತ್ರ ಬಾಕಿ ಉಳಿದಿದೆ

ಕರ್ನಾಟಕ ಲೋಕಸಭಾ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಈಗಾಗಲೇ ರಾಜ್ಯದ ಪ್ರಮುಖ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ಬಿರುಸಿನ ಪ್ರಚಾರಕ್ಕೆ ದುಮುಕಿ ಎರಡೂ ಪಕ್ಷದ ನಾಯಕರು ಮತಬೇಟೆಗೆ ಇಳಿದಿದ್ದಾರೆ. ಬಿಜೆಪಿ ಮೊದಲ ಪಟ್ಟಿಯಲ್ಲೇ ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇನ್ನೂ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿದೆ. ಇನ್ನು ಕಾಂಗ್ರೆಸ್ ಎರಡು ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಇದೀಗ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಫೈನಲ್ ಆಗಿದ್ದು, ಕೊನೆಯ ಸುತ್ತಿನ ಚರ್ಚೆ ಮಾತ್ರ ಬಾಕಿ ಉಳಿದಿದೆ

ಚಾಮರಾಜನಗರಕ್ಕೆ ಸಚಿವ ಮಹಾದೇವಪ್ಪ ಪುತ್ರ ಸುನಿಲ್ ಬೋಸ್, ಕೋಲಾರಕ್ಕೆ ಎಲ್. ಹನುಮಂತಯ್ಯ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಹಾಗೂ ಬಳ್ಳಾರಿಗೆ ತುಕಾರಾಂ ಹೆಸರು ಅಂತಿಮವಾಗುವ ಸಾಧ್ಯತೆ ಇದ್ದು, ಕೊನೆಯ ಸುತ್ತಿನ ಚರ್ಚೆ ಮಾತ್ರ ಬಾಕಿ ಇದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Election Update : ಲೋಕಸಭೆ ಚುನಾವಣೆ: ರಾಜ್ಯದಲ್ಲಿ 9.64 ಕೋಟಿ ರೂ. ನಗದು ವಶ

Document

Leave a Reply

Your email address will not be published. Required fields are marked *