Janataa24 NEWS DESK
HV Rajeev : ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಶಾಕ್..! ಬಿಎಸ್ ವೈ ಆಪ್ತ ಕಾಂಗ್ರೆಸಗೆ
ಬೆಂಗಳೂರು : ರಾಜ್ಯದಲ್ಲಿ ರಾಜಹುಲಿ ಎಂದೇ ಹೆಸರಾಗಿರುನ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಹಕಾರ ಸಚಿವ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಆಪ್ತ, ಬಿಜೆಪಿ ಮುಖಂಡ ಹೆಚ್.ವಿ ರಾಜೀವ್ ಮಾರ್ಚ್ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವ ಮತ್ತೆ ಮುನ್ನಲೆಗೆ ಬಂದಿದ್ದು ಹಳೆ-ಮೈಸೂರು ಭಾಗದಲ್ಲಿ ಪಕ್ಷವನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿಯ ಪ್ರಬಲ ನಾಯಕನಿಗೆ ಗಾಳ ಹಾಕಿದೆ. ಮುಡಾ(MUDA) ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಮಾರ್ಚ್ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಹೆಚ್.ವಿ ರಾಜೀವ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yadiyurappa) ಹಾಗೂ ಶಾಸಕ ಎಸ್ ಟಿ ಸೋಮಶೇಖರ್ ಆಪ್ತರಾಗಿದ್ದಾರೆ.ಇದರಿಂದ ಬಿಜೆಪಿಯವರಿಗೆ ಶಾಕ್ ಆಗಿ ಕಾಂಗ್ರೆಸ್ ಅವರು ರಾಕ್ ಆಗಿದ್ದಾರೆ.
ಹೆಚ್.ವಿ ರಾಜೀವ್ ಅವರು ತನ್ನದೇ ಆದ ನಾಯಕತ್ವ ಹುಟ್ಟು ಹಾಕಿ ತನ್ನದೇ ಆದ ಅಭಿಮಾನಿಗಳು ಕಾರ್ಯಕರ್ತರನ್ನು ಸಂಪಾದಿಸಿದ್ದಾರೆ. ಕೃಷ್ಣ ರಾಜಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವಿರುದ್ದ ಮುನಿಸಿಕೊಂಡು ಅಸಮಾಧಾನಗೊಂಡಿದ್ದ ಅವರು ಕೆಲವು ದಿನಗಳಿಂದ ತಮ್ಮ ಮೂಲ ಪಕ್ಷದ ಸಕ್ರಿಯ ರಾಜಕಾರಣ ಹಾಗೂ ಚಟುವಟಿಕೆಗಳಿಂದ ದೂರ ಉಳಿದಿದ್ದು,ಪಕ್ಷ ಬಿಡುವ ಸೂಚನೆ ದಟ್ಟವಾಗಿ ಕಾಣಿಸಿ ಕಾಂಗ್ರೆಸ್ ಅಂಗಳದಲ್ಲಿ ನಿಂತಿದ್ದಾರೆ. ಅಲ್ಲದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಹೆಚ್.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಕೇವಲ ಒಂದೂವರೆ ವರ್ಷದಲ್ಲಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶಾಸಕಾರಿಗಿದ್ದ ಎಸ್.ಎ ರಾಮದಾಸ್ ಅವರಿಗೆ ಟಿಕೆಟ್ ತಪ್ಪಿ ತಮಗೆ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು.
ತಮಗೆ ಟಿಕೆಟ್ ಸಿಗುತ್ತದೆ ಎಂದು ಹೈಕಮಾಂಡ್ ನ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಸೂಚನೆಯನ್ನೂ ಪಡೆದಿದ್ದ ಹೆಚ್.ವಿ ರಾಜೀವ್ ಸಾಕಷ್ಟು ಪ್ರಚಾರವನ್ನೂ ಮಾಡಿದ್ದರು. ಆದರೆ ಟಿಕೆಟ್ ಘೋಷಣೆಯಾಗದೆ ಆಘಾತಕ್ಕೆ ಒಳಗಾದರು. ಬ್ರಾಹ್ಮಣ ಸಮುದಾಯದವರೇ ಆದ ಬಿಜೆಪಿ(BJP) ನಗರ ಅಧ್ಯಕ್ಷ ಎಸ್.ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಪಕ್ಷದ ಚಟುವಟಿಕೆಯಿಂದ ದೂರ ಉಳಿದರು. ಇವುಗಳನ್ನೆಲ್ಲಾ ನೋಡಿ ಬೇಸತ್ತು ಮುಂದಿನ ರಾಜಕೀಯ ಜೀವನಕ್ಕಾಗಿ ತನ್ನದೇ ಆದ ಅಭಿಮಾನಿಗಳು ಕಾರ್ಯಕರ್ತರ ಒತ್ತಡದಿಂದ ಇದೀಗ ಕಮಲ ತೊರೆದು ಕೈ ಹಿಡಿಯಲಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Tumakuru: ಹೊರಗಿನ ಅಭ್ಯರ್ಥಿ ಗೆದ್ದ ಇತಿಹಾಸ ನಮ್ಮಲ್ಲಿಲ್ಲ ಸಚಿವ ಡಾ.ಜಿ.ಪರಮೇಶ್ವರ್.
