JANATAA24 NEWS DESK
Hosdurga: ಹಳ್ಳಿ ಸಂತೆ ಆರಂಭಕ್ಕೆ ಕಾಲ ಕೂಡಿ ಬರಲಿಲ್ಲ–ಕುಡುಕರ ತಾಣವಾದ ಶ್ರೀರಾಂಪುರ ಹಳ್ಳಿ ಸಂತೆ.

ಹೊಸದುರ್ಗ: ಹಳ್ಳಿಗಳಲ್ಲಿನ ಜನರಿಗೆ ಉತ್ತಮ ತರಕಾರಿ ಹೂವನ್ನು ಸಹಿತ ದಿನಸಿ ಸಾಮಗ್ರಿಗಳ ಲಭಿಸಬೇಕು ಮತ್ತು ಸ್ಥಳೀಯರ ರೈತರ ಉತ್ಪನ್ನಗಳಿಗೂ ಸೂಕ್ತ ಮಾರುಕಟ್ಟೆ ಲಬಿಸಲಿ ಎಂದು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಯೋಜನೆಯಲ್ಲಿ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ವಿಶೇಷವಾದ ಸಂತೆ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ.
ಆದರೆ ಹೊಸದುರ್ಗ ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾದ ಶ್ರೀರಾಂಪುರ ಗ್ರಾಮದಲ್ಲಿ ಲಕ್ಷಾಂತರಗಳು ಖರ್ಚು ಮಾಡಿ ವಿಶೇಷವಾದ ಹಳ್ಳಿ ಸಂತೆ ನಿರ್ಮಾಣ ಮಾಡಲಾಗಿದೆ.
ಆದರೆ ಶ್ರೀರಾಂಪುರ ಸಂತೆ ಮಾರುಕಟ್ಟೆ ಸರ್ಕಾರದ ಉದ್ದೇಶ ಈಡೇರಿಸದೆ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ಕೇಂದ್ರವಾಗಿ ಅಕ್ರಮ ಚಟುವಟಿಕೆ ಹಾಗೂ ಕುಡುಕರ ಅಡ್ಡೆಯ ತಾಣವಾಗಿ ಪರಿವರ್ತನೆಗೊಂಡಿದೆ.
ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಈ ಭಾಗದಲ್ಲಿ ಆರ್ಥಿಕ ಪ್ರಗತಿಯಾಗಲಿ ಎಂಬ ಸದುದ್ದೇಶದಿಂದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸಂತೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಅವ್ಯವಸ್ಥೆಯ ಕೊಂಪೆಯಾಗಿದೆ. ಇದು ಉದ್ಘಾಟನೆ ಆಗುವ ಮೊದಲೇ ಅದರ ಸ್ವರೂಪ ಕಳೆದುಕೊಂಡು ನೂತನವಾಗಿ ನಿರ್ಮಿಸಿರುವ ಸಂತೆಯ ಆವರಣದಲ್ಲಿ ಮಧ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು ಕವರ್ ಗಳು ಅತಿಯಾಗಿ ಕಸ ಕಡ್ಡಿ ಬಿದ್ದಿರುವುದರಿಂದ ಗಬ್ಬೆದ್ದು ನಾರುವಂಥ ಪರಿಸ್ಥಿತಿ ಎದುರಾಗಿದೆ. ಹಾಗೂ ನಿರ್ಮಿಸಿರುವ ಹಳ್ಳಿ ಸಂತೆ ಮುಂಭಾಗದಲ್ಲಿ ಮಂಜುನಾಥ ಬಾರ್ ಇರುವುದರಿಂದ ಹಳ್ಳಿ ಸಂತೆ ಉಪಯೋಗಕ್ಕೆ ಬಾರದೆ ಕುಡುಕರ ಸಂತೆಯಾಗಿ ಮಾರ್ಪಟ್ಟಿದೆ ಎನ್ನುತ್ತಿದ್ದಾರೆ ಅಲ್ಲಿನ ಸಾರ್ವಜನಿಕರು.
ಗ್ರಾಮ ಪಂಚಾಯಿತಿಗೆ ಆದಾಯ ಮೂಲವಾಗಬೇಕಾಗಿದ್ದ ಸಂತೆ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿದೆ. ಕನಿಷ್ಠ ಮೂಲ ಭೂತ ಸೌಲಭ್ಯಗಳಿಂದ ವಂಚಿತಗೊಂಡಿರುವ ಸಂತೆ ಮಾರುಕಟ್ಟೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ನಿರಾಸಕ್ತಿವಹಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ವರದಿ :ಮಂಜುನಾಥ್ ಡಿ ಶ್ರೀರಾಂಪುರ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.