Janataa24 NEWS DESK
HighCourt: ಹೈ ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರ ಮುಂದೆ ಓರ್ವ ವ್ಯಕ್ತಿ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ.

ಬೆಂಗಳೂರು: ಹೈಕೋರ್ಟ್ ಹಾಲ್‌ನಲ್ಲಿ ಜಡ್ಜ್ ಮುಂದೆಯೇ ವ್ಯಕ್ತಿಯೊಬ್ಬ ಆತ್ಮಹತ್ಯೆ(Suicide)ಗೆ ಯತ್ನಿಸಿದ ಘಟನೆ ಇಂದು ಹೈ ಕೋರ್ಟ್ ಕಲಾಪದಲ್ಲಿ ನಡೆದಿದೆ.
ಮುಖ್ಯ ವಿಭಾಗೀಯ ಪೀಠದಲ್ಲಿ ವ್ಯಕ್ತಿಯೊಬ್ಬ ರೇಜರ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಆ ವ್ಯಕ್ತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ನ್ಯಾಯ ಪೀಠ ಸೂಚನೆ ನೀಡಿದೆ.
ಹೈಕೋರ್ಟ್ ಹಾಲ್‌ನಲ್ಲಿ ತನಗೆ ನ್ಯಾಯ ಕೊಡಿ ಎಂದು ಕೂಗಾಡಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆಗೆ ಬೇಸರ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಹೈಕೋರ್ಟ್ ಹಾಲ್‌ಗೆ ಆ ವ್ಯಕ್ತಿ ರೇಜರ್ ಬ್ರೇಡ್ ಹೇಗೆ ಒಳಗೆ ತಂದ ಎಂದು ಪ್ರಶ್ನಿಸಿದೆ.
ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಕಲಾಪವನ್ನು ಮುಂದೂಡಲಾಗಿದ್ದು, ಗಾಯಾಳುವಿನ ಬಗ್ಗೆ ಮಾಹಿತಿ ನೀಡಲು ರಿಜಿಸ್ಟ್ರಾರ್(Registrar) ಜನರಲ್‌ಗೆ ಸೂಚನೆ ನೀಡಿದೆ.
https://www.janataa24.com/fake-police-seized-foreign-currency-worth-21-lak/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube