Document

HD Devegowda : ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ದ ಚುನಾವಣಾ ಅಯೋಗಕ್ಕೆ ದೇವೆಗೌಡರು ದೂರು.

Janataa24 NEWS DESK

 

HD Devegowda : ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ದ ಚುನಾವಣಾ ಅಯೋಗಕ್ಕೆ ದೇವೆಗೌಡರು ದೂರು.

HD Devegowda
Hassan DC

ಹಾಸನ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಜಿಲ್ಲಾ ಉಸ್ತುವಾರಿ ವ್ಯಾಪ್ತಿಗೆ ಬರುವ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ(Sathyabhama IAS) ವಿರುದ್ದ ಕೇಳಿ ಬಂದ ದೂರು.
ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರಿಂದ ಚುನಾವಣೆ ಆಯೋಗಕ್ಕೆ ಹಾಸನ ಜಿಲ್ಲಾಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷದ ಏಜೆಂಟ್ ರಂತೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರನ್ನ ಈ ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ದೂರು ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ(Prajwal Revanna) ಪ್ರತಿನಿಧಿಸುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನಾ ಕಂಡ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ದೂರಿನ ಅಧಾರದ ಮೇಲೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ(Sathyabhama) ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಹಾಗೂ ರಾಜಣ್ಣನಿಗೂ ಮೊದಲಿಂದಲೂ ರಾಜಿ ಒಪ್ಪಂದಗಳಿಲ್ಲದೇ ರಾಜಕೀಯ ಮಾಡಿಕೊಂಡು ಬಂದಿದ್ದರು. ತುಮಕೂರು ಲೋಕಸಭೆ ಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಕಟುವಾಗಿ ಟೀಕಿಸಿ ಅವರ ಸೋಲಿಗಾಗಿ ರಾಜಣ್ಣನವರು ಪಣತೊಟ್ಟು ಬಿಜೆಪಿ ಅಭ್ಯರ್ಥಿ ಬಸವರಾಜು ಅವರನ್ನಾ ಗೆಲ್ಲಿಸಿದ್ದರು ಎನ್ನುವ ಆರೋಪ ಇಂದಿಗೂಕೆ ಎನ್ ರಾಜಣ್ಣನವರ ಮೇಲೆದೆ. ಈಗ ದೇವಗೌಡರು ಕೆ ಎನ್ ರಾಜಣ್ಣ ಉಸ್ತವಾರಿ ವ್ಯಾಪ್ತಿಯ ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಕುರಿತ ಅರೋಪಕ್ಕೆ ರಾಜಣ್ಣನವರು ಏನು ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv 

 

 

 

Document

Leave a Reply

Your email address will not be published. Required fields are marked *