Janataa24 NEWS DESK
H Vishwanath: ಕುಮಾರಸ್ವಾಮಿ ಜೊತೆ ಮತ್ತೆ ಕೈ ಜೋಡಿಸಿದ ಹೆಚ್ ವಿಶ್ವನಾಥ್

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸಿದಂತೆ ಕೆಲವಷ್ಟು ನಾಯಕರು ಯಾವುದೇ ವಿಚಾರವಾಗಿ ಪಕ್ಷ ಹಾಗೂ ಸಂಪರ್ಕ ಸಂವಹನದಿಂದ ದೂರ ಉಳಿದರೆ ಇನ್ನೂ ಕೆಲ ನಾಯಕರು ಮುನಿಸು ಮರೆತು ಒಂದಾಗುತ್ತಿರುವುದು ಬಿರಕು ಬಿಟ್ಟ ಮನೆ ಮರು ಕಟ್ಟಿದಂತೆ ಕಾಣುತ್ತಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ ಕೆಡವಿದ ಕಾಲದಿಂದ ದೂರ ಉಳಿದಿದ್ದ ಹಳ್ಳಿಹಕ್ಕಿ ಎಂದೇ ಖ್ಯಾತಿಯಾಗಿರುವ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಇಂದು ಮಾಜಿ ಮುಖ್ಯಮಂತ್ರಿ ಜೊತೆ ಮುನಿಸು ಮರೆತು ಒಂದಾಗಿದ್ದಾರೆ.
ಪ್ರೀತಿಯಿಂದ ವಿಶ್ವಣ್ಣ ಎಂದೇ ಹೆಸರಿಟ್ಟು ಕರೆಯುತ್ತಿದ್ದ ಹೆಚ್ ಡಿ ಕುಮಾರಸ್ವಾಮಿ (Kumaraswamy)ಅವರಿಗೆ ಇಂದು ಆನೆಬಲ ಬಂದಂತೆ ಆಗಿದೆ. ಸುಮಾರು ವರ್ಷಗಳ ಕಾಲ ಮಾತು ಕಥೆ ಇಲ್ಲದೇ ಇಲ್ಲದವರು ಇಂದು ಒಂದಾಗಿರುವುದು ಹಲವಾರು ಕುತೂಹಲಕ್ಕೆ ತೆರೆ ಎಳೆದಿದೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕೆ ಆರ್ ನಗರ ಸೇರಿದೆ. ಈ ವ್ಯಾಪ್ತಿಯ ನಾಯಕರು ತಮ್ಮ ಭಿನ್ನಾಭಿಪ್ರಾಯ ಮುನಿಸು ಮರೆತು ಹೊಂದಾಗಿರುವುದು ಅನೇಕ ವಿಷಯಗಳ ಚರ್ಚೆ ಮುನ್ನೆಲೆಗೆ ಬಂದಿವೆ. ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ ಮಿತ್ರರೂ ಎಲ್ಲಾವೂ ಕಾಲ ಕಳೆದಾಗ ಆಗೆ ರಾಜಕಾರಣ ಎಂಬುವುದು ನಿಂತ ನೀರಲ್ಲ ಭಿನ್ನಾಭಿಪ್ರಾಯಗಳು ಮುನಿಸುಗಳು ಸರ್ವೇಸಾಮನ್ಯ ಅವೆಲ್ಲವುಗಳನ್ನು ನಾವು ತಿದ್ದಿಕೊಂಡು ನಡೆಯಬೇಕಷ್ಟೆ ಎಂದು ಅಭಿಪ್ರಾಯ ಪಟ್ಟರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Central Govt :ಕೇಂದ್ರ ಸರ್ಕಾರ ಬರ ಪರಿಹಾರ ವಿಳಂಬಕ್ಕೆ ಕಾರಣನಲ್ಲ – ಕೇಂದ್ರ ವಿತ್ತ ಸಚಿವೆ.