JANATAA24 NEWS DESK
Gubbi: ಯುವಜನತೆಯು ಮಾದಕ ವಸ್ತುಗಳಿಂದ ದೂರವಿರಿ–ನ್ಯಾಯಮೂರ್ತಿ ಕಿರಣ್.
ಗುಬ್ಬಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಅಬಕಾರಿ ಇಲಾಖೆ ಸಹಕಾರದಿಂದ ಎಸ್ ಆರ್ ಎ ಕಾಲೇಜ್ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಾಧೀಶರಾದ ಕಿರಣ್ ಚಾಲನೆ ನೀಡಿ ಮಾತನಾಡಿದವರು.
ಎನ್ ಡಿಪಿಎಸ್ ಕಾಯ್ದೆ ಕುರಿತ ಕಾನೂನು ಅರಿವು ಹಾಗೂ ನೆರವು ಅಡಿಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 17 ಹಾಗೂ 18 ರ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಚಂಚಲ ಮನಸ್ಸು ಹೊಂದುವುದು ಸಹಜ ಪ್ರಕ್ರಿಯೆ. ಆದರೆ ಅದನ್ನು ಅದೋಟಿಯಲ್ಲಿ ಇಟ್ಟುಕೊಳ್ಳುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿ ಇರಲಿದ್ದು, ತಂತ್ರಜ್ಞಾನ ಬದಲಾದಂತೆ ಮನುಷ್ಯನು ಬದಲಾಗಬೇಕಾದದ್ದು ಪ್ರಕೃತಿಯ ನಿಯಮ. ಹಾಗಂತ ಒಳ್ಳೆಯ ಗುಣಗಳನ್ನು ಹೊಂದಿರುವ ವಿಚಾರಗಳನ್ನು ಗಳಿಗೆ ತೂರಿ ದುಶ್ಚಟಗಳಿಗೆ ಮಾರು ಎಷ್ಟು ಸರಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಎಷ್ಟರ ಮಟ್ಟಿಗೆ ವಾತಾವರಣ ನಿರ್ಮಾಣವಾಗಿದೆ ಎಂದರೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಆಡಿಟ್ ಆಗಿದ್ದು, ಇದರಿಂದ ಮಾದಕ ವಸ್ತುಗಳ ಮೇಲೆ ಮಾರು ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಹಂತಕ್ಕೆ ಹೋಗದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಬಕಾರಿ ನಿರೀಕ್ಷಕ ಶೇಖ್ ಇಮ್ರಾನ್ ಮಾತನಾಡಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಸಂದರ್ಭಲ್ಲಿ ತಾವು ಅನುಭವಿಸಿದ ಸಮಸ್ಯೆಗಳನ್ನು ನೆನೆದು ತಮ್ಮ ಜೊತೆ ವ್ಯಾಸಂಗ ಮಾಡಿದ ಸ್ನೇಹಿತರು ಕೆಟ್ಟ ಚಟಗಳಿಗೆ ಮಾರುಹೋಗಿ ಇಂದು ಅವರ ಮನಸ್ಥಿತಿ ನೋಡಿದರೆ ಶೋಚನೀಯ ಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಆ ರೀತಿಯ ಸಮಸ್ಯೆಗಳು ಇತ್ತೀಚಿನ ವಿದ್ಯಾರ್ಥಿ ಗಳಲ್ಲಿ ಇಲ್ಲದೆ ಇದ್ದು, ಕೆಟ್ಟ ಚಟಗಳಿಗೆ ಮಾರುಹೋಗದೆ ಒಳ್ಳೆಯ ವಿಚಾರಗಳಿಗೆ ಮಾರುಹೋಗಿ ಉತ್ತಮ ಜೀವನವನ್ನು ಕಟ್ಟಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ಕಡೆಗೆ ಗಮನ ಹರಿಸುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಪ್ರಾಂಶುಪಾಲ ಸಿ ಜಿ ಸತೀಶ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ಮಧ್ಯವ್ಯಸನದಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಉತ್ತಮ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು, ನಮ್ಮ ಕಾಲೇಜು ನಲ್ಲಿ ಯಾರಾದರೂ ದುಶ್ಚಟಕ್ಕೆ ಮಾರು ಹೋಗಿರುವವರು ಯಾರಾದರೂ ಇದ್ದರೆ ಈ ಕಾರ್ಯಕ್ರಮದ ಬಳಿಕ ಆಲೋಚನೆ ಮಾಡಿ ಮಾದಕ ದ್ರವ್ಯ ದಿಂದ ಹೊರ ಬರುವಂತೆ ಕರೆ ನೀಡಿದ ಅವರು ನಮ್ಮ ಕಾಲೇಜಿನಲ್ಲಿ ಅಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಇಲ್ಲ ಎಂಬ ಮನೋಭಾವನೆ ಇದ್ದು, ದುಷ್ಟರ ಜೊತೆಯಲ್ಲಿ ಯಾವುದೇ ರೀತಿಯ ಸ್ನೇಹ ಮಾಡದೆ ಸಜ್ಜನರ ಜೊತೆ ಸ್ನೇಹ ಮಾಡಿ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ ಶೋಭಾ , ಮಾಜಿ ಪ.ಪಂ ಸದಸ್ಯ ಜಿ ಆರ್ ಶಿವಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ರವೀಶ್, ಅಬಕಾರಿ ಇಲಾಖೆ ಸಿಬ್ಬಂದಿ, ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.