Document

Gubbi: ಉಪಾಧ್ಯಾಯರು ಮಕ್ಕಳಲ್ಲಿ ಮನಸ್ಸಿನಲ್ಲಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕೆಲಸ ಮಾಡಬೇಕು–ಶಾಸಕ ಎಸ್ ಆರ್ ಶ್ರೀನಿವಾಸ್.

JANATAA24 NEWS DESK 

 

 

Gubbi: ಉಪಾಧ್ಯಾಯರು ಮಕ್ಕಳಲ್ಲಿ ಮನಸ್ಸಿನಲ್ಲಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕೆಲಸ ಮಾಡಬೇಕು–ಶಾಸಕ ಎಸ್ ಆರ್ ಶ್ರೀನಿವಾಸ್.

Gubbi teachers should work to build a strong India in the minds of children – MLA SR Srinivas.

ಗುಬ್ಬಿ :  ಪಟ್ಟಣದ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು 77 ನೇ ಗಣರಾಜ್ಯೋತ್ಸವ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಹಬ್ಬಗಳಲ್ಲಿ ವಿಶೇಷವಾಗಿ ಮಕ್ಕಳು ಭಾಗವಹಿಸಬೇಕಿದ್ದು ಆದರೆ ಭಾಗವಹಿಸುವವರ ಸಂಖ್ಯೆ ಕಡಿಮೆ. ಉಪಾಧ್ಯಾಯರು ಮಕ್ಕಳಲ್ಲಿ ದೇಶ ಭಾವನೆಯನ್ನು ಮೂಡಿಸುವ ಕೆಲಸ ಮಾಡಬೇಕಿದ್ದು, ಪ್ರಸ್ತುತ ವ್ಯವಸ್ಥೆಯಲ್ಲಿ ನಾವು ಸಾಗುತ್ತಿರುವುದನ್ನು ನೋಡಿದರೆ ಬಲಿಷ್ಠ ಭಾರತವನ್ನು ಕಟ್ಟುವ ಕಡೆಗೆ ಗಮನ ಹರಿಸುವಂತೆ ಅರಿವು ಮೂಡಿಸುವ ಕೆಲಸ ಆಗಬೇಕು.

ಭಯೋತ್ಪಾದನೇಯು ಇಡಿ ವಿಶ್ವವನ್ನು ಕಾಡುತ್ತಿರುವುದನ್ನು ನೋಡುತ್ತಿದ್ದೇವೆ, ಜಮ್ಮು ಕಾಶ್ಮೀರದಲ್ಲಿ ನೋಡುತ್ತಿದ್ದೀರಿ ಎಂಥ ಎಂಥ ಮಕ್ಕಳು ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಉಪಾಧ್ಯಾಯರು ಒಳ್ಳೆಯ ಶಿಕ್ಷಣವನ್ನು ಕೊಟ್ಟು ದೇಶ ಭಕ್ತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡಿದರೆ, ಸತ್ಪ್ರಜೆಗಳಾಗಿ ಈ ಭಾರತದಲ್ಲಿ ಬೆಳಗುವುದಕ್ಕೆ ಸಹಕಾರಿಯಾಗುತ್ತದೆ. ನಾವು ಬದುಕುವುದಕ್ಕೆ ಎಷ್ಟು ಸೈನಿಕರನ್ನು ಪೊಲೀಸರನ್ನು ಅವಲಂಬಿಸಿತ್ತೇವೆ ಸ್ವಾತಂತ್ರ ಭಾರತದ ಪ್ರಜೆಗಳಾದ ನಾವು ನಮ್ಮನ್ನು ನಾವೇ ಅವಲೋಕನ ಮಾಡಿಕೊಳ್ಳುವಂತೆ ಕರೆ ನೀಡಿದರು.

 

ತಹಶೀಲ್ದಾರ್ ಆರತಿ ಬಿ ಸಂದೇಶ ನೀಡಿ ಮಾತನಾಡಿದ ಅವರು ಇಂದು ಭಾರತವೊಂದು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪ್ರಪಂಚ ಎದುರು ನಿಂತ ದಿನ. ಸಂವಿಧಾನ ಒಂದು ಕೇವಲ ಪುಸ್ತಕವಲ್ಲ ಅದು ಇಡೀ ನಮ್ಮ ದೇಶದ ಪ್ರಜಾಪ್ರಭುತ್ವದ ಅಂಗ, ಇಡೀ ದೇಶದ ಕೇಂದ್ರ ಬಿಂದು. ಸಂವಿಧಾನದ ಮೌಲ್ಯವನ್ನು ಪ್ರತಿಯೊಬ್ಬ ಪ್ರಜೆಯೂ ಎತ್ತಿಹಿಡಿಯುವ ಮುಖೇನ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಕಾರ್ಯ ಮಾಡಬೇಕಿದೆ. ಒಳ್ಳೆಯ ನಾಗರಿಕರಾಗಿ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ದೇಶದ ಏಕತೆ, ಸಮಾನತೆ, ಸ್ವಾತಂತ್ರ್ಯವನ್ನು ಸಂಭ್ರಮಿಸೋಣ. ವೀರ ಸೈನಿಕರಿಗೆ ಸಂವಿಧಾನ ನಿರ್ಮಾತೃಗೆ ಇಂದು ನಾವು ಸ್ಮರಿಸೋಣ.

2026 ನೇ ವರ್ಷದ ಭಾಷಣ ಇತಿಹಾಸವನ್ನು ಕೇಳುವ ಕಾರ್ಯಕ್ರಮವಲ್ಲ. ಅದು ಇಂದಿನ ಭಾರತದ ಸವಾಲು ಹಾಗೂ ಯುವ ಜನರ ಪಾತ್ರದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯು ಇದೆ, ಗಣರಾಜ್ಯೋತ್ಸವವು ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯವಿದೆ ಎಂಬ ಸತ್ಯವನ್ನು ನೆನಪಿಸುತ್ತದೆ. ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಶಿಸ್ತು ಜವಾಬ್ದಾರಿ ಮತ್ತು ಸಂವಿಧಾನದ ಗೌರವ ಅಗತ್ಯ, ನಾವು ಪ್ರತಿದಿನ ಉತ್ತಮ ನಾಗರಿಕರಾಗಲೂ ಪ್ರಯತ್ನಿಸಿದಾಗ ಮಾತ್ರ ಗಣರಾಜ್ಯೋತ್ಸವ ಆಚರಣೆ ಆಚರಿಸುವುದಕ್ಕೂ ಸಾರ್ದಕತೆ ಸಿಗುತ್ತದೆ. ಜನವರಿ 26 ಮಾತ್ರವಲ್ಲ ಪ್ರತಿದಿನವೂ ಸಂವಿಧಾನವನ್ನು ಪಾಲಿಸಿದಾಗ ಮಾತ್ರ ಭಾರತವು ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ತಿಳಿಸಿದರು.

 

ಇದೇ ವೇಳೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸನ್ಮಾನಿಸಿ, ಬೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಕುರಿತು ಚರ್ಚಾ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

 

ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ ಆರ್ ವೆಂಕಟೇಶ್, ತಾ.ಪಂ ಇಓ ರಂಗನಾಥ್, ಬೆಸ್ಕಾಂ ಇಲಾಖೆ ಎಇಇ ಜಲಜೇಶ್, ಡಿ ವೈ ಎಸ್ಪಿ ಶೇಖರ್, ನೌಕರರ ಸಂಘದ ಅಧ್ಯಕ್ಷ ಗುರುಪ್ರಸಾದ್ ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಕಸಾಪ ಅಧ್ಯಕ್ಷ ಯತೀಶ್, ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

 

ವರದಿ :ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *