Document

Gubbi: ಗಂಟೆ ಬಸವೇಶ್ವರ ಸ್ವಾಮಿಯ ಅದ್ದೂರಿ ಜಾತ್ರಾ ಮಹೋತ್ಸವ.

 

JANATAA24 NEWS DESK 

 

 

Gubbi: ಗಂಟೆ ಬಸವೇಶ್ವರ ಸ್ವಾಮಿಯ ಅದ್ದೂರಿ ಜಾತ್ರಾ ಮಹೋತ್ಸವ.

 

Gubbi - The grand fair of Lord Basaveshwara Swamy.

ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ನಡವಲಪಾಳ್ಯ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಇತಿಹಾಸ ಪ್ರಸಿದ್ದ ಘಂಟೆ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

 

ಪ್ರತಿ ವರ್ಷ ಯುಗಾದಿ ಹಬ್ಬಕ್ಕಿಂತ ಮುಂಚಿತವಾಗಿ ರೈತರು ಸ್ಥಳೀಯವಾಗಿ ಬೆಳೆದಂತಹ ದವಸ ಧಾನ್ಯಗಳಿಂದ ಸಂಗ್ರಹಿಸಿ ಗ್ರಾಮಸ್ಥರು ಎಲ್ಲರೂ ಸೇರಿ ಬಸವಣ್ಣನಿಗೆ ಪರಾವ್ ಮಾಡಲಾಗುತ್ತದೆ. ರಾಗಿ ಮುದ್ದೆ, ಮಿಕ್ಸ್ ಕಾಳು, ಹಲಸಿನ ಕಾಯಿ ಪದಾಥ, ಅನ್ನ ಪಾಯಸ ಬೂಂದಿ ಅಡಿಕೆ ಎಲೆಯ ಊಟ ವಿಶೇಷವಾಗಿತ್ತು.

 

ಗ್ರಾಮಸ್ಥರಿಂದ ಆರತಿ ಸೇವೆಯು ಲಿಂಗದವೀರರ ಕುಣಿತ, ಕರಡಿ ವಾದ್ಯ, ನಾದಸ್ವರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸವಣ್ಣನ ಗದ್ದುಗೆಗೆ ಪ್ರದಕ್ಷಣೆ ಮಾಡಿ ಆರತಿಯನ್ನು ಅರ್ಪಿಸಿ ಭಕ್ತಿಯನ್ನು ಸಮರ್ಪಿಸಿದರು.

 

ಬಸವಣ್ಣನ ದೇವಸ್ಥಾನದಲ್ಲಿ ಗದ್ದಿಗೆ ಬೆಳಗಿನ ಜಾವಾದಿಂದ ಬಸವಣ್ಣನವರಿಗೆ ವಿವಿಧ ಅಭಿಷೇಕಗಳನ್ನು ಮಾಡಿ. ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಶನಕ್ಕೆ ಬಂದ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕುಲದ ಯಜಮಾನರಾದ ರಾಜಣ್ಣಗೌಡ್ರು, ಬಸವರಾಜು, ಲಕ್ಷ್ಮೀನರಸಯ್ಯ, ಮಧುಸೂಧನ್, ಬಸವರಾಜು, ನಟರಾಜು, ಚಿಕ್ಕರೇವಣ್ಣ, ಬಾಳೆಕಾಯಿ ತಮ್ಮಯ್ಯಣ್ಣ, ಪ್ರಸಾದ್

ಗ್ರಾಮಸ್ಥರು, ಭಕ್ತರು, ಸಾರ್ವಜನಿಕರು, ಅಗ್ನಿವಂಶ ಸಮುದಾಯದವರು ಇತರರು ಇದ್ದರು

 

ವರದಿ : ಶ್ರೀಕಾಂತ್ ಗುಬ್ಬಿ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *