JANATAA24 NEWS DESK
Gubbi: ಸಾರ್ವಜನಿಕ ಹಿತ ದೃಷ್ಟಿಯಿಂದ ಹಬ್ಬ ಹರಿದಿನ ಆಚರಿಸಲು ತಾಲೂಕು ಆಡಳಿತದಿಂದ ಸಮಿತಿ ರಚನೆ.

ಗುಬ್ಬಿ : ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ತಾಲ್ಲೂಕಿನಲ್ಲಿ ಊರ ಹಬ್ಬ/ಜಾತ್ರೆಗಳನ್ನು ಆಚರಿಸಲು ಮತ್ತು ಆಹಾರ/ಪ್ರಸಾದವನ್ನು ವಿತರಿಸಲು ಜಿಲ್ಲಾಧಿಕಾರಿಗಳು ಆದೇಶದಂತೆ ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಆರತಿ ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಆಚರಿಸುವ ಊರ ಹಬ್ಬ/ಜಾತ್ರೆಗಳಲ್ಲಿ ವಾಡಿಕೆಯಾನುಸಾರ ಆಹಾರ/ಪ್ರಸಾದವನ್ನು ಭಕ್ತಾಧಿಗಳಿಗೆ ವಿತರಿಸಲಾಗುತ್ತಿದೆ. ಆದರೆ, ಕೆಲ ದೇವಸ್ಥಾನದ ಸಮಿತಿಗಳು ಅಥವಾ ಆಯೋಜಕರುಗಳು ಕುಡಿಯುವ ನೀರಿನ ಗುಣಮಟ್ಟ ಮತ್ತು ಆಹಾರ ತಯಾರಿಸುವಲ್ಲಿ ಸೂಕ್ತ ಜಾಗ್ರತೆ ವಹಿಸದೇ ಇರುವುದರಿಂದ ಜಾತ್ರೆಗಳಲ್ಲಿ ಭಾಗವಹಿಸಿ ಆಹಾರ ಸೇವಿಸಿದವರಲ್ಲಿ ತೀವ್ರ ವಾಂತಿ-ಭೇದಿ ಉಂಟಾಗಿ, ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳು ಈ ಹಿಂದೆ ತಾಲ್ಲೂಕಿನಲ್ಲಿ ವರದಿಯಾಗಿರುತ್ತವೆ. ಆದ್ದರಿಂದ ಆಯೋಜಕರ ನಿರ್ಲ್ಯಕ್ಷತೆಯಿಂದ ಆಹಾರ/ಪ್ರಸಾದ/ಮಜ್ಜಿಗೆ ಇತ್ಯಾದಿಗಳನ್ನು ಸೇವಿಸಿ ಸಾರ್ವಜನಿಕರು ತೀವ್ರ ಅನಾರೋಗಕ್ಕೆ ತುತ್ತಾಗುವುದನ್ನು ತಪ್ಪಿಸಲು, ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಜಾತ್ರೆಗಳ ಆಚರಣೆಗೆ ಮತ್ತು ಆಹಾರ/ಪ್ರಸಾದ ವಿತರಣೆಗೆ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲು ಈ ಕೆಳಕಂಡಂತೆ ತಾಲ್ಲೂಕುಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದು ತಿಳಿಸಿದರು.
ಸಮಿತಿಯಲ್ಲಿ ಅಧ್ಯಕ್ಷರಾಗಿ ತಹಶೀಲ್ದಾರ್, ಸದಸ್ಯ ಕಾರ್ಯದರ್ಶಿಯಾಗಿ ತಾ.ಪಂ ಇಓ, ಸದಸ್ಯರಾಗಿ ವೃತ್ತ ನಿರೀಕ್ಷಕರು, ತಾಲೂಕು ವೈದ್ಯಾಧಿಕಾರಿ, ಆಹಾರ ಸುರಕ್ಷಿತ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಊರ ಹಬ್ಬ/ಜಾತ್ರೆ ಇತ್ಯಾದಿಗಳ ಆಚರಣೆ ವೇಳೆ ಯಾವುದೇ ಆರೋಗ್ಯ ಸಂಬಂಧಿತ ತೊಂದರೆಗಳು ಸಂಭವಿಸದಂತೆ ಹಾಗೂ ಆಹಾರ/ಪ್ರಸಾದ ವಿತರಣೆಗೆ ಅನುಮತಿ ಪಡೆಯುವುದು ಕಡ್ಡಾಯವೆಂದು ತಿಳಿಸಿದೆ. ತಪ್ಪಿದಲ್ಲಿ ಆಗುವ ಅನಾಹುತಗಳಿಗೆ ಆಯೋಜಕರ ನೇರ ಹೊಣೆಗಾರರಾಗ ಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಶ್ರೀಕಾಂತ್ ಗುಬ್ಬಿ.
Bengaluru: ಡಿಜಿಪಿ ರಾಮಚಂದ್ರ ರಾವ್ ಡಿಸ್ ಮಿಸ್ ಕೂಡ ಆಗಬಹುದು-ಡಾ.ಜಿ. ಪರಮೇಶ್ವರ್
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.