Document

Gubbi: ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕೆ ಅಧಿಕಾರಿಗಳಿಗೆ ಕಡಕ್ ಸೂಚನೆ.

Janataa24 NEWS DESK 

 

Gubbi: ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕೆ ಅಧಿಕಾರಿಗಳಿಗೆ ಕಡಕ್ ಸೂಚನೆ.

Gubbi: ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕೆ ಅಧಿಕಾರಿಗಳಿಗೆ ಕಡಕ್ ಸೂಚನೆ.

ಗುಬ್ಬಿ : ಎಸ್ ಎಸ್ ಎಲ್ ಸಿ(SSLC) ಫಲಿತಾಂಶವು ಕಳೆದ ಶೈಕ್ಷಣಿಕ ಫಲಿತಾಂಶವು ಎರಡನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಹೋಗಲು ಮುಖ್ಯ ಶಿಕ್ಷಕರು ಇಲ್ಲವೇ ಬಿಇಓ ಯಾರು ಕಾರಣ ಎಂದು ಅಧಿಕಾರಿಗಳಿಗೆ ಉತ್ತಮ ಫಲಿತಾಂಶ ತರುವಂತೆ ಶಾಸಕ ಎಸ್ ಆರ್ ಶ್ರೀನಿವಾಸ್(SR Srinivas) ಕಡಕ್ ಸೂಚನೆ ನೀಡಿದರು.

 

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕರು ಎರಡನೇ ಸ್ಥಾನದಲ್ಲಿ ಇದ್ದ ಫಲಿತಾಂಶ ಐದನೇ ಸ್ಥಾನಕ್ಕೆ ಹೋಗಲು ಹೇಗೆ ಸಾದ್ಯ ಈ ಸಾರಿ ಮೊದಲ ಸ್ಥಾನಕ್ಕೆ ಹೋಗದೆ ಇದ್ದರೂ ಪರವಾಗಿಲ್ಲ ಎರಡನೇ ಸ್ಥಾನಕ್ಕೆ ತರಲೇಬೇಕು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲಿಲ್ಲ ಎಂದರೆ ಖಾಸಗಿ ಶಾಲೆಗೆ ಹೋಗುವ ಸನ್ನಿವೇಶ ಉದ್ಭವ ಆಗುತ್ತದೆ.

 

ನಿವೃತ್ತ ಶಿಕ್ಷಕರ ತಂಡವನ್ನು ರಚಿಸಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಮುಂದಾಗಬೇಕಿದೆ, ವಿಷಯವಾರು ಶಿಕ್ಷಕರು ಪಾಠ ಮಾಡುವುದಾಗಿ ಹೇಳುವವರು ತಾವು ಓದುವ ವೇಳೆ ವಿಷಯವಾರು ಶಿಕ್ಷಕರು ಇದ್ದರೆ ಎಂದು ಪ್ರಶ್ನಿಸಿದ ಶಾಸಕರು ಸಬೂಬು ಉತ್ತರ ಕೊಡದೆ ಉತ್ತಮ ಫಲಿತಾಂಶ ತರುವಂತೆ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

 

ತಹಶೀಲ್ದಾರ್ ಆರತಿ ಬಿ ಮಾತನಾಡಿ ಶಿಕ್ಷಕರು ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗಿಸುವ ಬದಲು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಕಷ್ಟವಾದರೂ ಹೇಗೆ? ಯಾವ ವಿಷಯದಲ್ಲಿ ತಮ್ಮ ಮಕ್ಕಳು ಕಡಿಮೆ ಅಂಕ ಪಡೆದಿದ್ದು,

 

ಆ ವಿಷಯಕ್ಕೆ ಹೆಚ್ಚು ಆಸಕ್ತಿ ವಹಿಸಿ ಉತ್ತಮ ಫಲಿತಾಂಶ ಕೊಡುವ ಕಡೆಗೆ ಗಮನ ನೀಡುವಂತೆ ಸೂಚನೆ ನೀಡಿದ ತಹಶೀಲ್ದಾರ್ ಗುಣಾತ್ಮಕ ಫಲಿತಾಂಶದ ಬಗ್ಗೆ ಮಾಹಿತಿ ನೀಡಿ ಅದು ಬಿಟ್ಟು ಸರ್ಕಾರ ನೀಡಿರುವ ನಿಯಮಗಳ ಬಗ್ಗೆ ಮಾತನಾಡುವ ಬದಲು ತಮ್ಮದೇ ವಿಶೇಷ ಮುದುವರ್ಜಿ ವಹಿಸಿ ಉತ್ತಮ ಫಲಿತಾಂಶ ತರುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

 

ಈ ಸಂದರ್ಭದಲ್ಲಿ ಡಿಡಿಪಿಐ ರಾಜಕುಮಾರ್, ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಪ್ರಭಾರಿ ತಾ.ಪಂ ಇಓ ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಬಿ ಆರ್ ಸಿ ಮಧುಸೂಧನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ತಾಲೂಕಿನ ವಿವಿಧ ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *