JANATAA24 NEWS DESK
Gubbi: ಉತ್ತಮ ಆರೋಗ್ಯಕರ ಸಮಾಜಕ್ಕೆ ಕ್ರೀಡೆ ಅವಶ್ಯಕ–ಡಾ.ಜಿ ಪರಮೇಶ್ವರ್.

ಗುಬ್ಬಿ: ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಪಟ್ಟಣದ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್, ವಾಕಥಾನ್ 2026ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಾವು ಅಲ್ಲಲ್ಲೇ ಮ್ಯಾರಥಾನ್ ಗಳನ್ನು ಮಾಡಲಾಗುತ್ತಿದೆ. ಬೆಂಗಳೂರು ಮ್ಯಾರಥಾನ್ ಅನ್ನು ಎನ್ ಜೆ ಎಂದು ಮಾರ್ಪಡಿಸಿ, ಇದರಲ್ಲಿ 10ಕೆ, 5ಕೆ, 3ಕೆ, ಅಂಗವಿಕಲರು, ಹಿರಿಯ ನಾಗರಿಕರು ಮುಂತಾದ ಎಲ್ಲಾ ವಿಧದ ಸಾರ್ವಜನಿಕರು ಭಾಗವಹಿಸುವ ನಿಟ್ಟಿನಲ್ಲಿ ಮಾಡಲಾಗಿದೆ. ಪ್ರಮುಖವಾಗಿ ಎರಡು ಕಾರಣದಿಂದ ಮ್ಯಾರಥಾನ್ ಮಾಡಲಾಗುತ್ತಿದೆ. ಯುವಕರು ಡ್ರಗ್ಸ್ ಹವ್ಯಾಸಕ್ಕೆ ಮಾರುಹೊಗುವುದನ್ನು ನಿಲ್ಲಿಸುವ ದೃಷ್ಟಿಯಿಂದ ಅಥವಾ ಅರಿವು ಮೂಡಿಸುವ ದೃಷ್ಟಿಯಿಂದ. ಯುವಕರು ಮತ್ತೆ ವ್ಯಸನವನ್ನು ಬಿಟ್ಟು ಆರೋಗ್ಯವಂತರಾಗಿ ಚೆನ್ನಾಗಿ ಇರಬೇಕು ಎಂಬ ನಿಟ್ಟಿನಲ್ಲಿ ಮ್ಯಾರಥಾನ್ ನಡೆಸಲಾಗುತ್ತದೆ. ಜ, 12 ರಂದು ಬಾಂಬೆ ಮ್ಯಾರಥಾನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದಕ್ಕೆ ಬೇರೆ ಬೇರೆ ಊರುಗಳಿಂದ ಬಂದು ಭಾಗವಹಿಸಲಿ ಎಂದು ಇಚ್ಛಿಸುತ್ತೇನೆ. ಯುವಕರು ವ್ಯಸನಕ್ಕೆ ಬಲಿಯಾದರೆ ಅವರಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಡ್ರಕ್ಸ್ ದಂಧೆಯಲ್ಲಿ ಭಾಗಿಯಾಗುತ್ತಾರೋ ಅವರಿಗೆ ಜೈಲು ಶಿಕ್ಷೆ ಖಂಡಿತ ಆಗುತ್ತದೆ.
ಸ್ವಾಮಿ ವಿವೇಕಾನಂದರು ನುಡಿಯಂತೆ ಯುವಕರು ದೇಶ ಕಟ್ಟುವ ಶಕ್ತಿ ಬೆಳಸಿ ಕೊಳ್ಳಬೇಕು . 28 ವರ್ಷದ ವಯಸ್ಸಿನ ಯುವಕರು ಭಾರತದಲ್ಲಿ ಹೆಚ್ಚಿಗೆ ಇದ್ದಾರೆ. ಅವರು ಈ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಗುಬ್ಬಿಯು ಕ್ರೀಡೆಯನ್ನು ಉತ್ತೇಜಿಸುವ ತಾಲೂಕು ಆಗಿರುವುದರಿಂದ ಒಂದಲ್ಲ ಒಂದು ರೀತಿಯ ಕ್ರೀಡೆಗಳನ್ನು ಈ ತಾಲೂಕಿನಲ್ಲಿ ಸಂಘಟನೆ ಮಾಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಓಟ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ಮಾಡಿದಾಗ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನದಲ್ಲಿ ಹೃದಯಘಾತವು ಹೆಚ್ಚು ಸಂಭವಿಸುತ್ತಿದ್ದು ಪ್ರಮುಖವಾಗಿ ನಾವು ಸೇವಿಸುವ ಆಹಾರ ಕಾರಣವಾಗಿದೆ. ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಚಟುವಟಿಕೆಗಳನ್ನು ಮಾಡುತ್ತಿದೆ. ಇನ್ನೂ ಹೆಚ್ಚು ಕ್ರೀಡಾ ಮತ್ತು ಸಮಾಜಿಕ ಚಟುವಟಿಕೆಗಳನ್ನು ಮಾಡಲಿ ಎಂದು ಹೇಳಿದರು.
ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮಾತನಾಡಿ, ಜೀವನದಲ್ಲಿ ಸಮಯ ಅತ್ಯಮೂಲ್ಯವಾದದ್ದು, ಸಮಯದ ಸದುಪಯೋಗ ಮಾಡಿಕೊಂಡು ನಿಮ್ಮ ಹೇಳ್ಗೆಗೆ ಬಳಸಿಕೊಳ್ಳಬೇಕು, ಪ್ರತಿದಿನ ಒಂದು ಗಂಟೆಯಾದರೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯಾಯಾಮ,ಯೋಗ, ಕ್ರೀಡೆ ಮುಂತಾದವುಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ವಿವೇಕಾನಂದ ಸ್ಪೋರ್ಟ್ಸ್ ಒಳ್ಳೆಯ ಕೆಲಸ ಮಾಡಿ ಮ್ಯಾರಥಾನ್ ಮಾಡಿರುವುದು ಆರೋಗ್ಯದ ಕಾಳಜಿಯನ್ನು ಮೆಚ್ಚಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಆರ್.ಚಂದ್ರಶೇಖರ್, ಬಿ.ಕೆ.ಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ವೃತ್ತ ನಿರೀಕ್ಷಕ ಟಿ.ಆರ್.ರಾಘವೇಂದ್ರ , ತಹಸೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಆಯೋಜಕರಾದ ಪ್ರಸನ್ನ ಕುಮಾರ್, ಚಿದಾನಂದ್,ಚಾಲುಕ್ಯ ನ್ಯೂಸ್ ಪ್ರಸನ್ನ ದೊಡ್ಡಗುಣಿ, ಗುಬ್ಬಿ ಕ್ರಿಯೇಟಿವ್ ಅಭಿಷೇಕ್, ಅಚಲ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು,
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.