Document

Gubbi: ರಾತ್ರೋರಾತ್ರಿ ಮನೆಗೆ ನುಗ್ಗಿ 22 ಲಕ್ಷದ ಚಿನ್ನ ದೋಚಿದ ಕಳ್ಳರು.

Janataa24 NEWS DESK 

 

Gubbi: ರಾತ್ರೋರಾತ್ರಿ ಮನೆಗೆ ನುಗ್ಗಿದ ದರೋಡೆಕೋರರು.! ದೋಚಿಕೊಂಡು ಹೋಗಿದ್ದು ಮಾತ್ರ ಬರೋಬ್ಬರಿ 22 ಲಕ್ಷ ಮೌಲ್ಯದ 280 ಗ್ರಾಂ ಚಿನ್ನದ ಒಡವೆ.!

Gubbi: ರಾತ್ರೋರಾತ್ರಿ ಮನೆಗೆ ನುಗ್ಗಿ 22 ಲಕ್ಷದ ಚಿನ್ನ ದೋಚಿದ ಕಳ್ಳರು

ಗುಬ್ಬಿ : ರಾತ್ರೋರಾತ್ರಿ ಮನೆಗೆ ನುಗ್ಗಿದ ದರೋಡೆಕೋರರು ಬರೋಬ್ಬರಿ 22 ಲಕ್ಷ ಬೆಲೆ ಬಾಳುವ 280 ಗ್ರಾಂ ಚಿನ್ನದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಡವನ ಪಾಳ್ಯ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಕೆ ಬಂದಿದೆ.

 

ತಾಲೂಕಿನ ನಿಟ್ಟೂರು ಹೋಬಳಿಯ ಬಡವನಪಾಳ್ಯ ಗ್ರಾಮದ ವಾಸಿ ಆನಂದ ಬಿನ್ ಬೋರಯ್ಯ ಎಂಬಾತ ತನ್ನ ಹೆಂಡತಿ ಪುಟ್ಟಮ್ಮ ಎಂಬಾಕೆಯ ಜೊತೆ ತನ್ನ ಮುದ್ದು ಮಗಳು ಶೃತಿ ಎಂಬಾಕೆಯ ಹೆರಿಗೆಯ ಸಮಯದ ನಿಮಿತ್ತ ಇಬ್ಬರೂ ತುಮಕೂರಿಗೆ ತೆರಳಿದ್ದು ಸರಿಯಷ್ಟೇ ಆದರೆ ಇದನ್ನೇ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರ ಗುಂಪು ರಾತ್ರೋರಾತ್ರಿ ಆನಂದಯ್ಯ ಎಂಬುವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವುದು ದಿನಾಂಕ 13- 9- 2025 ರ ಬೆಳಗ್ಗೆ ಬೆಳಕಿಗೆ ಬಂದಿದೆ.

 

ಎರಡು ದಿನಗಳ ಹಿಂದೆ ತನ್ನ ಮಗಳನ್ನು ಹೆರಿಗೆಗೆ ಬಿಟ್ಟಿದ್ದ ಆನಂದಯ್ಯ ಮತ್ತು ಹೆಂಡತಿ ತನ್ನ ಮಗಳ ಮನೆಯಲ್ಲೆ ಉಳಿದುಕೊಂಡಿದ್ದು 13- 9- 2025 ರ ಬೆಳಗ್ಗೆ 7:00 ಸಮಯದಲ್ಲಿ ತಮ್ಮ ಸ್ವಗ್ರಾಮ ಬಡವನಪಾಳ್ಯ ಗ್ರಾಮದ ಆನಂದಯ್ಯ ತಮ್ಮ ಕುಮಾರ್ ಫೋನ್ ಮಾಡಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದು ದಂಪತಿಗಳಿಬ್ಬರೂ ಯಾವುದೇ ಅನಾಹುತ ಎದುರಾಗದೆ ಮಗಳ ಹೆರಿಗೆಯಿಂದ ಸಂತಸಪಟ್ಟಿದ್ದ ಕುಟುಂಬಕ್ಕೆ ಕಳ್ಳತನ ನಡೆದ ಘಟನೆಯಿಂದ ಬರಸಿಡಿಲು ಬಡಿದಂತಾಗಿದ್ದು ಮಾತ್ರ ನಿಜ.ಕೂಡಲೇ ಮಗಳ ಮನೆಯಿಂದ ಬಂದು ನೋಡಲಾಗಿ ಬಾಗಿಲು ಒಡೆದು ಒಳನುಗಿರುವ ಕಳ್ಳರಿಂದ ಬರೋಬ್ಬರಿ 280 ಗ್ರಾಂ ಚಿನ್ನ ಕಳುವಾಗಿರುವುದು ತಿಳಿದುಬಂದಿದೆ.

 

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಚೇಳೂರು ಪಿಎಸ್ಐ ನಾಗರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

 

ಅದೇನೇ ಇರಲಿ ಇತ್ತೀಚಿಗೆ ಗುಬ್ಬಿ ತಾಲೂಕಿನಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಿ ಪಟ್ಟಣದ ಮಹಾಲಕ್ಷ್ಮಿನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಚಿನ್ನದ ಒಡವೆ ಮತ್ತು ಹಣದೋಚಿ ಪರಾರಿಯಾಗಿದ್ದ ಪ್ರಕರಣ ಮಾಸುವ ಮುನ್ನವೇ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಹೋಬಳಿಯ ಬಡವನ ಪಾಳ್ಯ ಗ್ರಾಮದಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಬರೋಬ್ಬರಿ 22 ಲಕ್ಷ ಮೌಲ್ಯದ 280 ಗ್ರಾಂ ಚಿನ್ನದ ಒಡವೆಗಳನ್ನು ದೋಚಿರುವುದು ಮತ್ತೊಮ್ಮೆ ತಾಲೂಕಿನ ಜನತೆಯನ್ನು ಭಯಭೀತರನ್ನಾಗಿ ಮಾಡಿದೆ.

 

ವರದಿ :ಶ್ರೀಕಾಂತ್ ಗುಬ್ಬಿ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *