Document

Gubbi:ಅದ್ದೂರಿಯಾಗಿ ಜರುಗಿದ ನಿಟ್ಟೂರು ಮರಿಯಮ್ಮ ಜಾತ್ರಾ ಮಹೋತ್ಸವ.

Janataa24 NEWS DESk

Gubbi: ಅದ್ದೂರಿಯಾಗಿ ಜರುಗಿದ ನಿಟ್ಟೂರು ಮರಿಯಮ್ಮ ಜಾತ್ರಾ ಮಹೋತ್ಸವ.

Gubbi
ಮರಿಯಮ್ಮ ಜಾತ್ರಾ ಮಹೋತ್ಸವ.

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಗ್ರಾಮ ದೇವತೆಗಳಾದ ಮರಿಯಮ್ಮ(Mariyamma) ಹಾಗೂ ದುರ್ಗಮ್ಮದೇವಿಯವರ ಕಲ್ಲುಗಾಲಿ ರಥೋತ್ಸವವು ಗುರುವಾರ ಅದ್ದೂರಿಯಾಗಿ ನೆರೆವೇರಿತು. ಜಾತ್ರೆಯ ಅಂಗವಾಗಿ ಬುಧವಾರ ರಾತ್ರಿ ಅಮ್ಮನವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಭಕ್ತಾದಿಗಳು ಮನೆ ಮುಂದೆ ಅಮ್ಮನವರಿಗೆ ಪೂಜೆ ಸಲ್ಲಿಸಿ ಮಡಿಲಕ್ಕಿ ಅರ್ಪಿಸಿದರು. ಬೆಳಗಿನ ಜಾವ ಮುತ್ತೈದೆಯರು ಹೊಂಬಾಳೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಆರತಿಗಳನ್ನು ಮೆರವಣಿಗೆಯಲ್ಲಿ ದೇವಾಲಯದ ಬಳಿ ತಂದಿದ್ದರು. ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯದ ಮುಂಭಾಗ ಸಿದ್ದಪಡಿಸಿದ್ದ ಅಗ್ನಿಕೊಂಡ ಕಾರ್ಯಕ್ರಮ ನೆರವೇರಿತು.

ಅಮ್ಮನವರನ್ನು ಪುಷ್ಪಾಲಂಕೃತ ಕಲ್ಲಿನಗಾಲಿ ರಥದಲ್ಲಿ ಕೂರಿಸಿ ಮಹಾ ಮಂಗಳಾರತಿ ಮಾಡಲಾಯಿತು. ರಥೋತ್ಸವಕ್ಕೆ ನಿಗದಿಪಡಿಸಿದ್ದ ಶುಭ ಮಹೂರ್ತದಲ್ಲಿ ಸಾವಿರಾರು ಭಕ್ತರು ಅಮ್ಮನವರಿಗೆ ಜೈಕಾರ ಹಾಕುತ್ತಾ ರಥವನ್ನು ಮುಂದಕ್ಕೆ ಎಳೆದರು.

ರಥವು ಮುಂದೆ ಚಲಿಸಿದಂತೆ ಭಕ್ತಾದಿಗಳು ದವನ ಚುಚ್ಚಿದ ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು. ರಥೋತ್ಸವದ ನಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.ಗುರುವಾರ ಹಗಲು ಪರಿಷೆ ಇದ್ದು, ಜಾತ್ರೆಯಲ್ಲಿದ್ದ ಅಂಗಡಿಗಳಲ್ಲಿ ಭಕ್ತಾದಿಗಳು ಖರೀದಿಯಲ್ಲಿ ತೊಡಗಿದ್ದರು. ಈ ಎಲ್ಲಾ ಕಾರ್ಯಕ್ರಮಗಳು ಗ್ರಾಮದ ಎಲ್ಲಾ ಕೋಮುಗಳ ಮುಖಂಡರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿದವು.

ವರದಿ : ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Jaggi Vasudev :ಜಗ್ಗಿ ವಾಸುದೇವ್ ಮೆದುಳಿನಲ್ಲಿ ರಕ್ತ ಸ್ರಾವ ದೆಹಲಿ ಅಪೋಲೋ ಆಸ್ವತ್ರೆಯಲ್ಲಿ ಚಿಕಿತ್ಸೆ

Document

Leave a Reply

Your email address will not be published. Required fields are marked *