Document

Gubbi: ಅಲ್ಪಸಂಖ್ಯಾತರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ

JANATAA24 NEWS DESK 

 

 

Gubbi: ಅಲ್ಪಸಂಖ್ಯಾತರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ.

 

Gubbi minority janataa24 news

ಗುಬ್ಬಿ: ಅಲ್ಪಸಂಖ್ಯಾತ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಪವಾಡ ರಹಸ್ಯ ಬಯಲು ಚಿಂತಕ ಹುಲಿಕಲ್ ನಟರಾಜು ತಿಳಿಸಿದರು.

 

ತಾಲೂಕಿನ ಕಡಬ ಹೋಬಳಿ ನಾಗಸಂದ್ರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಿಂದ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ದೆವ್ವ ಭೂತ ಮಾಟ ಮಂತ್ರಕ್ಕೆ ಹೆದರಬೇಡಿ, ವಿಜ್ಞಾನ ಮುಂದುವರೆದಂತೆ ಮಾಟ ಮಂತ್ರ ಮುಂತಾದವುಗಳಿಂದ ಮನುಷ್ಯರನ್ನು ಏನು ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅರಿತುಕೊಂಡು ತಂತ್ರಜ್ಞಾನ ವಿಜ್ಞಾನಕ್ಕೆ ಹೊಂದಿಕೊಂಡು ಜೀವನ ಸಾಗಿಸಬೇಕು.ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವುದರಿಂದ ಸರ್ಕಾರಿ ಶಾಲೆಗಳು ಅವನತ್ತಿ ಹಂತಕ್ಕೆ ತಲುಪುತ್ತೇವೆ. ವಿದ್ಯಾರ್ಥಿಗಳು ಇಪ್ಪತ್ತು ವರ್ಷ ಸತತವಾಗಿ ಅಭ್ಯಾಸ ಮಾಡಿದರೆ ಎಂಬತ್ತು ವರ್ಷ ವೈಷಾರಾಮಿ ಜೀವನ ಮಾಡಲು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 

ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್.ನಟರಾಜು ಮಾತನಾಡಿ, ಪೋಷಕರು ಮಕ್ಕಳ ಭೌದ್ಧಿಕ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು.ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸಬೇಕು. ಪರೀಕ್ಷೆ ಸಮಯದಲ್ಲಿ ಟಿವಿ ಮೊಬೈಲ್ ಗಳಿಂದ ದೂರ ಉಳಿದು ಅಭ್ಯಾಸದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.

ಉಪಪ್ರಾಂಶುಪಾಲರಾದ ವಂತಕುಮಾರಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ನಿರಂತರ ಅಭ್ಯಾಸದಲ್ಲಿ ತೋಡಗಿದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಪ್ರಾಚಾರ್ಯರಾಗಿ ಸಿ.ಮಹಾಲಿಂಗಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ

ಡಿ.ಪ್ರತಾಪ್(ರಾಮು), ಎಸ್.ಡಿ.ಎಂ.ಸಿ.ಅಧ್ಯಕ್ಷರ ಜಯಶಂಕರ್, ಮುಖಂಡರಾದ ಅಲೀಂಉಲ್ಲಾ, ರಂಘನಂದನ್, ಶ್ರೀಧರ್, ಪ್ರಕಾಶ್, ಫಜ್ಲು ಉದ್ದೀನ್, ಕರಿಂಬಾಷಾ, ಕುಮಾರ್, ರಾಜ್ಯ ಸಮಿತಿ ಸತೀಶ್, ಸುಧಾ, ಗ್ರಾಪಂ ಸದಸ್ಯ ಎಲ್.ಕೆ.ರಾಜಣ್ಣ,ಕಾಳಪ್ಪ, ಉಪನ್ಯಾಸಕರಾದ ರಂಗಸ್ವಾಮಿ, ಶಾಂತರಾಜು, ಸಿದ್ದಲಿಂಗಪ್ಪ, ಶಿವರಾಜು, ಸಂದೇಶ, ಶಿಕ್ಷಕರಾದ ಬೀರೇಂದ್ರ, ಈಶ್ವರಯ್ಯ,ಶೈಲಜ, ರೋಹಿಣಿ, ನಂಜುಂಡಸ್ವಾಮಿ,ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಮತ್ತಿತರರು ಇದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *