JANATAA24 NEWS DESK
Gubbi: ಮಾದಾರ ಮಹಾಸಭಾ ಹೋಬಳಿ ಘಟಕದ ಅಧ್ಯಕ್ಷರಾಗಿ ಮಡೇನಹಳ್ಳಿ ದೇವರಾಜು ಅವಿರೋಧ ಆಯ್ಕೆ.

ಗುಬ್ಬಿ: ಮಾದಿಗ ಸಮುದಾಯದ ಸಂಘಟನೆಯನ್ನು ಬೆಳೆಸುವ ಉದ್ದೇಶದಲ್ಲಿ ಮಾದಾರ ಮಹಾಸಭಾ ತಾಲ್ಲೂಕು ಘಟಕ ನಡೆಸಿದ ಹೋಬಳಿ ಘಟಕದ ಸಮಿತಿ ರಚನೆಯಲ್ಲಿ ಕಸಬ ಹೋಬಳಿ ಅಧ್ಯಕ್ಷರಾಗಿ ಮಡೇನಹಳ್ಳಿ ದೇವರಾಜು ಮತ್ತು ಉಪಾಧ್ಯಕ್ಷರಾಗಿ ಬಿಕ್ಕೆಗುಡ್ಡ ವಿದ್ಯಾಸಾಗರ್ ಅವಿರೋಧ ಆಯ್ಕೆಯಾದರು.
ತಾಲ್ಲೂಕಿನ ಕಸಬ ಹೋಬಳಿ ಬಿಕ್ಕೆಗುಡ್ಡ ಗ್ರಾಮದ ಬಸವೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಮಾದಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೊಡಿಯಾಲ ಮಹದೇವು ನೇತೃತ್ವದಲ್ಲಿ ನಡೆದ ಕಸಬ ಹೋಬಳಿ ಘಟಕದ ಶಾಖೆಯನ್ನು ರಚಿಸಲು ಚರ್ಚೆ ನಡೆಸಿದರು. ಅಂತಿಮವಾಗಿ ಎಲ್ಲಾ ಪದಾಧಿಕಾರಿಗಳು ಆಯ್ಕೆಯನ್ನು ಅವಿರೋಧವಾಗಿ ನಡೆಸಲಾಯಿತು.
ಅಧ್ಯಕ್ಷ ಕೊಡಿಯಾಲ ಮಹದೇವು ಮಾತನಾಡಿ ರಾಜ್ಯದಲ್ಲಿ ಬಹುಸಂಖ್ಯೆಯ ಮಾದಿಗ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಹಿಂದೆ ಸರಿದಿದೆ ಈ ಹಿನ್ನಲೆ ಗ್ರಾಮೀಣ ಭಾಗದಲ್ಲಿ ಮೇಲುಗೈ ಸಾಧಿಸಲು ಪ್ರಜ್ಞಾವಂತ ಯುವಕರ ಸಂಘಟನೆ ನಡೆಸಿದ್ದೇವೆ. ಈ ಕಾರ್ಯಕ್ಕೆ ಕಸಬಾ ಹೋಬಳಿ ಶಾಖೆಯಲ್ಲಿ ಯುವ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲರೂ ಒಗ್ಗೂಡಿ ನಮ್ಮ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಹಿರಿಯ ಉಪಾಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ ಮಾದಾರ ಮಹಾಸಭಾ ನಮ್ಮ ಜನಾಂಗದ ಉನ್ನತಿಗೆ ಶ್ರಮಿಸಲಿದೆ. ಸಚಿವ ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪಕ್ಷದ ನಮ್ಮ ಜನಾಂಗದ ಮುಖಂಡರನ್ನು ಒಗ್ಗೂಡಿಸಿ ಸಭಾ ಚಟುವಟಿಕೆ ಆರಂಭಿಸಿದ್ದಾರೆ. ನಮ್ಮ ಶಕ್ತಿ ಒಗ್ಗಟ್ಟು ಪ್ರದರ್ಶನ ಮಾಡಿ ನಮ್ಮಲ್ಲೇ ಇರುವ ಬಡವರನ್ನು ನಮ್ಮ ಜೊತೆ ಮೇಲೆತ್ತುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ತಾಲೂಕು ಪೋಷಕ ಸಮಿತಿಯ ಚೇಳೂರು ಶಿವನಂಜಪ್ಪ ಮಾತನಾಡಿ ಬಹಳಷ್ಟು ವರ್ಷಗಳ ಕಾಲದಿಂದಲೂ ನಮ್ಮ ದಲಿತ ಕುಟುಂಬಗಳು ಬರೀ ಹೋರಾಟದಲ್ಲಿಯೇ ಕಾಲ ಕಳೆದು ಜೀವನ ಸವೆಸಿದ್ದು ಆದರೆ ಮುಂದಿನ ದಿನಗಳಲ್ಲಿ ನಾವುಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಲು ಮಾದಾರ ಮಹಾಸಭಾ ದಂತಹ ಯಶಸ್ವಿ ಕಾರ್ಯಕ್ಕೆ ನಮ್ಮ ಸಮುದಾಯದ ಹಿರಿಯ ರಾಜಕಾರಣಿಗಳು ಮುಂದಾಗಿದ್ದು ಸಮುದಾಯದ ಬೆಳವಣಿಗೆಗೆ ಪ್ರಮುಖ ಸಾಕ್ಷಿಯಾಗಿದೆ ಎಂದರು.
ಕಸಬ ಹೋಬಳಿಯ ಅಧ್ಯಕ್ಷರಾಗಿ ಮಡೇನಹಳ್ಳಿ ದೇವರಾಜ್, ಉಪಾಧ್ಯಕ್ಷರಾಗಿ ವಿದ್ಯಾಸಾಗರ್, ಕಾರ್ಯದರ್ಶಿಯಾಗಿ ಕಾಳೇನಹಳ್ಳಿ ಮಾದೇಶ್, ಸಂಘಟನಾ ಕಾರ್ಯದರ್ಶಿಯಾಗಿ ಚಿಕ್ಕೋನಹಳ್ಳಿ ನರಸಿಂಹಮೂರ್ತಿ, ಖಜಾಂಚಿಯಾಗಿ ಎಸ್.ಕೊಡಗಿಹಳ್ಳಿ ಚಂದ್ರಣ್ಣ, ಕಾರ್ಯಕಾರಿ ಸಮಿತಿಯಲ್ಲಿ ತಮ್ಮಯ್ಯ, ಕೃಷ್ಣಮೂರ್ತಿ, ಶಿವಶಂಕರ್ ಹಾಗೂ ಪೋಷಕರ ಸಮಿತಿಗೆ ದೊಡ್ಡಯ್ಯ, ಕೃಷ್ಣಮೂರ್ತಿ, ನಂಜುಂಡಯ್ಯ, ಬಸವರಾಜ್, ಪ್ರದೀಪ್, ಹೊಸಹಳ್ಳಿ ಕೃಷ್ಣಮೂರ್ತಿ, ರಮೇಶ್, ಕೃಷ್ಣಮೂರ್ತಿ, ಶಿವನಾಗ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಆನಂದ್, ಜಿ.ವಿ.ಮಂಜುನಾಥ್, ಫಣೀಂದ್ರ, ಹೊಸಹಳ್ಳಿ ರವೀಶ್,ನರಸೀಯಪ್ಪ,ಬಿಕ್ಕೆಗುಡ್ಡ ಕೃಷ್ಣಪ್ಪ, ಇತರರು ಇದ್ದರು .
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.