JANATAA24 NEWS DESK
Gubbi: ಅಪ್ರಾಪ್ತ ಮಗುವಿಗೆ ತಂದೆ ತಾಯಿಯನ್ನು ಕೊಲೆ ಮಾಡಲು ಪ್ರಚೋದನೆ–ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಗುಬ್ಬಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಗುವಿಗೆ ತನ್ನ ತಂದೆ ತಾಯಿಯನ್ನು ಕೊಲೆ ಮಾಡಲು ಪ್ರಚೋದನೆ ನೀಡಿ ಮುಗ್ಧ ಮನಸ್ಸಿನ ಮಕ್ಕಳಿಗೆ ವಿಷ ಬೀಜ ಬಿತ್ತುತ್ತಿರುವ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ತಾಲೂಕಿನ ಕಡಬ ಹೋಬಳಿ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ರಾಮಯ್ಯ ಬಿನ್ ಮಾಯಿಗಯ್ಯ ಅವರು ಗ್ರಾಮದಲ್ಲಿ ವೈಯಕ್ತಿಕ ಜಗಳವಾದ ಹಿನ್ನೆಲೆಯಲ್ಲಿ ರಾಮಯ್ಯ ಅವರು ಅಪ್ರಾಪ್ತ ಬಾಲಕ ವೇದಾಂತ್ ಗೆ ನಿಮ್ಮ ಅಪ್ಪ ಅಮ್ಮ ಇಟ್ಟಿರುವ ಒಡವೆಯನ್ನು ತೆಗೆದುಕೊಂಡು ಬಾ ಸಿಹಿ ತಿಂಡಿಗಳನ್ನು ನೀಡುತ್ತೇವೆ ಹಾಗೂ ನಿಮ್ಮ ಅಪ್ಪ ಅಮ್ಮನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡು ಎಂದು ಹೇಳಿಕೊಡುತ್ತರೆ ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಉಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಪ್ರದೀಪ್ ಕುಮಾರ್ ಸರಸ್ವತಿ ತಿಳಿಸಿದ್ದಾರೆ.
ನೊಂದ ಮಹಿಳೆ ಸರಸ್ವತಿಮಾಧ್ಯಮ ದವರೊಂದಿಗೆ ಮಾತನಾಡಿ ನನಗೂ ನನ್ನ ಗಂಡ ಮಕ್ಕಳಿಗೂ ಪ್ರಾಣ ಬೆದರಿಕೆ ಇದ್ದು ಇದಕ್ಕೆ ಮೂಲ ಕಾರಣ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಲಕ್ಷ್ಮಿ ನಾರಾಯಣಪ್ಪ ಮತ್ತು ಆತನ ಮಕ್ಕಳು ನಮ್ಮ ಪ್ರಾಣಕ್ಕೆ ಯಾವುದೇ ತೊಂದರೆಯಾದರೂ ಇವರೇ ನೇರ ಕಾರಣವಾಗುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧಪಟ್ಟ ಪ್ರಕರಣವು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮುಗ್ಧ ಮನಸ್ಸಿನ ಮಕ್ಕಳಿಗೆ ವಿಷ ಬೀಜ ಬಿತ್ತುತ್ತಿರುವ ಇಂತಹ ವ್ಯಕ್ತಿಗಳಿಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ : ಶ್ರೀಕಾಂತ್ ಗುಬ್ಬಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.