Document

Gubbi: ಜಗತ್ತಿಗೆ ನೆಮ್ಮದಿ ಕೊಟ್ಟ ಹಿಂದೂ ಧರ್ಮ ಅಳಿಯಲು ಸಾಧ್ಯವಿಲ್ಲ – ಬಿ.ಎಲ್.ಸಂತೋಷ್.

JANATAA24 NEWS DESK 

 

 

Gubbi: ಜಗತ್ತಿಗೆ ನೆಮ್ಮದಿ ಕೊಟ್ಟ ಹಿಂದೂ ಧರ್ಮ ಅಳಿಯಲು ಸಾಧ್ಯವಿಲ್ಲ – ಬಿ.ಎಲ್.ಸಂತೋಷ್.

Gubbi, b

ಗುಬ್ಬಿ : ದೇಶದ ಒಂದು ಲಕ್ಷ ಸ್ಥಳದಲ್ಲಿ ಹಿಂದೂ ಸಮಾಜೋತ್ಸವ ಏಕ ಕಾಲಕ್ಕೆ ನಡೆಯುತ್ತಿರುವ ಈ ಕಾಲದಲ್ಲಿ ಹಿಂದೂ ಧರ್ಮ ಹಾಳು ಮಾಡುವ ಮನಸ್ಥಿತಿಗಳು ಕೊರಗುತ್ತಿವೆ. ಇಡೀ ವಿಶ್ವಕ್ಕೆ ಶಾಂತಿ ಕೊಟ್ಟ ಹಿಂದೂ ಧರ್ಮ ಎಂದಿಗೂ ಅಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

 

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಬಳಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವಿಸಿ ಮಾತನಾಡಿದ ಅವರು ಧರ್ಮ ನಾಶಕ್ಕೆ ಕೆಲ ಮನಸ್ಥಿತಿಗಳು ಜಾತಿಗಳ ಮಧ್ಯೆ ಕಿತ್ತಾಟ, ಉಪ ಜಾತಿಗಳ ಮಧ್ಯೆ ಕಲಹ ಸೃಷ್ಟಿ ಮಾಡುತ್ತಿವೆ. ಇಂತಹ ವಿವಾದಿತ ಜನರಿಗೆ ಗಾಬರಿ ಹುಟ್ಟಿಸಿರುವುದು ಹಿಂದೂ ಸಮಾಜೋತ್ಸವ ಎಂದು ಹೇಳಿದರು.

 

ಪರಿಸರಕ್ಕೆ ತಕ್ಕಂತೆ ಸಮಾಜ ಕಟ್ಟಿಕೊಂಡ ಹಿಂದೂ ಧರ್ಮ ಎಷ್ಟು ವರ್ಷದ ಇತಿಹಾಸ ಎಂದು ಕಂಡು ಹಿಡಿಯುವುದು ಕಷ್ಟ. ಸಾಮರಸ್ಯ ಬದುಕು, ವಿದ್ಯೆ, ಜ್ಞಾನ, ಸಮರ್ಪಣೆ ಈ ಮೌಲ್ಯದಲ್ಲೇ ಬೆಳೆದ ಧರ್ಮ ನಮ್ಮದು. ಅಸಹಿಷ್ಣುತೆ ಎಂದಿಗೂ ನಮ್ಮ ಧರ್ಮದಲ್ಲಿ ಕಂಡಿಲ್ಲ. ಅನ್ಯ ಧರ್ಮದವರೂ ನಮ್ಮೊಂದಿಗೆ ನೆಮ್ಮದಿ ಕಂಡ ದಿನಗಳು ಇವೆ. ಆದರೆ ಹಿಂದೂ ಧರ್ಮದಲ್ಲಿನ ಕೆಲ ಪದ್ಧತಿ ಆಚಾರ ವಿಚಾರಗಳ ಭಿನ್ನಾಭಿಪ್ರಾಯವನ್ನು ಬಂಡವಾಳ ಮಾಡಿಕೊಂಡ ಮೊಗಲರು, ಪಾಶ್ಚಿಮಾತ್ಯರು ನಮ್ಮನ್ನೇ ಆಳಿದರು. ಇನ್ನೆಂದಿಗೂ ದಾಸ್ಯಕ್ಕೆ ಒಳಗಾಗದ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ಹುಟ್ಟುಹಾಕಿದೆ. ಅದೇ ಹಾದಿಯಲ್ಲಿ ನಡೆದು ಹಿಂದೂ ಸಮಾಜವನ್ನು ಒಗ್ಗೂಡಿಸಿ ನಮ್ಮ ಅಸ್ತಿತ್ವ ಉಳಿಸಿ ಬೆಳೆಸೋಣ ಎಂದರು.

 

ನಮ್ಮಿಂದ ವಿಭಜಿತ ಎರಡೂ ಭೂ ಭಾಗವೂ ಎಂದಿಗೂ ನಮ್ಮದೇ ಆಗಿದೆ. ಪ್ರಸ್ತುತ ಎರಡೂ ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದ ಪರಿಣಾಮ ನಮ್ಮಿಂದ ದೂರ ಉಳಿದಿದೆ. ಅನ್ಯ ಧರ್ಮೀಯರ ಕೈಯಲ್ಲಿದೆ. ಆದರೆ ಸಮಾಜೋತ್ಸವ ಮೂಲಕ ನಮ್ಮದೇ ಆದ ಎರಡೂ ದೇಶ ಮರಳಿ ಪಡೆಯುತ್ತೇವೆ ಎಂದ ಅವರು ಇತಿಹಾಸ ಮರೆತ ಪೀಳಿಗೆಗಳಿಂದ ದೇಶ ಹಾಳಾಗುತ್ತದೆ. ದ್ವೇಷ ಭಾಷಣ ವಿದೇಕ ಮಂಡನೆ ಮಾಡಿದ ಸರ್ಕಾರ ನಮ್ಮ ಭಾಷಣವನ್ನು ದ್ವೇಷ ಎಂದು ಹೇಳಲಾಗದು. ನಮ್ಮ ಸತ್ಯವಾದ ಮಾತು ಇತಿಹಾಸವಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಧರ್ಮ ಮತ್ತೊಮ್ಮೆ ಶೃತಿ, ಲಯ, ಬದ್ಧತೆ ಜೊತೆ ನಡೆ ಕಂಡು ಕೊಳ್ಳುತ್ತಿದೆ. ಹಿಂದೂ ಧರ್ಮದ ಜನರ ಸಂಖ್ಯೆ ಕಡಿಮೆಯಾದ ಸ್ಥಳದಲ್ಲಿ ಯಾವ ರಾಜಕೀಯ ಪಕ್ಷದ ಹಿಂದೂ ಅಭ್ಯರ್ಥಿ ಗೆಲ್ಲುವುದಿಲ್ಲ. ಈ ಸತ್ಯ ಅರಿತು ಹಿಂದೂಗಳು ಒಗ್ಗೂಡಿ ಎಂದು ಕರೆ ನೀಡಿದರು.

 

ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಆಧ್ಯಾತ್ಮಿಕತೆ ಈ ದೇಶದ ಅಡಿಪಾಯ. ಹಿಂದೂ ಧರ್ಮ ಸದೃಢವಾದಲ್ಲಿ ಮಾತ್ರ ದೇಶ ಉಳಿಯುತ್ತದೆ. ಸಂಸ್ಥಾಪಕರಿಲ್ಲದ ಹಿಂದೂ ಧರ್ಮದ ಇತಿಹಾಸ ಬಲ್ಲವರಿಲ್ಲ. ಸನಾತನ ಧರ್ಮ ಎನಿಸಿರುವ ನಮ್ಮ ಹಿಂದೂ ಸಮಾಜ ಆರೋಗ್ಯವಂತ ದೇಶವಾಗಿದೆ. ಧಾರ್ಮಿಕತೆ ಮೂಲಕ ನಮ್ಮ ಧರ್ಮ ಎಲ್ಲಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮರಸ್ಯ ಬದುಕು ಕಂಡು ಕೊಂಡಿದ್ದಾನೆ. ಅದೇ ರೀತಿ ಬೇರೆ ಧರ್ಮಕ್ಕೂ ಬೆಲೆ ನೀಡಿ ಜೀವನ ನಡೆಸುವಾಗ ನಮ್ಮ ಮೇಲೆ ದಾಳಿ ನಡೆಯುವುದು. ಧರ್ಮ ನಾಶಕ್ಕೆ ಸಂಚು ಮಾಡುವುದು ವಿನಾಶ ಕಾಲೆ ವಿಪರೀತ ಬುದ್ಧಿ ಎಂಬಂತಾಗಿದೆ. ಈಗಲಾದರೂ ನಮ್ಮಲ್ಲಿ ಒಗ್ಗಟ್ಟು ಮೂಡಲಿ ಎಂದರು.

 

ಇದೇ ಸಂದರ್ಭದಲ್ಲಿ ಉಚಿತ ಟೈಲರಿಂಗ್ ಕಲಿಸುವ ಸೌಭಾಗ್ಯಮ್ಮ, ಪಾದರಕ್ಷೆ ಕಾಯಕದ ನರಸಿಂಹಮೂರ್ತಿ ಹಾಗೂ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಸಿದ್ಧಪಡಿಸುವ ಕೋಲಕಾರ ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಗುರುನಾಗಲಿಂಗೇಶ್ವರಸ್ವಾಮಿ ದೇವಾಲಯದಿಂದ ಭಾರತಮಾತೆ ಭಾವಚಿತ್ರ ಹಾಗೂ ಕೆಲ ಗ್ರಾಮದೇವತೆ ಮೆರವಣಿಗೆ ಉತ್ಸವಗಳು ಕಲಾ ತಂಡದೊಂದಿಗೆ ಸಾಗಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ತಲುಪಿತ್ತು.

 

ಕಾರ್ಯಕ್ರಮದಲ್ಲಿ ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೆಶ್ವರ ಸ್ವಾಮೀಜಿ, ತೊರೆ ಮಠದ ಶ್ರೀ ಅಟವಿ ಚನ್ನಬಸವೇಶ್ವರ ಸ್ವಾಮೀಜಿ, ಶಿವಗಂಗಾ ಮಹಾಲಕ್ಷ್ಮಿ ಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ಹಿರಿಯೂರು ಆದಿ ಜಾಂಬವ ಮಠದ ಶ್ರೀ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಒನಕಲ್ಲು ಮಠದ ಶ್ರೀ ಬಸವಮಹಾನಂದ ಸ್ವಾಮೀಜಿ, ಮೈತ್ರಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಚಂದ್ರ ಶೇಖರಬಾಬು, ಭೈರಪ್ಪ, ಸಮಾಜೋತ್ಸವ ಸಮಿತಿಯ ಇತರರುಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ

Turuvekere: ಫೆ.6ರಂದು ಕಣಕೂರಿನಲ್ಲಿ ಟಿ.ಟಿ.ಡಿ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ–ಬಾಲಾಜಿ ಕೆ. ಕುಮಾರ್. 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *